Yellur ಗ್ರಾ.ಪಂ. ಅಧ್ಯಕ್ಷರಾಗಿ ರವಿರಾಜ್ ರಾವ್, ಉಪಾಧ್ಯಕ್ಷರಾಗಿ ಉಷಾ ಎನ್. ಅವಿರೋಧ ಆಯ್ಕೆ
Team Udayavani, Aug 23, 2023, 4:15 PM IST
ಕಾಪು: ಎಲ್ಲೂರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ರವಿರಾಜ್ ರಾವ್ ಮತ್ತು ಉಪಾಧ್ಯಕ್ಷರಾಗಿ ಉಷಾ ಎನ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
14 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 5 ಸದಸ್ಯರಿದ್ದಾರೆ.
ಸಾಮಾನ್ಯ ಮೀಸಲಿನಡಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರವಿರಾಜ್ ರಾವ್ ಮತ್ತು ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಅ ಮಹಿಳೆ ಮೀಸಲಿನಡಿ ಉಷಾ ಎನ್. ನಾಮಪತ್ರ ಸಲ್ಲಿಸಿದ್ದರು.
3 ನೇ ಸಲ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುವ ರವಿರಾಜ್ ರಾವ್ ಮತ್ತು ಪ್ರಥಮ ಸಲ ಸದಸ್ಯರಾಗಿ ಆಯ್ಕೆಯಾಗಿರುವ ಉಷಾ ದಯಾನಂದ್ ಅವರಿಗೆ ಈ ಬಾರಿ ಅದೃಷ್ಟ ಒಲಿದಿತ್ತು.
ಎಲ್ಲೂರು ಗ್ರಾ.ಪಂ. ಹಿಂದಿನ ಸಾಲಿನ ಅಧ್ಯಕ್ಷ ಜಯಂತ್ ಕುಮಾರ್ ಮತ್ತು ಇಬ್ಬರು ಕಾಂಗ್ರೆಸ್ ಬೆಂಬಲಿತರ ಸಹಿತವಾಗಿ ಮೂರು ಮಂದಿ ಸದಸ್ಯರು ಗೈರು ಹಾಜರಾಗಿದ್ದರು.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಹಾಯಕ ಇಂಜಿನಿಯರ್ ಎಂ. ಸೋಮನಾಥ್ ಚುನಾವಣಾ ಪ್ರಕ್ರಿಯೆ ನಡೆಸಿದ್ದು ಪಿಡಿಒ ಪ್ರದೀಪ್ ಕುಮಾರ್ ಸಹಕರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿ.ಪಂ. ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಪಕ್ಷದ ಮುಖಂಡರಾದ ಅರುಣ್ ಶೆಟ್ಟಿ ಪಾದೂರು, ಗಂಗಾಧರ ಸುವರ್ಣ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ನಾಗೇಶ್ ರಾವ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವೈ. ಯಶವಂತ್ ಶೆಟ್ಟಿ, ವಸಂತಿ ಮಧ್ವರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ
Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ
Dense Forest: ಹೆಬ್ರಿಯ ಕಬ್ಬಿನಾಲೆ, ತಿಂಗಳೆ ವ್ಯಾಪ್ತಿಯಲ್ಲಿ ಕಾಡಾನೆ ದಾಂಧಲೆ
Shambhavi ಹೊಳೆಗೆ ಬಿದ್ದು ಬಾಲಕ ಸಾವು-ನಾಲ್ಕು ಮಂದಿ ಮಕ್ಕಳು ತೆರಳಿದ್ದ ವೇಳೆ ಘಟನೆ
Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.