Joe Biden: ಭಾರತ ನನಗೆ ಪ್ರಮುಖ ರಾಷ್ಟ್ರ ಎಂದಿದ್ದ ಅಧ್ಯಕ್ಷ ಬೈಡೆನ್
ಸಂದರ್ಶನದಲ್ಲಿ ಅಮೆರಿಕ ರಾಯಭಾರಿ ಎರಿಕೆ ನೆನೆಕೆ
Team Udayavani, Aug 23, 2023, 8:57 PM IST
ನವದೆಹಲಿ: “ವಿಶ್ವದಲ್ಲೇ ಭಾರತವು ನನಗೆ ಅತ್ಯಂತ ಪ್ರಮುಖ ರಾಷ್ಟ್ರ” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈ ಅಂಶವನ್ನು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟಿ ಸಂದರ್ಶನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. “ಭಾರತಕ್ಕೆ ರಾಯಭಾರಿಯಾಗಿ ಆಗಮಿಸುವ ಮುನ್ನ ನನ್ನನ್ನು ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ವಿಶ್ವದಲ್ಲಿರುವ ಹಲವು ರಾಷ್ಟ್ರಗಳ ಪೈಕಿ ಭಾರತವು ನನಗೆ ಅತ್ಯಂತ ಪ್ರಮುಖ ರಾಷ್ಟ್ರ” ಎಂದು ಹೇಳಿದ್ದರು.
“ನನ್ನ ಮಾಹಿತಿಯಂತೆ ಎರಡು ರಾಷ್ಟ್ರಗಳ ಇತಿಹಾಸದಲ್ಲೇ ಅಮೆರಿಕ ಅಧ್ಯಕ್ಷರೊಬ್ಬರು ಈ ಮೊದಲು ಈ ರೀತಿ ಹೇಳಿಲ್ಲ. ಅಮೆರಿಕದ ತೆರಿಗೆದಾರರ ಪೈಕಿ ಭಾರತೀಯ ಅಮೆರಿಕನ್ನರು ಶೇ.6ರಷ್ಟಿದ್ದಾರೆ. ಅಮೆರಿಕ-ಭಾರತ ಅತ್ಯಂತ ಉತ್ತಮವಾದ ಸಂಬಂಧ ಹೊಂದಿವೆ. ತಂತ್ರಜ್ಞಾನದಿಂದ ಹಿಡಿದು ವ್ಯಾಪಾರದವರೆಗೆ, ಪರಿಸರದಿಂದ ಹಿಡಿದು ಮಹಿಳಾ ಸಬಲೀಕರಣದವರೆಗೆ, ಸಣ್ಣ ಉದ್ಯಮದಿಂದ ಹಿಡಿದು ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಉಭಯ ರಾಷ್ಟ್ರಗಳು ಪರಸ್ಪರ ಸಹಭಾಗಿತ್ವ ಹೊಂದಿದ್ದೇವೆ,’ ಎಂದು ಎರಿಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.