Honda: ಹೋಂಡಾದಿಂದ ವಿಸ್ತರಿತ ವಾರಂಟಿ, ವಿಸ್ತರಿತ ವಾರಂಟಿ ಪ್ಲಸ್ ಯೋಜನೆ
Team Udayavani, Aug 23, 2023, 11:26 PM IST
ಬೆಂಗಳೂರು: ಹೋಂಡಾ ಮೋಟಾರ್ ಸೈಕಲ… ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಗ್ರಾಹಕರಿಗೆ ವಾರಂಟಿ ಮತ್ತು ವಿಸ್ತರಿತ ವಾರಂಟಿ ಪ್ಲಸ್ ಯೋಜನೆಯನ್ನು ಪರಿಚಯಿಸುತ್ತಿದೆ. ಮೊದಲ 10,000 ಹೊಸ ವಾಹನ ಖರೀದಿ ಗ್ರಾಹಕರು ವಿಸ್ತರಿತ ವಾರಂಟಿ ನೋಂದಣಿಯನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ.
ಹೋಂಡಾ ಮೋಟಾರ್ ಸೈಕಲ… ಮತ್ತು ಸ್ಕೂಟರ್ ಇಂಡಿಯಾ ವಿಶೇಷ 10 ವರ್ಷದ “ವಿಸ್ತರಿತ ವಾರಂಟಿ’ ಮತ್ತು ವಿಸ್ತರಿತ ವಾರಂಟಿ ಪ್ಲಸ್ ಅನ್ನು ಪರಿಚಯಿಸಿದೆ. ಸಿಬಿ 350 ಎಚ್’ನೆಸ್, ಸಿಬಿ 350 ಆರ್‌ಎಸ್‌ಗಾಗಿ ವಾರಂಟಿ ಪ್ಲಸ್ ಯೋಜನೆಗಳು ಮೊದಲ 10,000 ಹೊಸ ಮೋಟಾರ್ ಸೈಕಲ… ಗ್ರಾಹಕರಿಗೆ ವಿಶೇಷ ಶೂನ್ಯ ವೆಚ್ಚದ ನೋಂದಣಿಯಲ್ಲಿ ಲಭಿಸಲಿದೆ.
ವಾಹನವನ್ನು ಖರೀದಿಸಿದ ದಿನಾಂಕದಿಂದ 91 ದಿನಗಳಿಂದ 9ನೇ ವರ್ಷದವರೆಗೆ ಈ ಯೋಜನೆಯು ಗ್ರಾಹಕರಿಗೆ ಸಮಗ್ರ ಕವರೇಜ್ ಮತ್ತು ನವೀಕರಣ ಆಯ್ಕೆಗಳನ್ನು ಒಳಗೊಂಡಿವೆ. ಈ ಅವಧಿಯಲ್ಲಿ ಮಾಲಕತ್ವದಲ್ಲಿ ಬದಲಾವಣೆಯ ಸಂದರ್ಭ ಸಹ ಇದನ್ನು ವರ್ಗಾಯಿಸಬಹುದಾಗಿದೆ. ಎಂಜಿನ್ ಬಿಡಿಭಾಗ ಸಹಿತ ಅಗತ್ಯ ಯಾಂತ್ರಿಕ ಮತ್ತು ವಿದ್ಯುತ್ ಭಾಗಗಳಿಗೆ ವಿಸ್ತರಿತ ವಾರಂಟಿ ಪ್ಲಸ್ ಅನ್ವಯಿಸುತ್ತದೆ.
ಗ್ರಾಹಕರಿಗೆ ಮೂರು ಸೂಕ್ತವಾದ ಆಯ್ಕೆಗಳನ್ನು ಒದಗಿಸುತ್ತದೆ. 7ನೇ ವರ್ಷದವರೆಗೆ, ಮೂರು ವರ್ಷದ ವರೆಗೆ ಮತ್ತು ಒಂದು ವರ್ಷಗಳವರೆಗಿನ ಯೋಜನೆಯಾಗಿರುತ್ತದೆ. ಈ ಆಯ್ಕೆಗಳು ಎಚ್’ನೆಸ್ ಸಿಬಿ 350 ಸಿಬಿ 350 ಆರ್‌ಎಸ್‌ಗಾಗಿ 1,30,000 ಕಿಲೋಮೀಟರ್‌ಗಳವರೆಗೆ ವಾರಂಟಿಯನ್ನು ನೀಡುತ್ತದೆ.
ವಿಶೇಷ ವಿಸ್ತೃತ ವಾರಂಟಿ ಕಾರ್ಯಕ್ರಮಗಳನ್ನು ಪರಿಚಯಿಸಿ ಮಾತನಾಡಿದ ಹೋಂಡಾ ಮೋಟಾರ್ ಸೈಕಲ… ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ವಿಬಾಗದ ನಿರ್ದೇಶಕ ಯೋಗೇಶ್ ಮಾಥುರ್, ಎಚ್‌ಎಂಎಸ್‌ಐನಲ್ಲಿ ಸಿಬಿ350 ಮೋಟಾರ್ ಸೈಕಲ್‌ಗಳು 1,00,000 ಗ್ರಾಹಕರ ಮೈಲಿಗಲ್ಲನ್ನು ಆಚರಿಸುತ್ತಿದೆ. ಗ್ರಾಹಕರು ಹತ್ತಿರದ ಅಧಿಕೃತ ಹೋಂಡಾ ಮಳಿಗೆಗಳಲ್ಲಿ ಈ ಸೇವೆಯನ್ನು ಪಡೆಯಬಹುದು ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.