![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 23, 2023, 11:04 PM IST
ಬುಡಾಪೆಸ್ಟ್ (ಹಂಗೇರಿ): ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್ ಅಲ್ಡ್ರಿನ್ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಲಾಂಗ್‌ಜಂಪ್ ಸ್ಪರ್ಧೆಯ ಫೈನಲ್ ತಲುಪಿದ್ದಾರೆ. ಆದರೆ ಭರವಸೆಯ ಮುರಳಿ ಶ್ರೀಶಂಕರ್ ಸಾಮರ್ಥ್ಯಕ್ಕೂ ಕಳಪೆ ಪ್ರದರ್ಶನ ನೀಡಿದರು.
8.42 ಮೀಟರ್‌ಗಳ ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್ ಅಲ್ಡ್ರಿನ್ ಮೊದಲ ನೆಗೆತದಲ್ಲಿ 8.0 ಮೀ. ದಾಖಲಿಸಿದರು. ಮುಂದಿನೆರಡು ನೆಗೆತಗಳು ಫೌಲ್ ಆದವು. ಆದರೆ 12ನೇ ಹಾಗೂ ಕೊನೆಯ ಸ್ಥಾನಿಯಾಗಿ ಫೈನಲ್ ಪ್ರವೇಶಿಸಲು ಮೊದಲ ನೆಗೆತ ಪರ್ಯಾಪ್ತವೆನಿಸಿತು. 8.15 ಮೀ. ದೂರದ ಸಾಧನೆಗೈದವರು ಅಥವಾ ಎರಡೂ ಅರ್ಹತಾ ವಿಭಾಗಗಳ ಮೊದಲ 12 ಸ್ಪರ್ಧಿಗಳು ಫೈನಲ್ ಪ್ರವೇಶ ಪಡೆಯುತ್ತಾರೆ.
ಜೆಸ್ವಿನ್ ಅಲ್ಡ್ರಿನ್ ಗ್ರೂಪ್ “ಬಿ” ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನಿಯಾದರು. ಎರಡೂ ವಿಭಾಗಳನ್ನೊಳಗೊಂಡಂತೆ 12ನೇ ಸ್ಥಾನಿಯಾದರು. ಫೈನಲ್ ಗುರುವಾರ ನಡೆಯಲಿದೆ.
ಮುರಳಿ ಶ್ರೀಶಂಕರ್ “ಎ” ವಿಭಾಗದಿಂದ ಅರ್ಹತಾ ಸ್ಪರ್ಧೆಗೆ ಇಳಿದಿದ್ದರು. ಇಲ್ಲಿ ಕ್ರಮವಾಗಿ 7.74 ಮೀ., 7.66 ಮೀ. ಹಾಗೂ 6.70 ಮೀ. ದೂರದ ಕಳಪೆ ನಿರ್ವಹಣೆಯೊಂದಿಗೆ 12ನೇ ಸ್ಥಾನಕ್ಕೆ ಕುಸಿದರು. ಒಟ್ಟು 24 ಸ್ಪರ್ಧಿಗಳಲ್ಲಿ 24ನೇ ಸ್ಥಾನಿಯಾದರು.
ಮುರಳಿ ಶ್ರೀಶಂಕರ್ ಜೆಸ್ವಿನ್‌ಗಿಂತ ಪ್ರಭಾವಶಾಲಿ ಹಾಗೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು. ಕಳೆದ ಜೂನ್‌ನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 8.41 ಮೀ. ಸಾಧನೆ ಗೈದಿದ್ದರು. ಅನಂತರ ನಡೆದ ಏಷ್ಯನ್ ಚಾಂಪಿಯನ್ ಶಿಪ್ಸ್‌ನಲ್ಲಿ 8.37 ಮೀ. ದೂರಕ್ಕೆ ನೆಗೆದು ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ದ್ದರು. ಆದರೆ ಇಲ್ಲಿ ಮಾತ್ರ ಯಶಸ್ಸು ಲಭಿಸಲಿಲ್ಲ.
ಜೆಸ್ವಿನ್ ಅಲ್ಡ್ರಿನ್ ಗೆ ಇದು 2ನೇ ವಿಶ್ವ ಚಾಂಪಿಯನ್‌ಶಿಪ್ ಆಗಿದೆ. ಅಮೆರಿಕದಲ್ಲಿ ನಡೆದ 2022ರ ಕೂಟದಲ್ಲಿ ಅವರು ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದರು.
ಲಾಂಗ್‌ಜಂಪ್ ಫೈನಲ್‌ನ 12 ಮಂದಿ ಆ್ಯತ್ಲೀಟ್‌ಗಳಲ್ಲಿ ಮೂವರು ಜಮೈಕಾದವರಾಗಿದ್ದಾರೆ. ಇವರಲ್ಲಿ ವೇನ್ ಪಿನ್ನಾಕ್ 8.54 ಮೀ. ದೂರದ ಒಂದೇ ನೆಗೆತಕ್ಕೆ ಫೈನಲ್ ಕಣಕ್ಕೆ ಹೋಗಿ ಬಿದ್ದರು. ಕ್ಯಾರಿ ಮೆಕ್‌ಲಿಯಾಡ್ (8.19 ಮೀ.) ಮತ್ತು ತಜಯ್ ಗೇಲ್ (8.12 ಮೀ.) ಉಳಿದಿಬ್ಬರು. ಇವರಲ್ಲಿ ಪಿನ್ನಾಕ್ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.