World Badminton ಚಾಂಪಿಯನ್ಶಿಪ್ ಸಾತ್ವಿಕ್-ಚಿರಾಗ್ ಕ್ವಾರ್ಟರ್ಫೈನಲಿಗೆ
Team Udayavani, Aug 24, 2023, 10:59 PM IST
ಕೋಪನ್ಹೆಗನ್: ಭಾರತದ ಸ್ಟಾರ್ ಡಬಲ್ಸ್ ಆಟಗಾರರಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೂರು ಗೇಮ್ಗಳ ಹೋರಾಟದಲ್ಲಿ ಜಯ ಸಾಧಿಸಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ ಹಂತಕ್ಕೇರಿದರು. ಇನ್ನೊಂದು ಹೆಜ್ಜೆ ಮುಂದಿಟ್ಟರೆ ಅವರು ಪದಕ ಗೆಲ್ಲುವ ಸಾಧ್ಯತೆಯಿದೆ.
ವಿಶ್ವದ ಎರಡನೇ ರ್ಯಾಂಕಿನ ಸಾತ್ವಿಕ್-ಚಿರಾಗ್ ಅವರು ಇಂಡೋನೇಶ್ಯದ ಲಿಯೊ ರಾಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ಅವರನ್ನು 21-15, 19-21, 21-9 ಗೇಮ್ಗಳಿಂದ ಉರುಳಿಸಿ ಮುನ್ನಡೆದರು. ಕಳೆದ ಋತುವಿನಲ್ಲಿ ಇಲ್ಲಿ ಚೊಚ್ಚಲ ಬಾರಿ ಕಂಚಿನ ಪದಕ ಜಯಿಸಿದ್ದ ಸಾತ್ವಿಕ್-ಚಿರಾಗ್ ಈ ಋತುವಿನಲ್ಲಿ ಭಾರೀ ಫಾರ್ಮ್ನಲ್ಲಿದ್ದಾರೆ. ನಾಲ್ಕು ಪ್ರಶಸ್ತಿ ಗೆದ್ದಿರುವ ಅವರು ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕೂಡ ಆಗಿದ್ದಾರೆ.
ತ್ರೀಸಾ- ಗಾಯತ್ರಿ ಜೋಡಿಗೆ ಸೋಲು
ಭಾರತದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ವನಿತಾ ಡಬಲ್ಸ್ ವಿಭಾಗದ ಪ್ರಿ- ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕಠಿನ ಹೋರಾಟ ನಡೆಸಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.
ವಿಶ್ವದ 19ನೇ ರ್ಯಾಂಕಿನ ತ್ರೀಸಾ- ಗಾಯತ್ರಿ ಅವರು 42 ನಿಮಿಷಗಳ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಚೀನದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫಾನ್ ಅವರ ವಿರುದ್ಧ 14-21, 9-21 ಗೇಮ್ಗಳಿಂದ ಶರಣಾ ದರು.ಭಾರತದ ಜೋಡಿಯು ಚೀನದ ಎದುರಾಳಿಯನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಜರ್ಮನ್ ಓಪನ್ನಲ್ಲೂ ಭಾರತೀಯ ಜೋಡಿ ಎದುರಾಗಿದ್ದು ಸೋತಿದ್ದರು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಚೆನ್-ಜಿಯಾ ಅವರು ಮೂರು ಬಾರಿ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಬೈ ಸಿಕ್ಕಿತ್ತು. ಆರಂಭದಲ್ಲಿ 5-2 ಮುನ್ನಡೆ ಸಾಧಿಸುವ ಮೂಲಕ ಚೆನ್-ಜಿಯಾ ಅವರು ಉತ್ತಮ ಆರಂಭ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.