ISRO: ಸೆಪ್ಟಂಬರ್‌ನಲ್ಲಿ ಸೂರ್ಯನತ್ತ

ಸೂರ್ಯ ಅಧ್ಯಯನಕ್ಕಾಗಿ ಬಾಹ್ಯಾಕಾಶ ವೀಕ್ಷಕ: ಇಸ್ರೋ ಅಧ್ಯಕ್ಷ ಸೋಮನಾಥ್‌ ಘೋಷಣೆ

Team Udayavani, Aug 24, 2023, 11:27 PM IST

aditya l 1

ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯ ವಿಶೇಷ ಏನು?
ಬಾಹ್ಯಾಕಾಶ ವೀಕ್ಷಕ ಉಪಗ್ರಹ ಇದು. ಪಿಎಸ್‌ಎಲ್‌ವಿ ರಾಕೆಟ್‌ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೂಯ್ಯಲಿದೆ. ನಮ್ಮ ಸೌರವ್ಯೂಹದ ಕೇಂದ್ರವಾದ ನಕ್ಷತ್ರ ಸೂರ್ಯನ ಅಧ್ಯಯನ ನಡೆಸಿ ವಿಶೇಷ ಮಾಹಿತಿಗಳನ್ನು ಆದಿತ್ಯ ಒದಗಿಸಲಿದೆ. ಸೌರ ಚಟುವಟಿಕೆಗಳ ವಿವರಗಳನ್ನು ಅರಿಯುವುದು, ಬಾಹ್ಯಾಕಾಶ ಹಾಗೂ ಭೂಮಿಯ ವಾತಾವರಣದ ಮೇಲೆ ಸೌರ ಚಟುವಟಿಕೆಗಳ ಪ್ರಭಾವವನ್ನು ತಿಳಿಯುವುದು ಮೂಲ ಉದ್ದೇಶ.

ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಆದಿತ್ಯ -ಎಲ್‌1 ನೌಕೆಯನ್ನು ಸ್ಥಾಪಿಸಲಾಗುತ್ತದೆ. ಈ ಸ್ಥಾನದಲ್ಲಿ ಭೂಮಿ ಮತ್ತು ಸೂರ್ಯ- ಎರಡರ ಗುರುತ್ವಾಕರ್ಷಣೆಯ ಸೆಳೆತ ಸಮಾನವಾಗಿದ್ದು, ನೌಕೆ ಸ್ಥಿರವಾಗಿರಲು ಸಾಧ್ಯ. ಇಂಥ ಸ್ಥಾನಗಳಿಗೆ ಲ್ಯಾಗ್‌ರೇಂಜ್‌ ಪಾಯಿಂಟ್‌ (ಎಲ್‌1) ಎಂದು ಹೆಸರು. ಇದರಿಂದ ನೌಕೆಗೆ ಸೂರ್ಯನ ಮೇಲೆ ಸತತ ಕಣ್ಣಿಡಲು ಸಾಧ್ಯವಾಗಲಿದೆ.
ಈ ನೌಕೆಯಲ್ಲಿ 7 ಪೇಲೋಡ್‌ಗಳಿರುತ್ತವೆ. ಎಲ್ಲವೂ ಸೂರ್ಯನ ಫೊಟೊಸ್ಪಿಯರ್‌, ಕ್ರೊಮೊಸ್ಪಿಯರ್‌ ಮತ್ತು ಕರೊನಾವನ್ನು ಅಧ್ಯಯನ ಮಾಡಲಿವೆ. ಎಲೆಕ್ಟ್ರೊ ಮ್ಯಾಗ್ನೆಟಿಕ್‌, ಪಾರ್ಟಿಕಲ್‌, ಮ್ಯಾಗ್ನೆಟಿಕ್‌ ಫೀಲ್ಡ್‌ ಡಿಟೆಕ್ಟರ್‌ಗಳನ್ನು ಬಳಸಿ ಅಧ್ಯಯನ ನಡೆಸಲಾಗುತ್ತದೆ.

ಏಳು ಪೇಲೋಡ್‌ಗಳ ಪೈಕಿ 4 ಸೂರ್ಯನತ್ತ ಕಣ್ಣಿಡಲಿದ್ದರೆ ಉಳಿದವು ಎಲ್‌1 ಸ್ಥಾನದಲ್ಲಿ ಪಾರ್ಟಿಕಲ್‌ಗ‌ಳು ಮತ್ತು ಫೀಲ್ಡ್‌ನ ಅಧ್ಯಯನ ಮಾಡಲಿವೆ.
ಇದರೊಂದಿಗೆ ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿರುವ ಜಗತ್ತಿನ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ.

