World Shooting Championship: ಬಂಗಾರ ಗೆದ್ದ ಅಮನ್ಪ್ರೀತ್ ಸಿಂಗ್
Team Udayavani, Aug 23, 2023, 11:00 PM IST
ಬಾಕು (ಅಜರ್ಬೈಜಾನ್): ಐಎಸ್ಎಸ್ಎಫ್ ಶೂಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಬುಧವಾರ ಚಿನ್ನ ಹಾಗೂ ಕಂಚಿನ ಪದಕಕ್ಕೆ ಗುರಿ ಇರಿಸಿದೆ. ಪುರುಷರ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅಮನ್ಪ್ರೀತ್ ಸಿಂಗ್ ಬಂಗಾರದ ಪದಕ ಗೆದ್ದರೆ, ವನಿತೆಯರ ತಂಡ ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿತು.
ಇದರೊಂದಿಗೆ ಭಾರತ ಈ ಕೂಟದಲ್ಲಿ 5 ಚಿನ್ನ ಮತ್ತು 4 ಕಂಚಿನ ಪದಕಗಳನ್ನು ಜಯಿಸಿ ದಂತಾಯಿತು. ಪದಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿತು. ಚೀನ ಅಗ್ರಸ್ಥಾನದಲ್ಲಿದೆ. ಚೀನ ಒಟ್ಟು 24 ಪದಕ ಜಯಿಸಿದ್ದು, ಇದರಲ್ಲಿ 13 ಬಂಗಾರ ಸೇರಿದೆ.
ಪುರುಷರ ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯ ಫೈನಲ್ನಲ್ಲಿ ಅಮನ್ದೀಪ್ 577 ಅಂಕ ಗಳಿಸಿದರು. ಕೊರಿಯಾದ ಲೀ ಗುನ್ಯೋಕ್ ಬೆಳ್ಳಿ (574) ಮತ್ತು ಫ್ರಾನ್ಸ್ನ ಕೆವಿನ್ ಕ್ಯಾಪೋನ್ (574) ಕಂಚು ಗೆದ್ದರು. ಕೊರಿಯನ್ ಸ್ಪರ್ಧಿಗಿಂತ ಕಡಿಮೆ “ಇನ್ನರ್ ಟೆನ್ಸ್’ಗೆ ಗುರಿ ಇರಿಸಿದ ಕಾರಣ ಕ್ಯಾಪೋನ್ ತೃತೀಯ ಸ್ಥಾನಿಯಾಗಬೇಕಾಯಿತು.
ಆದರೆ ಪುರುಷರ ತಂಡ ವಿಭಾಗದಲ್ಲಿ ಭಾರತ ಸ್ವಲ್ಪದರಲ್ಲೇ ಕಂಚಿನಿಂದ ವಂಚಿತವಾಯಿತು. ಹರ್ಷ ಗುಪ್ತ, ಅಕ್ಷಯ್ ಜೈನ್ ಮತ್ತು ಅಮನ್ಪ್ರೀತ್ ಸಿಂಗ್ ಈ ತಂಡದಲ್ಲಿದ್ದರು.
ವನಿತೆಯರಿಗೆ ಕಂಚು
ವನಿತೆಯರ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿಯಿತು. ತಿಯಾನಾ, ಯಾಶಿತಾ ಮತ್ತು ಕೃತಿಕಾ ಶರ್ಮ ಸೇರಿಕೊಂಡು 1,601 ಅಂಕಗಳನ್ನು ಕಲೆಹಾಕಿದರು. ಚೀನ ಚಿನ್ನ
ಗೆದ್ದರೆ, ಅಜರ್ಬೈಜಾನ್ ಬೆಳ್ಳಿ ಜಯಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.