Politics: ಸತ್ತರೂ ನನ್ನ ಶವದ ಮೇಲೆ ಬಿಜೆಪಿ ಬಾವುಟ ಹಾಕಿ ಅಂತ್ಯಸಂಸ್ಕಾರ: ಸೋಮಶೇಖರ ರೆಡ್ಡಿ
Team Udayavani, Aug 23, 2023, 9:12 PM IST
ಬಳ್ಳಾರಿ: ನನ್ನ ರಕ್ತದಲ್ಲಿಯೇ ಇರುವ ಬಿಜೆಪಿಯನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತರೂ ನನ್ನ ಶವದ ಮೇಲೆ ಬಿಜೆಪಿ ಬಾವುಟ ಹಾಕಿ ಅಂತ್ಯಸಂಸ್ಕಾರ ಮಾಡುವಂತೆ ಹೇಳಿದ್ದೇನೆ. ನಾನು ರಾಜಕೀಯದಲ್ಲಿದ್ದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ. ಇಲ್ಲದಿದ್ದರೆ ರಾಜಕೀಯವನ್ನೇ ಬಿಡುತ್ತೇನೆ. ಕಾಂಗ್ರೆಸ್ ಸೇರುವುದು ನಮ್ಮ ಕನಸು ಮನಸ್ಸಿನಲ್ಲೂ ಇಲ್ಲ. ನಾನೊಬ್ಬ ಮಾಜಿ ಶಾಸಕ. ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ಕೆಲಸದ ನಿಮಿತ್ತ ಮನೆಗೆ ಹೋಗಿದ್ದೆ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆಗಳು ನಡೆದಿಲ್ಲ. ರಾಜಕೀಯ ವಿಚಾರ ಮಾತನಾಡಲು ಸಹ ಏನೂ ಇಲ್ಲ. ಮನೆಗೆ ಭೇಟಿ ನೀಡಿದ್ದಕ್ಕೆ ತಪ್ಪು ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.
ದೇಶದಲ್ಲಿ ಬಿಜೆಪಿ ಕ್ಷೀಣಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ನ ಸುಳ್ಳು ಗ್ಯಾರಂಟಿಗಳಿಂದ ನಮಗೆ ಸೋಲಾಗಿದೆ. ನ್ಯಾಯವಾಗಿ ಸೇವೆ ಮಾಡಿದ್ದೇವೆ. ನಾವು ಸೋತಿಲ್ಲ, ಗೆದ್ದಿದ್ದೇವೆ. ಗ್ಯಾರಂಟಿ ಕೊಟ್ಟು ಅ ಧಿಕಾರಕ್ಕೆ ಬಂದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಬಿಜೆಪಿ ಟಿಕೆಟ್ನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಲಿ ಸಂಸದರಾಗಿ ದೇವೇಂದ್ರಪ್ಪ ಇದ್ದಾರೆ. ಸದ್ಯ ಎಂಎಲ್ಎ ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರೀರಾಮುಲು ಜನರ ಮಧ್ಯೆ ಇರುವ ಅಗತ್ಯವಿದೆ. ಅದಕ್ಕಾಗಿ ಎಂಪಿ ಟಿಕೆಟ್ ನೀಡುವುದು ಸೂಕ್ತ. ಆದರೆ, ಈ ವಿಷಯ ಅಂತಿಮವಾಗಿ ಹೈಕಮಾಂಡ್ಗೆ ಬಿಟ್ಟದ್ದು ಎಂದರು.
2024ರಲ್ಲಿ ಕೇಂದ್ರದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿ ಮೋದಿ ಅಧಿ ಕಾರ ಹಿಡಿಯಲಿದ್ದಾರೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅವರ ಹತ್ತಿರಕ್ಕೂ ಯಾರು ಸುಳಿಯಲಾರರು. ಇಂಡಿಯಾ ಸಂಘಟನೆ ಚುನಾವಣೆ ವೇಳೆಗೆ ವಿಘಟನೆಯಾಗಲಿದೆ. ದೇಶ, ಶತ್ರುಗಳಿಂದ ಮತ್ತು ಆರ್ಥಿಕವಾಗಿ ಸುಭದ್ರವಾಗಿರಬೇಕೆಂದರೆ ಬಿಜೆಪಿಗೆ ಮತ ನೀಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.