Jayalaxmi Silks ಉಡುಪಿಯ ಬನ್ನಂಜೆಯಲ್ಲಿ ನೂತನ ಮಳಿಗೆಯ ಉದ್ಘಾಟನೆ
Team Udayavani, Aug 23, 2023, 11:59 PM IST
ಉಡುಪಿ: ರಾ.ಹೆ. 169ಎ ಸನಿಹದ ಬನ್ನಂಜೆಯ ಸಮುಚ್ಚಯದಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ನ ಉದ್ಘಾಟನೆ ಆ. 24ರ ಪೂರ್ವಾಹ್ನ 11ಕ್ಕೆ ನಡೆಯಲಿದೆ.
ಸಮುಚ್ಚಯವನ್ನು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಮತ್ತು ಸಿಇಒ ಮಹಾಬಲೇಶ್ವರ, ಮೆನ್ಸ್‌ವೇರ್ ಅನ್ನು ಶಾಸಕ ಯಶ್‌ಪಾಲ್ ಎ. ಸುವರ್ಣ, ಹ್ಯಾಂಡ್‌ಲೂಮ್ ಅನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್, ಸಾರೀ ಮತ್ತು ಸಿಲ್ಕ್ ವಿಭಾಗವನ್ನು ಶ್ಯಾಮಿಲಿ ಅಂಬಲಪಾಡಿ, ಗರ್ಲ್ಸ್ ಕಿಡ್ಸ್ ವಿಭಾಗವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಟಾಪ್ಸ್ ವಿಭಾಗವನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಬಾಯ್ಸ ಕಿಡ್ಸ್ ವಿಭಾಗವನ್ನು ಉದ್ಯಾವರ ಹಲೀಮಾ ಸಬುj ಆಡಿಟೋರಿಯಂನ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಗಾಗ್ರಾ ವಿಭಾಗವನ್ನು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ವನಿತಾ ಜಿ. ಪೈ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ ಮಚ್ಚೀಂದ್ರ, ಉಡುಪಿ ಜನರಲ್ ವಿಕಾರ್ ರೆ|ಫಾ| ಫರ್ಡಿನಂಡ್ ಗೋನ್ಸಾಲ್ವಿಸ್, ಬೆಂಗಳೂರು ಝೆರೋಧಾ ಲಿಮಿಟೆಡ್‌ನ ರಘುರಾಮ ಕಾಮತ್, ರೇವತಿ ಕಾಮತ್ ಉಪಸ್ಥಿತರಿರಲಿದ್ದಾರೆ.
ಸಂಜೆ 4ಕ್ಕೆ ನಡೆಯುವ ಸಮಾರೋಪ ದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ (ಸಹಾಯಕ ಖಾತೆ) ಶೋಭಾ ಕರಂದ್ಲಾಜೆ, ಶಾಸಕರಾದ ವಿ. ಸುನಿಲ್ ಕುಮಾರ್, ಗುರ್ಮೆ ಸುರೇಶ ಶೆಟ್ಟಿ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೃಷ್ಣ ಜೆ. ಪಾಲೆಮಾರ್, ಅಭಯಚಂದ್ರ ಜೈನ್, ನಗರಸಭೆ ಪೌರಾಯುಕ್ತ ರಾಯಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ನಗರಸಭೆ ಸದಸ್ಯರಾದ ಟಿ.ಜಿ. ಹೆಗ್ಡೆ, ರಮೇಶ್ ಕಾಂಚನ್, ಸವಿತಾ ಹರೀಶ್‌ರಾಮ್, ಆಭರಣ ಜುವೆಲರ್ನ
ಸುಭಾಶ್ ಕಾಮತ್, ಕಾಂಚನ್ ಹ್ಯುಂಡೈಯ ಮಾಲಕ ಪ್ರಸಾದ್‌ರಾಜ್ ಕಾಂಚನ್, ಉದ್ಯಮಿ ಎಂ. ದಿನೇಶ್ ಪೈ ಮುನಿಯಾಲು, ನಟರಾದ ಸಿಐಡಿ ದಯಾ ಶೆಟ್ಟಿ, ಹರೀಶ್, ನಟಿ ಅಂಶಾ, ಅವಿಭಜಿತ ದ.ಕ. ಟೆಕ್ಸ್‌ಟೈಲ್ಸ್ ಡೀಲರ್ ಅಸೋಸಿಯೇಶನ್ ಅಧ್ಯಕ್ಷ ಯೋಗೀಶ್ ಭಟ್ ಭಾಗವಹಿಸುವರು.
ಫ್ಯಾಮಿಲಿ ಸ್ಟುಡಿಯೋ
ಮದುವೆ, ಶುಭ ಸಮಾರಂಭಗಳಿಗೆ ಕುಟುಂಬ ಸಮೇತರಾಗಿ ಬಟ್ಟೆ ಖರೀದಿಗೆ ಬರುವ ಗ್ರಾಹಕರ ಬೇಡಿಕೆಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಎನ್ನುವಂತೆ ಪ್ರತ್ಯೇಕವಾಗಿರುವ 6 ಫ್ಯಾಮಿಲಿ ಸ್ಟುಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಹಕರು ತಮ್ಮ ಮನಸ್ಸಿಗೆ ಇಷ್ಟವಾಗುವ ಉಡುಪುಗಳ ನಾನಾ ಶ್ರೇಣಿಗಳನ್ನು ವೀಕ್ಷಿಸಿ ಖರೀದಿಸಬಹುದು.
