Varalakshmi Vratham: ಅಧಿದೇವತೆಯ ಹಬ್ಬ: ಗಗನಕ್ಕೇರಿದ ಹಣ್ಣು, ಹೂವಿನ ಬೆಲೆ!


Team Udayavani, Aug 24, 2023, 2:34 PM IST

TDY-3

ಚನ್ನಪಟ್ಟಣ: ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬಗಳು ಬರಲಿವೆ ಅಂತೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ ಇರುವಾಗಲೂ ಜನತೆಯಲ್ಲಿ ವಿಶೇಷವಾಗಿ ಗೃಹಿಣಿಯರಲ್ಲಿ ಅಷ್ಟೇನೂ ಲವಲವಿಕೆ, ಉತ್ಸಾಹ ಗರಿಗೆದರಿದ ಲಕ್ಷಣಗಳು ಕಾಣುತ್ತಿಲ್ಲ.

ಈ ಬಾರಿ ಬರದ ಛಾಯೆ ರಾಮನಗರ ಜಿಲ್ಲೆಯ ಜೊತೆಗೆ ಚನ್ನಪಟ್ಟಣ ತಾಲೂಕನ್ನು ಆವರಿಸಿದ್ದು, ಇದರ ಜೊತೆಗೆ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣಿನ ದರ ದುಬಾರಿ ಯಾಗಿ ಪರಿಣಮಿಸಿ ರುವುದು ಹಬ್ಬ ಮಾಡಲು ಜನತೆ ಉತ್ಸಾಹ ತೋರದೆ ಹಿಂಜರಿಯುವ ಲಕ್ಷಣ ಗಳು ಗೋಚರಿಸುತ್ತಿವೆ.

ವರ್ತಕರು ಹಾಗೂ ಹೂ, ಹಣ್ಣು ಗಳ ವ್ಯಾಪಾರಸ್ಥರು ಕೂಡ ಮಾರು ಕಟ್ಟೆಯಲ್ಲಿ ಕೊಂಚ ಮಂಕಾದಂತೆ ಕಂಡು ಬರುತ್ತಿರುವುದು ಕೂಡ ಅಚ್ಚರಿ ಯಾದರೂ ಸತ್ಯವಾಗಿದೆ. ದಿನಬಳಕೆಯ ವಸ್ತುಗಳ ಜೊತೆಗೆ ತರಕಾರಿ, ಹಣ್ಣು, ಹೂಗಳ ನಾಗಲೋಟದ ದರದಿಂದಾಗಿ, ಸಂಪತ್ತಿನ ಅಧಿ ದೇವತೆಯ ಹಬ್ಬವು ಗ್ರಾಹಕರಿಗೆ ದುಬಾರಿ ಎನಿಸಿದೆ.

ಹೂವುಗಳ ಪೈಕಿ ಕನಕಾಂಬರ ದರ ಕೆ.ಜಿ.ಗೆ 1,500ಕ್ಕೆ ಏರಿಕೆಯಾಗಿದೆ. ಮಲ್ಲಿಗೆ 250ರಿಂದ 500ರ ಗಡಿ ತಲುಪಿದೆ. ಹಾರಗಳ ದರವೂ ಹೆಚ್ಚಳವಾಗಿದೆ. 60 ಇದ್ದ ಚಿಕ್ಕ ಹಾರದ ದರ 150ಕ್ಕೆ ಹಾಗೂ ದೊಡ್ಡ ಹಾರವು 300ರಿಂದ 500ಕ್ಕೆ ಏರಿಕೆಯಾಗಿದೆ.

