Mukesh Ambani: ಮುಖೇಶ್ ಅಂಬಾನಿಯ ಮ್ಯಾನ್ ಹಟ್ಟನ್ ನ ಐಶಾರಾಮಿ ನಿವಾಸ ಮಾರಾಟ…
ಡಿಸೈನರ್ ಮಾರ್ಕ್ ಜಾಕೋಬ್ಸ್ ಹಾಗೂ ಕೋಟ್ಯಧಿಪತಿ ಲೆಸ್ಲೈ ಅಲೆಕ್ಸಾಂಡರ್ ವಾಸವಾಗಿದ್ದರು.
Team Udayavani, Aug 25, 2023, 3:51 PM IST
ನ್ಯೂಯಾರ್ಕ್: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಆಡಳಿತ ನಿರ್ದೇಶಕರಾಗಿರುವ ಉದ್ಯಮಿ ಮುಕೇಶ್ ಅಂಬಾನಿ ನ್ಯೂಯಾರ್ಕ್ ನ ಮ್ಯಾನ್ ಹಟ್ಟನ್ ನಲ್ಲಿರುವ ತಮ್ಮ ಐಶಾರಾಮಿ ಅಪಾರ್ಟ್ ಮೆಂಟ್ ಅನ್ನು 74 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ:ಯೋಗರಾಜ್ ಭಟ್ರ ‘ಕರಟಕ ದಮನಕ’ದಲ್ಲಿ ಶಿವಣ್ಣ- ಪ್ರಭುದೇವ ಬ್ಯುಸಿ
ಮ್ಯಾನ್ ಹಟ್ಟನ್ ನಲ್ಲಿರುವ ಅಂಬಾನಿಯವರ ಅಪಾರ್ಟ್ ಮೆಂಟ್ 2,406 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಎರಡು ಕೋಣೆ, ಹಾಲ್ ಮತ್ತು ಶೌಚಾಲಯನ್ನೊಳಗೊಂಡಿದೆ. ಈ ಮನೆಯಿಂದ ಹಡ್ಸನ್ ನದಿಯನ್ನು ವೀಕ್ಷಿಸಬಹುದಾಗಿದೆ.
ಹತ್ತು ಅಡಿ ಎತ್ತರದ ಗೋಡೆ, ಅತ್ಯಾಧುನಿಕ ಅಡುಗೆ ಕೋಣೆ, ಸೌಂಡ್ ಫ್ರೂಫ್ ಕಿಟಕಿ, ಆಕರ್ಷಕ ಪೀಠೋಪಕರಣಗಳು ಈ ಅಪಾರ್ಟ್ ಮೆಂಟ್ ನಲ್ಲಿರುವುದಾಗಿ ವರದಿ ತಿಳಿಸಿದೆ. ಅಂಬಾನಿ ನಿವಾಸದ ಈ ಅಪಾರ್ಟ್ ಮೆಂಟ್ ಗೆ ಸುಪೀರಿಯರ್ ಇಂಕ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಮೊದಲು ಅಪಾರ್ಟ್ ಮೆಂಟ್ ನಲ್ಲಿ ಹಿಲರಿ ಸ್ವಾಂಕ್, ನಾಸ್ಕರ್ ಜಿಮ್ಮೈ ಜಾನ್ಸನ್, ಡಿಸೈನರ್ ಮಾರ್ಕ್ ಜಾಕೋಬ್ಸ್ ಹಾಗೂ ಕೋಟ್ಯಧಿಪತಿ ಲೆಸ್ಲೈ ಅಲೆಕ್ಸಾಂಡರ್ ವಾಸವಾಗಿದ್ದರು.
1919ರಲ್ಲಿ ಸುಪೀರಿಯರ್ ಇಂಕ್ ಫ್ಯಾಕ್ಟರಿಯಾಗಿದ್ದ ಈ 17 ಅಂತಸ್ತಿನ ಕಟ್ಟಡವನ್ನು 2019ರಲ್ಲಿ ಜನರು ವಾಸಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಮ್, ಯೋಗ ಕೋಣೆ, ಮಕ್ಕಳ ಆಟದ ಕೋಣೆ ಮತ್ತು ಬೈಕ್ ರೂಂ, ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಪುನರ್ ನವೀಕರಣ ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.