ಸೀರೆಗಳ ಬೃಹತ್ ಸಂಗ್ರಹ
ಮಹಿಳೆಯರಿಗೆ ಮನಮೋಹಕವಾಗಿರುವ ಕಾಂಚಿಪುರಂ, ಧರ್ಮಾವರಂ, ಮೈಸೂರು ಸಿಲ್ಕ್ಸ್, ಪ್ರಿಂಟೆಡ್ ಸಿಲ್ಕ್ಸ್, ಕಾಟನ್ ಸಿಲ್ಕ್ಸ್, ಬೆಂಗಾಲಿ ಕಾಟನ್ ಸಹಿತ ರಾಷ್ಟ್ರದ ವಿವಿಧೆಡೆಗಳಲ್ಲಿ ತಯಾರಾಗುವ ಸೀರೆಗಳ ಬೃಹತ್ ಸಂಗ್ರಹವಿದೆ. ಮಹಿಳೆಯರ ಕುರ್ತಾ, ಬಾಟಂಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಇದೆ.
ಆ. 25ರಿಂದ ಸೇವೆ ಲಭ್ಯ
1969ರಂದು ಪ್ರಾರಂಭಗೊಂಡ ಸಂಸ್ಥೆ 54 ವರ್ಷಗಳಿಂದ ರಾಜ್ಯಾದ್ಯಂತದ ಲಕ್ಷೋಪಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿದ ಹೆಮ್ಮೆಗೆ ಪಾತ್ರವಾಗಿದೆ. ಆ.25ರಿಂದ ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿಯ ಬನ್ನಂಜೆಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಿರಲಿದೆ ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ.
ಒಂದೇ ಸೂರಿನಡಿ ಎಲ್ಲವೂ ಲಭ್ಯ
7 ಅಂತಸ್ತುಗಳ 1 ಲಕ್ಷ 10 ಸಾವಿರ ಚ.ಅಡಿ ವಿಸ್ತೀರ್ಣದ ವಿಶಾಲ ಮಳಿಗೆಯ ನೆಲ ಅಂತಸ್ತಿನಲ್ಲಿ ಆರ್ಟ್ ಫ್ಯಾಶನ್ಸ್ ಜುವೆಲರಿ, ಬ್ರ್ಯಾಂಡೆಡ್ ವಾಚ್‌ಗಳು, ಹ್ಯಾಂಡ್‌ಲೂಮ್ ಸೆಕ್ಷನ್ ಹಾಗೂ ಪುರುಷ-ಮಹಿಳೆಯರ ಇನ್ನರ್ ಗಾರ್ಮೆಂಟ್ಸ್ ವಿಭಾಗ, ಪ್ರಥಮ ಅಂತಸ್ತಿನಲ್ಲಿ ಎಲ್ಲ ಶ್ರೇಣಿಯ ಸೀರೆಗಳು, ಫ್ಯಾಶನೇಬಲ್ ಲೆಹೆಂಗಾ, ಗಾಗ್ರಾ ವಿಭಾಗ, ದ್ವಿತೀಯ ಅಂತಸ್ತಿನಲ್ಲಿ ಮದುವೆ ರೇಷ್ಮೆ ಸೀರೆಗಳ ಸಂಗ್ರಹ, ತೃತೀಯ ಅಂತಸ್ತಿನಲ್ಲಿ ಲೈಫ್ಸ್ಟೈಲ್, ಮಹಿಳೆಯರ ರೆಡಿಮೇಡ್ ವಿಭಾಗ, 4ನೇ ಅಂತಸ್ತಿನಲ್ಲಿ ಗಂಡು- ಹೆಣ್ಣು ಮಕ್ಕಳಿಗೆ ಬೇಕಾದ ಎಲ್ಲ ವಿಧದ ಉಡುಗೆ-ತೊಡುಗೆಗಳ ವಿಭಾಗ, 5ನೇ ಅಂತಸ್ತಿನಲ್ಲಿ ಬ್ರ್ಯಾಂಡೆಡ್ ಮೆನ್ಸ್‌ವೇರ್, ಮೆನ್ಸ್ ಎತ್ನಿಕ್‌ವೆàರ್, ಶರ್ಟಿಂಗ್/ಸೂಟಿಂಗ್ ವಿಭಾಗವಿರಲಿದೆ. ಒಂದೇ ಸೂರಿನಡಿ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲ ವಯೋಮಾನದವರಿಗೆ ಬೇಕಾಗುವ ಬಟ್ಟೆ-ಬರೆ ಗಳ ಅಪಾರ ಸಂಗ್ರಹವಿರ ಲಿದೆ. ಕಾರ್ ಪಾರ್ಕಿಂಗ್ ಮತ್ತು ವ್ಯಾಲೆಟ್ ಕಾರ್ ಪಾರ್ಕಿಂಗ್ (200 ಕಾರು) ಸೌಲಭ್ಯವಿದೆ. 700 ಮಂದಿ ಸಿಬಂದಿ ಗ್ರಾಹಕರ ಸೇವೆಗೆ ಲಭ್ಯವಿರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Karkala: ಬೈಕ್ ಢಿಕ್ಕಿ; ಗಾಯ
ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.