ದರ ಕೇಳಿದರೆ ಆಘಾತ ಖಚಿತ: “ಪೂಜೆಗಾಗಿ ಹೂವು ಮತ್ತು ಹಣ್ಣು ಖರೀದಿ ಮಾರುಕಟ್ಟೆಗೆ ಬರು ವವರಿಗೆ ದರ ಕೇಳಿದರೆ ಶಾಕ್‌ ಆಗುವುದು ಖಚಿತ. ನೆನ್ನೆ ಖರೀದಿಸಿದಾಗ ಇದ್ದ ದರವು, ಇಂದು ದುಪ್ಪಟ್ಟಾ ಗಿರುವುದು ಜೀಬಿಗೂ ಕತ್ತರಿ ಬೀಳುವಂತೆ ಮಾಡಿದೆ’ ಎನ್ನುತ್ತಾರೆ ನಗರವಾಸಿ ಗೃಹಿಣಿ, ಶಿಕ್ಷಕಿ ಪ್ರಭಾ.” ಆದರೂ, ಹಬ್ಬದ ಅನಿವಾರ್ಯತೆಯಿಂದಾಗಿ ಖರೀ ದಿಯಿಂದ ಹಿಂದೆ ಸರಿಯವಂತಿಲ್ಲ. ವರ್ಷ ಕ್ಕೊಮ್ಮೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿ, ಸಂಪತ್ತಿ ಗಾಗಿ ಪ್ರಾರ್ಥಿಸುವುದನ್ನು ತಪ್ಪಿಸುವುದಿಲ್ಲ. ಯಾವಾ ಗಲೂ ಹೂವುಗಳಿಗೆ ಇದೇ ದರ ಇರುವುದಿಲ್ಲವಲ್ಲ. ಹಾಗಾ ಗಿ, ನಾವೂ ಅಡೆjಸ್ಟ್‌ ಮಾಡಿ ಕೊಳ್ಳಬೇಕು’ ಎಂದೂ ಗೃಹಿಣಿಯರು ಸಮರ್ಥನೆ ಮಾಡಿ ಕೊಳ್ಳುತ್ತಾರೆ.

ಕೃತಕ ಅಭಾವ: “ಹಬ್ಬದ ಸಂದರ್ಭದಲ್ಲಿ ಗ್ರಾಹಕ ರಿಂದ ಹೂವುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ರೈತರು ಹಬ್ಬಕ್ಕೆ ಮುಖ್ಯವಾಗಿ ಬಳಸುವ ಕನಕಾಂಬರ, ಸೇವಂತಿಗೆ ಹಾಗೂ ಗುಲಾಬಿ ಯನ್ನು ಹೆಚ್ಚಾಗಿ ಕೀಳದೆ ಹಾಗೆಯೇ ಬಿಟ್ಟಿರುತ್ತಾರೆ. ಇದ ರಿಂದಾಗಿ, ಮಾರುಕಟ್ಟೆಯಲ್ಲಿ ಸ್ವಲ್ಪ ಅಭಾವ ಉಂಟಾ ಗುತ್ತದೆ’ ಎಂದು ಹೆಸರು ಹೇಳಲಿಚ್ಚಿಸದ ವ್ಯಾಪಾರಿ ಯೊಬ್ಬರ ಅಭಿಪ್ರಾಯವಾಗಿದೆ.

“ಹಬ್ಬದ ವಾರ ಬಂದಾಗ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಇದೇ ಸಂದರ್ಭಕ್ಕಾಗಿ ಕಾಯುವ ರೈತರು, ಹೂವು ಕೀಳತೊಡಗುತ್ತಾರೆ. ಬೇಡಿಕೆ ಹೆಚ್ಚಳದ ಜೊತೆಗೆ ದರವು ಏರಿಕೆಯಾಗುತ್ತದೆ. ಗ್ರಾಹ ಕರಿಗೆ ಸ್ವಲ್ಪ ಹೊರೆ ಎನಿಸಿದರೂ, ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಒಂದೇ ದಿನದಲ್ಲಿ ದರ ದುಪ್ಪಟ್ಟಾಗಿದೆ:

ಆಷಾಢ ಮಾಸ ಕಳೆದು ಅಧಿಕ ಶ್ರಾವಣ ಮಾಸ ಬಂದಿದ್ದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಎರಡು ತಿಂಗಳಿಂದ ಹೂವುಗಳ ದರವೂ ಇಳಿಮುಖವಾಗಿತ್ತು. ಹಬ್ಬದ ವಾರ ಆರಂಭವಾ ಗುತ್ತಿದ್ದಂತೆ, ಒಂದೇ ದಿನದಲ್ಲಿ ಬೆಲೆಯು ದುಪ್ಪಟ್ಟಾಗಿದೆ. ಇದರ ಜೊತೆಗೆ, ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.

