Electric vehicle ಆಮದಿಗೆ ಭಾರೀ ತೆರಿಗೆ ವಿನಾಯಿತಿ?
Team Udayavani, Aug 26, 2023, 12:18 AM IST
ಹೊಸದಿಲ್ಲಿ: ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸಲು ಸಿದ್ಧವಿರುವ ಕಂಪೆನಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಮುಂದಾಗಿದೆ.ಇದಕ್ಕಾಗಿ ನೂತನ ನೀತಿಯನ್ನು ಸಿದ್ಧಪಡಿಸುತ್ತಿದೆ.
ಸ್ಥಳೀಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ, ವಿದ್ಯುತ್‌ಚಾಲಿತ ವಾಹನಗಳನ್ನು ಆಮದು ಮಾಡಿಕೊಳ್ಳಲು ಶೇ.15ರಷ್ಟು ಮಾತ್ರ ತೆರಿಗೆ ಹೇರಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ 40,000 ಡಾಲರ್ ಮೇಲ್ಪಟ್ಟ ಕಾರುಗಳಿಗೆ ಶೇ.100 ತೆರಿಗೆ, ಇತರೆ ಮೌಲ್ಯಗಳ ಕಾರುಗಳ ಆಮದಿಗೆ ಶೇ.70 ತೆರಿಗೆಯನ್ನು ಪಾವತಿಸಬೇಕಾಗುತ್ತಿತ್ತು.
ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಪ್ರಸ್ತಾವವಿಟ್ಟಿರುವ ಬೆನ್ನಲ್ಲೇ ತೆರಿಗೆ ಕಡಿತದ ವಿಚಾರ ಮಾನ್ಯತೆ ಪಡೆದುಕೊಂಡಿದೆ. ಇದರಿಂದ ಟೆಸ್ಲಾದ ಅತ್ಯಂತ ದುಬಾರಿ ವಿದ್ಯುತ್ ಚಾಲಿತ ವಾಹನಗಳು ಭಾರತಕ್ಕೆ ಬರಲು ಸಾಧ್ಯ ವಾಗಲಿದೆ. ಇದನ್ನು ನೋಡಿ ಇನ್ನೊಂದಷ್ಟು ಕಂಪೆ ನಿಗಳು ಭಾರತದಲ್ಲಿ ಉತ್ಪಾದನೆ ಆರಂ ಭಿಸಬಹುದು ಎನ್ನುವುದು ಕೇಂದ್ರ ಸರಕಾರದ ಲೆಕ್ಕಾಚಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.