Survey officer: ಸರ್ವೆ ಅಧಿಕಾರಿ ಬಳಿ ಕೋಟಿ ಕೋಟಿ ಆಸ್ತಿ
Team Udayavani, Aug 23, 2023, 10:48 AM IST
ಬೆಂಗಳೂರು: ಲೋಕಾಯುಕ್ತ ಪೊಲೀಸರು ಕೆ.ಆರ್.ಪುರದ ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ನಿವಾಸ, ಕಚೇರಿ ಸೇರಿದಂತೆ 14 ಕಡೆ ದಾಳಿ ನಡೆಸಿ ಕೋಟ್ಯಂತರ ರೂ. ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.
ಮಂಗಳವಾರ ಬೆಳ್ಳಂ ಬೆಳಗ್ಗೆ ಕೆ.ಟಿ.ಶ್ರೀನಿವಾಸ್‌ಗೆ ಸೇರಿದ ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ 14 ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ಮನೆ ಯಲ್ಲಿ ಪತ್ತೆಯಾಗಿರುವ ದಾಖಲೆ ಪರಿಶೀಲಿಸಿದಾಗ 5 ಅಬಕಾರಿ ಪರವಾನಗಿ (ಲಿಕ್ಕರ್ ಲೈಸೆನ್ಸ್) ಹೊಂದಿರುವುದು ಬೆಳಕಿಗೆ ಬಂದಿದೆ.
ಶ್ರೀನಿವಾಸಮೂರ್ತಿ ಮೇಲೆ ದಾಳಿ ಏಕೆ?: ಕೆ.ಟಿ.ಶ್ರೀನಿವಾಸ್ ಮೂರ್ತಿ ಕೆ.ಆರ್.ಪುರ ತಾಲೂಕು ಕಚೇರಿಯ ಸರ್ವೆ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಭ್ರಷ್ಟಾಚಾರದಲ್ಲಿ ತೊಡಗಿ ಕೋಟ್ಯಂತರ ರೂ. ಸಂಪಾದಿಸಿರುವ ಬಗ್ಗೆ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಮಂಗಳವಾರ ಏಕಕಾಲದಲ್ಲಿ ಬೆಂಗಳೂರಿನ ಅಂಧ್ರಳ್ಳಿ ಯಲ್ಲಿರುವ ಶ್ರೀನಿವಾಸಮೂರ್ತಿ ನಿವಾಸ, ಸಹೋದರಿಯ ಹೆಣ್ಣೂರು ನಿವಾಸ, ಸಹೋದರನ ತುಮಕೂರಿನ ನಿವಾಸ, ಪತ್ನಿ ಹೆಸರಿನಲ್ಲಿ ಹೋಟೆಲ್, ಬೋರ್ಡಿಂಗ್ ಹೌಸ್ ಸೇರಿ 14 ಕಡೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಮಹತ್ವದ ದಾಖಲೆ ಜಪ್ತಿ ಮಾಡಿದ್ದಾರೆ.
ನಾಟಕದಲ್ಲಿ ಶ್ರೀಕೃಷ್ಣನ ಪಾತ್ರ:
ನಿರೀಕ್ಷೆಗೂ ಮೀರಿದ ಕೋಟ್ಯಂತರ ರೂ. ಸಂಪತ್ತು ಹೊಂದಿ ಲೋಕಾಯುಕ್ತ ಪೊಲೀಸರಿಗೆ ದಂಗಾಗುವಂತೆ ಮಾಡಿದ್ದ ಕೆ.ಆರ್.ಪುರ ತಹಶೀಲ್ದಾರನಾಗಿದ್ದ ಅಜಿತ್ ರೈ ಆಪ್ತ ಎನ್ನಲಾಗಿರುವ ಶ್ರೀನಿವಾಸಮೂರ್ತಿ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡುತ್ತಿದ್ದ. ಕೆ.