Sirsi: ಗ್ರಾಮ ಪಂಚಾಯತ್ ಅಧ್ಯಕ್ಷರಾದರೂ ಮೂಲ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ…


Team Udayavani, Aug 23, 2023, 3:47 PM IST

Sirsi: ಮೂಲ ವೃತ್ತಿ ಗಾರೆ ಕೆಲಸವಾದರೂ… ವಾಸ್ತವವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು

ಶಿರಸಿ: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಂಜೂರಾದ ಆಶ್ರಯ ಮನೆಗಳನ್ನು ಹಂಚಿಕೆ ಮಾಡುವುದು ಗೊತ್ತು. ಮಂಜೂರು ಮಾಡಿರುವ ಆಶ್ರಯ ಮನೆಗಳನ್ನು ಹೇಗೆ ಕಟ್ಟಿದ್ದಾರೆ ಎಂದು ನೋಡಲೂ ಅಧ್ಯಕ್ಷರುಗಳಿಗೆ ಸಮಯ ಇಲ್ಲದಿರುವುದೂ ನೋಡಿದ್ದೇವೆ. ತಾನೇ ಮಂಜೂರು ಮಾಡಿದ ಆಶ್ರಯಮನೆಗಳನ್ನು ತಾನೇ ಕಟ್ಟಿ ಸ್ವತಃ ಗಾರೆ ಮಾಡುವುದನ್ನು ಎಲ್ಲಾದರೂ ನೋಡಿದ್ದೀರಾ ?

ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಇಂಥದೊಂದು ಅಪರೂಪದ ಅಧ್ಯಕ್ಷರಾಗಿದ್ದಾರೆ. ಗ್ರಾಮ ಪಂಚಾಯಿತಿಯ ತಿರುಗುವ ಖುರ್ಚಿಯಲ್ಲಿ ಕುಳಿತು ಮನೆ ಹಂಚಿಕೆ ಮಾಡಿ ಸುಮ್ಮನಾಗುವುದಿಲ್ಲ. ಊರೂರು ತಿರುಗಿ ತಾನೇ ಮಂಜೂರು ಮಾಡಿದ ಮನೆಗಳ ನಿರ್ಮಾಣ ಮಾಡಿ ಗಾರೆ ಕೆಲಸ ಮಾಡುತ್ತಾರೆ. ತನ್ನ ಅಡಿಯಲ್ಲಿ ಇರುವ ಗುತ್ತಿಗೆದಾರನ ಅಡಿಯಲ್ಲಿ ಕಾರ್ಮಿಕನಾಗಿ ಮತ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ !

ಪ್ರತಿ ಹಂತದ ಕಾಳಜಿ…
ವಾಸ್ತವವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಅವರ ಮೂಲ ವೃತ್ತಿ ಗಾರೆ ಕೆಲಸ. ಅವರ ತಂದೆ ಸೆಲ್ವೆಸ್ಟರ್ ರೆಬೆಲ್ಲೋ ಅವರ ಕಾಲದಿಂದಲೂ ಕೊಳಗಿಬೀಸ್, ಹೇರೂರು, ಗೋಳಿ ಭಾಗದಲ್ಲಿ ಮನೆ ನಿರ್ಮಾಣ, ಸಣ್ಣ ಕಟ್ಟಡ, ಕಂಪೌಂಡ್ ನಿರ್ಮಾಣ ಮಾಡಿಕೊಂಡು ಬಂದವರು. ಕುಟುಂಬ ವೃತ್ತಿಯನ್ನು ತನ್ನ ಸಹೋದರರಾದ ಝೆರಿ, ಗಿಬ್ ಅವರೊಂದಿಗೆ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈ ಭಾಗದ ಜನತೆ ಮನೆ, ಇನ್ನಿತರ ಸಿಮೆಂಟ್ ಕೆಲಸ ಆಗಬೇಕಿದ್ದರೆ ಮೊದಲು ಆದ್ಯತೆ ನೀಡುವುದು ಸಿಲ್ವೆಸ್ಟರ್ ಅವರ ಕುಟುಂಬಕ್ಕೆ.

