Theft: ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಪತ್ನಿ ಕಳ್ಳ ಕೃತ್ಯ


Team Udayavani, Aug 26, 2023, 11:31 AM IST

tdy-3

ಬೆಂಗಳೂರು: ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಪತಿಗೆ ಬುದ್ಧಿ ಕಲಿಸಲೆಂದು ಸ್ನೇಹಿತರ ಬಳಿಯೇ ಚಿನ್ನ, ಸ್ಕೂಟರ್‌ ಕಳ್ಳತನ ಮಾಡಿಸಿ ಠಾಣೆಗೆ ದೂರು ಕೊಟ್ಟ ಪತ್ನಿಯ ಕಳ್ಳಾಟ ಕೊನೆಗೂ ಬಯಲಾಗಿದೆ.

ಧನರಾಜ್‌, ರಾಕೇಶ್‌ ಬಂಧಿತರು.  109 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ 2 ಬೈಕ್‌ ವಶಕ್ಕೆ ಪಡೆದುಕೊಂಡಿದ್ದಾರೆ.

ಮಲ್ಲೇಶ್ವರ ನಿವಾಸಿ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಮಹಿಳೆಯ ಪತಿ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದ. ಇದರಿಂದ ಬೇಸೆತ್ತ ಮಹಿಳೆ ಮನೆಯಲ್ಲಿರುವ ಚಿನ್ನಾಭರಣ, ದ್ವಿಚಕ್ರವಾಹನ ಕಳವಾಗಿದೆ ಎಂದರೆ ತನ್ನ ಪತಿ ಕೆಲಸಕ್ಕೆ ಹೋಗಬಹುದು ಎಂದು ಭಾವಿಸಿದ್ದಳು. ಈ ವಿಚಾರವನ್ನು ಆರೋಪಿಗಳಾದ ಧನರಾಜ್‌ ಹಾಗೂ ರಾಕೇಶ್‌ಗೆ ತಿಳಿಸಿದ್ದಳು. ತಾನು ರೂಪಿಸಿದ ಸಂಚಿನಂತೆ ಇತ್ತೀಚೆಗೆ ಪತಿಗೆ ತಿಳಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 109 ಗ್ರಾಂ ಚಿನ್ನ ಬಿಡಿಸಿಕೊಂಡು ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡು ಬಂದಿದ್ದಳು. ಮಲ್ಲೇಶ್ವರ 13ನೇ ಕ್ರಾಸ್‌ನಲ್ಲಿ ಸ್ಕೂಟರ್‌ ಅನ್ನು ನಿಲುಗಡೆ ಮಾಡಿ ಅದರ ಫ‌ುಟ್‌ಮ್ಯಾಟ್‌ನಡಿ ಗಾಡಿ ಕೀ ಇಟ್ಟಿದ್ದಳು. ಇದಾದ ಬಳಿಕ ತನ್ನ ಗೆಳೆಯ ಧನಂಜಯ್‌ಗೆ ಕರೆ ಮಾಡಿ ತಾನು ಸ್ಕೂಟರ್‌ ನಿಲುಗಡೆ ಮಾಡಿರುವ ಪ್ರದೇಶದ ಲೊಕೇಷನ್‌ ಅನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಳು. ಇತ್ತ ಧನಂಜಯ್‌ ಮಹಿಳೆಯ ಸೂಚನೆ ಮೇರೆಗೆ ತನ್ನ ಸ್ನೇಹಿತ ರಾಕೇಶ್‌ ಜತೆ ಬಂದು ಸ್ಕೂಟರ್‌ ಚಲಾಯಿಸಿಕೊಂಡು ಹೋಗಿದ್ದ.

ಕಳ್ಳತನ ಮಾಡಿಸಿ ದೂರು ಕೊಟ್ಟ ಪತ್ನಿ: ಇತ್ತ ಪತಿಯ ಬಳಿ ಬಂದು ಸ್ಕೂಟರ್‌ ಕಳ್ಳತನವಾಗಿದೆ ಎಂದು ಗಾಬರಿಯಿಂದ ಹೇಳಿದ್ದಾಳೆ. ಇದಾದ ಬಳಿಕ ಮಲ್ಲೇಶ್ವರ ಠಾಣೆಗೆ ಬಂದ ಮಹಿಳೆ ತಾನು ಸ್ಕೂಟರ್‌ ನಿಲುಗಡೆ ಮಾಡಿ ವಾಕಿಂಗ್‌ ಮಾಡಲು ಹೋಗಿ ಬರುವಷ್ಟರಲ್ಲಿ ಸ್ಕೂಟರ್‌ ಕದ್ದಿದ್ದಾರೆ ಎಂದು ದೂರು ನೀಡಿದ್ದಳು. ಸ್ಕೂಟರ್‌ ಡಿಕ್ಕಿಯಲ್ಲಿ ಚಿನ್ನ ಇಟ್ಟಿರುವ ಬಗ್ಗೆಯೂ ಮಾಹಿತಿ ನೀಡಿದ್ದಳು. ಇತ್ತ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಧನಂಜಯ್‌ ಹಾಗೂ ರಾಕೇಶ್‌ ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಕೂಡಲೇ ತಾಂತ್ರಿಕ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಠಾಣೆ ಕರೆ ತಂದಾಗ ಮಹಿಳೆಯ ಸೂಚನೆ ಮೇರೆಗೆ ಕಳ್ಳತನ ಮಾಡಿರುವುದಾಗಿ ನಡೆದ ಸಂಗತಿ ವಿವರಿಸಿದ್ದಾರೆ. ಆರೋಪಿಗಳ ಮೊಬೈಲ್‌ ಪರಿಶೀಲಿಸಿದಾಗ‌ ದೂರುದಾರ ಮಹಿಳೆಯ ಜತೆಗೆ ಆರೋಪಿಗಳು ಚಾಟಿಂಗ್‌ ಮಾಡಿರುವುದು, ಮಾತನಾಡಿರುವುದು ಪತ್ತೆಯಾಗಿದೆ.

ಪತಿ ಕೆಲಸಕ್ಕೆ ಹೋಗಬಹುದೆಂದು ಕೃತ್ಯ: 

ಪತಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಇದರಿಂದ ಪತ್ನಿ  ಆತಂಕಕ್ಕೀಡಾಗಿದ್ದಳು. ಪದೇ ಪದೆ ಕೆಲಸಕ್ಕೆ ತೆರಳುವಂತೆ ಒತ್ತಾಯ ಮಾಡಿದರೂ ಪತಿ ಮಾತ್ರ ಆಸಕ್ತಿ ತೋರಿಸುತ್ತಿರಲಿಲ್ಲ. ಇದರಿಂದ ನೊಂದು ಮಹಿಳೆ ಕೃತ್ಯ ಎಸಗಿದ್ದಾಳೆ. ಮನೆಯಲ್ಲಿದ್ದ ಮೌಲ್ಯಯುತ ವಸ್ತು ಕಳುವಾದ ಬಳಿಕ ಅರಿವಾಗಿ ಕೆಲಸಕ್ಕೆ ಹೋಗಬಹುದು ಎಂಬ ಭರವಸೆಯ ಲ್ಲಿದ್ದಳು. ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರೂ ಧರ್ಮ ಸಂಕಟಕ್ಕೆ ಸಿಲುಕಿದ್ದು, ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.