Panaji: ಹೊಟೇಲ್ ಕೊಠಡಿಯಲ್ಲಿ ಅತ್ಯಾಚಾರವೆಸಗಿ ಕೊಲೆ ಬೆದರಿಕೆ, ಆರೋಪಿ ಬಂಧನ
Team Udayavani, Aug 25, 2023, 2:14 PM IST
ಪಣಜಿ: ಯುವತಿಯನ್ನು ಹೋಟೆಲ್‍ಗೆ ಕರೆದು ಅತ್ಯಾಚಾರವೆಸಗಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಗುಜರಾತಿ ವ್ಯಕ್ತಿಯನ್ನು ಕೊಲ್ವಾಳ ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಮತ್ತು ಸಂತ್ರಸ್ತೆ ವಿಮಾನದಲ್ಲಿ ಪ್ರಯಾಣಿಸುವಾಗ ಭೇಟಿಯಾದರು. 23 ವರ್ಷದ ಸಂತ್ರಸ್ತೆ ಕೊಲ್ವಾಳ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಮತ್ತು ಸಂತ್ರಸ್ತೆ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಅವರ ಪರಿಚಯವಾಯಿತು. ಬಳಿಕ ಆಕೆಯೊಂದಿಗೆ ಸ್ನೇಹ ಬೆಳೆಸಿದ ಆರೋಪಿ ಆಕೆಯ ಫೋನ್ ನಂಬರ್ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸಂತ್ರಸ್ತೆ ಗೋವಾದಲ್ಲಿದ್ದು, ಶಂಕಿತ ವ್ಯಕ್ತಿಯೂ ಗೋವಾದಲ್ಲಿದ್ದ. ಶಂಕಿತ ವ್ಯಕ್ತಿ ಅಸ್ನೋಡಾದ ಸ್ಟಾರ್ ಹೋಟೆಲ್‍ಗೆ ಬಂದಿಳಿದಿದ್ದ. ಹೊಟೇಲ್‍ನ ಸೌಲಭ್ಯಗಳನ್ನು ತೋರಿಸುವ ನೆಪದಲ್ಲಿ ಸಂತ್ರಸ್ತೆಯನ್ನು ಹೋಟೆಲ್‍ಗೆ ಕರೆದಿದ್ದಾನೆ. ಸಂತ್ರಸ್ತೆ ಒಂಟಿತನದ ಲಾಭ ಪಡೆದ ಆರೋಪಿ ಆಕೆಯನ್ನು ತನ್ನ ರೆಸಾರ್ಟ್ ರೂಮಿಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಮತ್ತು ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ದಾಖಲಾದ ತಕ್ಷಣ ಕೊಲ್ವಾಲ್ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೊಬೈಲ್ ಲೊಕೇಶನ್ ನಿಂದ ಅನುಮಾನಾಸ್ಪದ ವ್ಯಕ್ತಿ ರೆಸಾರ್ಟ್ ತೊರೆದು ಪಣಜಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಎಂದು ತಿಳಿದು ಬಂದಿದೆ.
ತಂಡ ಪಣಜಿ ಪ್ರದೇಶದಲ್ಲಿ ಆತನಿಗಾಗಿ ಹುಡುಕಾಟ ಆರಂಭಿಸಿದೆ. ಇದರ ನಂತರ, ಶಂಕಿತ ವ್ಯಕ್ತಿ ಮ್ಹಪ್ಶಾ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ. ಅಂತಿಮವಾಗಿ, ಶಂಕಿತ ಲಕ್ಷ್ಮಣ ಭಾಯ್ ಶಿಯಾರ್ (45, ಗುಜರಾತ್ ನಿವಾಸಿ) ನನ್ನು ಥಿವಿ ಪ್ರದೇಶದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲ್ವಾಲ್ ಠಾಣೆಯ ಪಿಐ ವಿಜಯ್ ರಾಣೆ, ಎಲ್‍ಪಿಎಸ್‍ಐ ಸೋನಮ್ ವೆರೆಂಕರ್, ಪಿಎಸ್‍ಐ ರೋಹನ್ ಮಡ್ಗಾಂವ್ಕರ್, ಹೆಡ್ ಕಾನ್‍ಸ್ಟೇಬಲ್ ರೂಪೇಶ್, ಪೊಲೀಸ್ ಕಾನ್‍ಸ್ಟೇಬಲ್ ಸುಲೇಶ್, ಅಜಯ್ ಅವರ ನೇತೃತ್ವದಲ್ಲಿ ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಮತ್ತು ಮಾಪ್ಸಾ ಎಸ್‍ಡಿಪಿಒ ಜಿವಾಬಾ ದಳವಿ ಅವರ ಮಾರ್ಗದರ್ಶನದಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಎಲ್‍ಪಿಎಸ್‍ಐ ಸೋನಮ್ ವೆರೆಂಕರ್ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.