ಬಾಯಲ್ಲೊಂದು ಬೀಡಿ ಮೋಟು ಕಚ್ಚಿ ಹಿಡಿದು, ಕೈಲಿ ತಾಪಿ ಹಿಡಿದರೆ ಲಾಝೆರ್ ಮಾಡಿರುವ ಗಿಲಾಯ ಕೆಲಸ ನಿಂತು ನೋಡಬೇಕು. ಅಷ್ಟು ಪರಿಣತಿ ಕೆಲಸ ಲಾಝರ್ ಅವರದ್ದಿದೆ. ನೆಗ್ಗು ಪಂಚಾಯಿತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಝರ್ ಮತ್ತು ಅವರ ಸಹೋದರರು ನಿರ್ಮಿಸಿದ ನೂರಾರು ಮನೆಗಳಿವೆ, ಶಾಲಾ ಕಂಪೌಂಡ್ ಇವೆ, ಬಾತ್ ರೂಂ ಇವೆ. ಲಾಝರ್ ಅವರ ಕೆಲಸದ ಝಲಕ್ ನ್ನು ಇಲ್ಲಿಯ ಜನತೆ ಸಾಹಸವಾಗಿ ಒಪ್ಪಿಕೊಂಡಿದ್ದಾರೆ. ಪಕ್ಕದಮನೆ ಕೆಲಸಕ್ಕೆ ಬಂದಿದ್ದರೂ ಲಾಝರ್ ಅವರನ್ನು ಪ್ರೀತಿಯಿಂದ ಕರೆದು ಚಹಾ ಮಾಡಿಕೊಡುವವರು ಅನೇಕರಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ನಡೆದಾಗ ಸ್ಥಳೀಯರೇ ಅವರನ್ನು ಸ್ಪರ್ಧಿಸುವಂತೆ ಉತ್ತೇಜನ ನೀಡಿದ್ದರು. ರಾಜಕೀಯ ಅರಿಯದ, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದ ಲಾಝರ್ ಅನಾಯಾಸವಾಗಿ ಆರಿಸಿಬಂದಿದ್ದರು.

ಕಳೆದ ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾದ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದಾಗ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವೂ ಮೀಸಲಾತಿಗೆ ಒಳಪಟ್ಠಿತು. ಇದರಿಂದಾಗಿ ಲಾಝರ್ ರೆಬೆಲ್ಲೋ ಸೂಚಿತ ಕೆಟಗರಿಯ ಏಕೈಕ ವ್ಯಕ್ತಿಯಾಗಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.

ಈ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬಳಿ ಕಾರುಬಿಡಿ ಬೈಕ್ ಕೂಡ ಇಲ್ಲ. ಬಸ್ಸೇರಿ ಹಳ್ಳಿಗಳಿಗೆ ತೆರಳಿ ಗಾರೆ ಕೆಲಸ ಮಾಡಿ ಸಂಜೆ ಮನೆಗೆ ವಾಪಸಾಗುತ್ತಾರೆ. “ಹೆಗ್ಡೇರೆ, ನಿಮ್ಮ ರಸ್ತೆ ತಿರುವಿನಲ್ಲಿ ಒಂದು ಸಿಮೆಂಟ್ ಪೈಪ್ ಹಾಕುವ, ನೀರು ರಸ್ತೆ ಕೊರಿತದೆ…” ” ನಾಯ್ಕರೇ ನೀವು ಉದ್ಯೋಗ ಖಾತ್ರಿಯಲ್ಲಿ ಈ ಕೆಲಸ ಮಾಡಿಸಿಕೊಳ್ಳಿ… ಊರ ಜನಕ್ಕೂ ಪ್ರಯೋಜನ ಆಗ್ತದೆ”…..ಅದು ಆ ಪಕ್ಷದವರ ವಾರ್ಡ್, ಇವನು ಈ ಪಕ್ಷದ ಕಾರ್ಯಕರ್ತ ಎಂಬುದಕ್ಕೆ ಆಸ್ಪದ ನೀಡದೇ, ಗ್ರಾಮದ ಹಳ್ಳಿ, ಸಮಸ್ಯೆ ಅಷ್ಟನ್ನೇ ಮಾನದಂಡವಾಗಿಸಿಕೊಂಡಿದ್ದಾರೆ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೊ…