ಜಪಾನ್‌ ಸಖ್ಯದಲ್ಲಿ ಚಂದ್ರಯಾನ-4
ಇಸ್ರೋ 2024-25ನೇ ಸಾಲಿನಲ್ಲಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ, ಜಕ್ಸಾ ಜತೆಗೆ ಚಂದ್ರಯಾನ-4ನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದಕ್ಕೆ ಲ್ಯೂಪೆಕ್ಸ್‌ ಎಂದು ಹೆಸರಿಸಲಾಗಿದೆ. ಚಂದ್ರನ ಧ್ರುವ ಭಾಗದಲ್ಲಿ ಇರುವ ನೀರಿನ ಅಂಶವನ್ನು ಬಳಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತದೆ. ಈಗ ಬಳಸಿದ್ದಕ್ಕಿಂತ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಲು ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಮುಂದಾಗಿವೆ. ಅಲ್ಲಿ ಗಣಿಗಾರಿಕೆ ನಡೆಸುವ ನಿಟ್ಟಿನಲ್ಲಿ ಚಂದ್ರನ ಮೇಲ್ಮೆ„ಯನ್ನು ಅಗೆಯುವ ಸಾಮರ್ಥ್ಯ ಇರುವ ಸಲಕರಣೆಗಳ ಸೇರ್ಪಡೆಗೆ ಚಿಂತನೆ ನಡೆಸಲಾಗುತ್ತಿದೆ.

ದಕ್ಷಿಣದಲ್ಲಿ ಸುತ್ತಾಟ
ಚಂದ್ರನ ದಕ್ಷಿಣ ಪಥದಲ್ಲಿ ಇಳಿದ ಮಾರನೇ ದಿನ, ಗುರುವಾರ ರೋವರ್‌ ಯಶಸ್ವಿಯಾಗಿ ಒಂದು ಹಂತದ ಸುತ್ತಾಟ ನಡೆಸಿದೆ. ಈ ಬಗ್ಗೆ ಇಸ್ರೋ ಟ್ವೀಟ್‌ ಮಾಡಿದೆ. ರೋವರ್‌ 500 ಮೀಟರ್‌ ವರೆಗೆ ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿದೆ. ಒಂದು ಚಂದ್ರನ ದಿನ ಅಂದರೆ 14 ದಿನಗಳ ವರೆಗೆ ಅದು ಕೆಲಸ ಮಾಡಲಿದೆ.

ವೈಜ್ಞಾನಿಕ ಸಂಶೋಧನೆಗೆ ಅವಕಾಶ
ಚಂದ್ರನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅವಕಾಶಗಳು ಇವೆ. ಹೀಗಾಗಿ ಅಲ್ಲಿಗೆ ತೆರಳುವ ಆಯ್ಕೆ ಮಾಡಲಾಯಿತು. ಅಲ್ಲಿ ನೀರು ಮತ್ತು ಖನಿಜಗಳು ಇವೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಮುಂದಿನ 14 ದಿನಗಳ ಕಾಲ ರೋವರ್‌ ಸಂಶೋಧನೆ ನಡೆಸಲಿದೆ. ಇದು ನಮ್ಮ ಪ್ರಯೋಗಕ್ಕೆ ನೆರವಾಗಲಿದೆ ಎಂದು ಎಸ್‌. ಸೋಮನಾಥ್‌ ಹೇಳಿದರು.

ಎಲ್ಲವೂ ಸಕ್ರಿಯ
ಲ್ಯಾಂಡರ್‌ನಲ್ಲಿ ಇರುವ ಐಎಲ್‌ಎಸ್‌ಎ, ರಂಭಾ (ಆರ್‌ಎಎಂಬಿಎಚ್‌ಎ), ಚೇಸ್ಟ್‌ (ಸಿಎಚ್‌ಎಎಸ್‌ಟಿಇ) ಪೇಲೋಡ್‌ಗಳನ್ನು ಗುರುವಾರ ಆನ್‌ ಮಾಡಲಾಗಿದೆ. ರೋವರ್‌ ಸಂಚರಿಸಲು ಆರಂಭಿಸಿದೆ ಎಂದು ಇಸ್ರೋ ಟ್ವೀಟ್‌ ಮಾಡಿದೆ.

 

 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.