ಆರ್. ಪುರ ತಾಲೂಕು ಕಚೇರಿಯಲ್ಲಿ ಅಜಿತ್ ರೈ ಜತೆಗೆ ಕೆಲಸ ಮಾಡುತ್ತಿದ್ದರು. ಅಜೀತ್ ರೈ ಮೇಲೆ ಈ ಹಿಂದೆ ದಾಳಿ ನಡೆದ ಬಳಿಕ ಎಚ್ಚೆತ್ತುಕೊಂಡಿದ್ದ ಶ್ರೀನಿವಾಸಮೂರ್ತಿ ತನ್ನ ಆಸ್ತಿ ದಾಖಲೆ ಗಳನ್ನು ಬೇರೆಡೆ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ದಾಖಲೆ ಗಳಿಗೂ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸೈಟ್, ಮನೆ, ಬಾರ್, ಹೋಟೆಲ್‌ಗಳು ಪತ್ತೆ:
ಅಂದ್ರಳ್ಳಿಯಲ್ಲಿ 2.70 ಲಕ್ಷ ರೂ. ಮೌಲ್ಯದ ನಿವೇಶನ, ಸಹೋದರಿ ಕೆ.ಟಿ ಪುಷ್ಪಲತಾ ಹೆಸರಿನಲ್ಲಿ ಬೆಂಗಳೂರಿನ ಹೆಣ್ಣೂರು ಗ್ರಾಮದಲ್ಲಿ 83.45 ಲಕ್ಷ ರೂ. ಮೌಲ್ಯದ ನಿವೇಶನ, ರಾಯಪುರದಲ್ಲಿ ಪತ್ನಿ ರಾಜೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಮೌಲ್ಯದ 5 ಗುಂಟೆ ಜಮೀನು ಬೋಗ್ಯಕ್ಕೆ ಪಡೆದಿರುವುದು, ಪತ್ನಿ, ಸಹೋದರಿ ಪಾಲುದಾರಿಕೆಯಲ್ಲಿ ಬಾಲಾಜಿ ಎಂಟರ್ ಪ್ರೈಸಸ್ ಎಂಬ 50 ಲಕ್ಷ ರೂ. ಮೌಲ್ಯದ ಸಿಎಲ್-7, ಹೋಟೆಲ್ ಹಾಗೂ ಬೋರ್ಡಿಂಗ್ ಹೌಸಸ್, ಪತ್ನಿ ರಾಜೇಶ್ವರಿ ಹೆಸರಿನಲ್ಲಿ ತುಮಕೂರಿನ ಗೋಳೂರಿ ಬಳಿಯ ಬಾಣಾವರದಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್, ಸಹೋದರಿ ಕೆ.ಟಿ.ಪುಷ್ಪಲತಾ ಹೆಸರಲ್ಲಿ ತುಮಕೂರಿನ ನಂಜೇಗೌಡನ ಪಾಳ್ಯದಲ್ಲಿ 20 ಲಕ್ಷ ರೂ. ಮೌಲ್ಯದ ಸಿಎಲ್-2 (ಬಾರ್),
ಸಹೋದರ ಕೆ.ಟಿ ವೆಂಕಟೇಗೌಡ ಹೆಸರಿನಲ್ಲಿ ತುಮಕೂರಿನ ಭೈರಸಂದ್ರದಲ್ಲಿ 25 ಲಕ್ಷ ರೂ. ಮೌಲ್ಯದ ಬಾರ್ ಆ್ಯಂಡ್ ರೆಸ್ಟೊರೆಂಟ್(ಸಿ.ಎಲ್-9), ಪತ್ನಿ ರಾಜೇಶ್ವರಿ ಹೆಸರಲ್ಲಿ 40 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ (ಸಿ.ಎಲ್-7), ಸಹೋದರಿ ಹೆಸರಿನಲ್ಲಿರುವ 10 ಲಕ್ಷ ರೂ. ಮೌಲ್ಯದ ಎಸ್ ಕ್ರಾಸ್ ಕಾರು, 60 ಲಕ್ಷ ರೂ. ಮೌಲ್ಯದ ನಿಮಾ¡ ಹಂತದ ಜಿ+2 ನಿರ್ಮಾಣ ಹಂತದ ಕಟ್ಟಡ, ಕೊತ್ತನೂರಿನಲ್ಲಿ 10 ಲಕ್ಷ ರೂ. ಮೌಲ್ಯದ ನಿವೇಶನ ಪತ್ತೆಯಾಗಿದೆ. ಒಟ್ಟು 2.86 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
MUST WATCH
ಹೊಸ ಸೇರ್ಪಡೆ
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.