ಹುದ್ದೆ ಇವತ್ತು ಬರತ್ತೆ, ನಾಳೆ ಹೋಗತ್ತೆ. ನಮ್ಮ ವೃತ್ತಿ, ಈ ವೃತ್ತಿಯೇ ತಂದುಕೊಟ್ಟ ಜನರ ವಿಶ್ವಾಸವೇ ನನ್ನ ಜೀವಾಳ.

– ಲಾಝೆರ್ ರೆಬೆಲ್ಲೋ, ನೆಗ್ಗು ಗ್ರಾ ಪಂ ಅಧ್ಯಕ್ಷ.

ಇದನ್ನೂ ಓದಿ: Shirva ಗ್ರಾ.ಪಂ.ಅಧ್ಯಕ್ಷರಾಗಿ ಸವಿತಾ ಪೂಜಾರಿ,ಉಪಾಧ್ಯಕ್ಷರಾಗಿ ವಿಲ್ಸನ್‌ ರೊಡ್ರಿಗಸ್‌ ಆಯ್ಕೆ

ಟಾಪ್ ನ್ಯೂಸ್

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Yashpal1

Thirupathi Laddu: ಹಿಂದೂಗಳ ಭಾವನೆಗೆ ಧಕ್ಕೆ ಹುನ್ನಾರ: ಶಾಸಕ ಯಶ್‌ಪಾಲ್‌

Udupi-Shashti

Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ

shShiruru Landslide Tragedy: ಟ್ಯಾಂಕರ್‌ ಎಂಜಿನ್‌, ಸ್ಕೂಟಿ ಪತ್ತೆ

Shiruru Landslide Tragedy: ಟ್ಯಾಂಕರ್‌ ಎಂಜಿನ್‌, ಸ್ಕೂಟಿ ಪತ್ತೆ

election

Election Schedule: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆ ನೀತಿ ಸಂಹಿತೆ: ಮಾರ್ಗಸೂಚಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RTI ಕಾರ್ಯಕರ್ತರ ರೀತಿ ರಾಜ್ಯಪಾಲರ ಕೆಲಸ: ಸಚಿವ ದಿನೇಶ್‌

RTI ಕಾರ್ಯಕರ್ತರ ರೀತಿ ರಾಜ್ಯಪಾಲರ ಕೆಲಸ: ಸಚಿವ ದಿನೇಶ್‌ ಗುಂಡೂರಾವ್‌

Dinesh Gundu Rao: ತುಪ್ಪದ ಗುಣಮಟ್ಟ ಪರಿಶೀಲನೆಗೆ ಸೂಚನೆ

Dinesh Gundu Rao: ತುಪ್ಪದ ಗುಣಮಟ್ಟ ಪರಿಶೀಲನೆಗೆ ಸೂಚನೆ

ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Tumkur University ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

1-asasa

Lingayat ಪಂಚಮಸಾಲಿ 2A ಹೋರಾಟ: ವಕೀಲರ ಸಮಾವೇಶದಲ್ಲಿ 3 ನಿರ್ಣಯ ಅಂಗೀಕಾರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

theft-temple

Cash Theft: ಕಾಣಿಯೂರು: ದೇಗುಲದಲ್ಲಿ ಕಾಣಿಕೆ ಡಬ್ಬಿ ಕಳವು

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

Uppinagdy-Miss

Uppinangady: ನೆಲ್ಯಾಡಿಯ ಕಾಲೇಜು ವಿದ್ಯಾರ್ಥಿ ನಾಪತ್ತೆ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.