ಹಬ್ಬಕ್ಕೆ ಹೂವಿನಷ್ಟೇ ಹಣ್ಣುಗಳಿಗೂ ಬೇಡಿಕೆ ಹೆಚ್ಚು. ಹಾಗಾಗಿ, ಹೂವಿನ ದರದ ಜೊತೆಗೆ ಹಣ್ಣುಗಳ ದರವೂ ಏರುಗತಿಯಲ್ಲಿ ಸಾಗಿದೆ. ಪ್ರತಿ ಕೆ.ಜಿ.ಗೆ ?180 ಇದ್ದ ಸೇಬಿನ ದರ ಇದೀಗ ? 250ಕ್ಕೆ ಹೆಚ್ಚಳವಾಗಿದೆ. ಏಲಕ್ಕಿ ಬಾಳೆಹಣ್ಣು 120ರಿಂದ 160ಕ್ಕೆ ಜಿಗಿದಿದೆ. ಜೋಡಿ (2) ಪೈನಾಪಲ್‌ ಹಣ್ಣಿನ ದರ 60ರಿಂದ 100 ಆಗಿದೆ.

ಹೂವಿನ ದರವನ್ನು ಕೇಳಿ ಆಶ್ಚರ್ಯ ವ್ಯಕ್ತಪಡಿಸುತ್ತಿರುವ ಗ್ರಾಹಕರು ಒಂದು ಕೆ.ಜಿ ಖರೀದಿಸುವ ಬದಲು ಅರ್ಧ ಕೆ.ಜಿ. ಖರೀದಿಸಿ ಕೊಂಡು ಹೋಗು ತ್ತಿದ್ದಾರೆ. ಇದೇ ರೀತಿ ಎರಡು ಕೆ.ಜಿ. ಖರೀದಿಸಲು ಬರುವವರು ದರ ಕೇಳಿ ಹೌಹಾರಿ, ತಾವಂದುಕೊಂಡಕ್ಕಿಂತ ಅರ್ಧ ಕೊಂಡುಕೊಳ್ಳುತ್ತಾರೆ.-ಜಯಮ್ಮ, ಹೂವಿನ ವ್ಯಾಪಾರಿ, ಚನ್ನಪಟ್ಟಣ

ಶ್ರಾವಣ ಮಾಸದಲ್ಲಿ ಹಣ್ಣುಗಳ ಪೂರೈಕೆ ಸ್ವಲ್ಪಮಟ್ಟಿಗೆ ಕಡಿಮೆ ಇರಲಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಳವಾ ಗಿರುವುದರಿಂದ ದರವೂ ಏರಿಕೆಯಾಗು ವುದು ಮಾಮೂಲು. ದರ ಇಷ್ಟಕ್ಕೇ ನಿಲ್ಲು ವುದಿಲ್ಲ’ “ವರಮಹಾಲಕ್ಷ್ಮೀ ಹಬ್ಬದ ವಾರ ಈಗಷ್ಟೇ ಆರಂಭವಾಗಿದೆ. ಹಬ್ಬದ ದಿನ ವಾದ ಶುಕ್ರವಾರ ದವರೆಗೂ ಹೂವು ಮತ್ತು ಹಣ್ಣಿನ ವ್ಯಾಪಾರ ಜೋರಾಗಿ ಇರ ಲಿದೆ. ಹಬ್ಬದ ದಿನದ ಹೊತ್ತಿಗೆ ಹಣ್ಣುಗಳ ದರ ಮತ್ತಷ್ಟು ಏರಿಕೆಯಾಗಬಹುದು.  -ಶಿವಕುಮಾರ್‌,ಹಣ್ಣಿನ ವ್ಯಾಪಾರಿ, ಚನ್ನಪಟ್ಟಣ

ಎಂ.ಶಿವಮಾದು

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.