![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 24, 2023, 1:34 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ನಟ ಭುವನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ 12 ವರ್ಷಗಳಿಂದ ಪ್ರೇಮ ಬಂಧದಲ್ಲಿದ್ದ ಜೋಡಿ ಈಗ ವೈವಾಹಿಕ ಬಂಧಕ್ಕೆ ಒಳಗಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಹರ್ಷಿಕಾ ಹಾಗೂ ಭುವನ್ ಇಬ್ಬರು ಚಿರಪರಿಚತರೇ. ತಮ್ಮ ಪ್ರೀತಿಯ ವಿಚಾರವನ್ನು ಮೊದಲು ಇಬ್ಬರು ಎಲ್ಲೂ ಕೂಡ ರಟ್ಟು ಮಾಡಿಲ್ಲ. ಕೆರಿಯರ್ ನಲ್ಲಿ ಫೋಕಸ್ ಆಗುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ನಟಿ ಹರ್ಷಿಕಾ ಈ ಹಿಂದೆ ಹೇಳಿದ್ದರು.
ಮದುವೆಯ ಶಾಸ್ತ್ರದ ಮುನ್ನವೇ ನಟಿ ಹರ್ಷಿಕಾ ಭುವನ್ ಪೊನ್ನಣ್ಣ ಅವರ ಗೃಹ ಪ್ರವೇಶ (ಊರ್ಕುಡುವ ಶಾಸ್ತ್ರ) ಮಾಡಿದ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮನೆಯನ್ನು ಹರ್ಷಿಕಾ ಅವರಿಗಾಗಿಯೇ ನಿರ್ಮಿಸಲಾಗಿದೆ.
ಅದರಂತೆ ಗುರುವಾರ(ಆ.24 ರಂದು) ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದ ಅನುಸಾರವಾಗಿ ಗುರು – ಹಿರಿಯರ ಸಮ್ಮುಖದಲ್ಲಿ ಹರ್ಷಿಕಾ – ಭುವನ್ ಅವರ ವಿವಾಹ ಶಾಸ್ತ್ರಗಳು ನೆರವೇರಿದೆ.
ಫ್ಯಾಶನ್ ಶೋವೊಂದರಲ್ಲಿ ಮೊದಲ ಬಾರಿಗೆ ಹರ್ಷಿಕಾ – ಭುವನ್ ಭೇಟಿಯಾಗಿದ್ದರು. ಮೊದಲಿಗೆ ಭುವನ್ ಹರ್ಷಿಕಾ ಅವರಿಗೆ ಪ್ರಪೋಸ್ ಮಾಡಿದ್ದರು. ಈ ವೇಳೆ ಹರ್ಷಿಕಾ ಅವರಿಗೆ ಉತ್ತರಿಸಲು ಒಂದೇ ದಿನದ ಅವಕಾಶ ನೀಡಿದ್ದರು. ಒಂದೇ ದಿನದಲ್ಲಿ ಹರ್ಷಿಕಾ, ಭುವನ್ ಪ್ರೀತಿಯ ಪ್ರಪೋಸಲ್ ಗೆ ಓಕೆ ಎಂದಿದ್ದರು.
ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಬಿಎಸ್ ವೈ, ನಟ ತಬಲಾ ನಾಣಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಹರ್ಷಿಕಾ ʼಚಿಟ್ಟೆʼ ಎಂದೇ ಖ್ಯಾತರಾಗಿದ್ದಾರೆ. ʼಚಾರ್ ಮಿನಾರ್ʼ, ʼರೇʼ, ʼಜಾಕಿʼ,ʼ ಉಪೇಂದ್ರ ಮತ್ತೆ ಬಾʼ, ʼಕಾಸಿನ ಸರʼ ಮುಂತಾದ ಅನೇಕ ಚಿತ್ರದಲ್ಲಿ ಹರ್ಷಿಕಾ ನಟಿಸಿದ್ದಾರೆ. ಇನ್ನು ರಿಯಾಲಿಟಿ ಶೋದಿಂದ ಮಿಂಚಿದ ಭುವನ್ ʼಕುಚ್ಚಿಕು ಕುಚ್ಚಿಕುʼ, ʼರಾಂಧವʼ ಸಿನಿಮಾದಲ್ಲಿ ನಟಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.