Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು

ಇಲ್ಲಿದ್ದ ಹಾವುಗಳಿಂದ ಒಂದು ಕುಟುಂಬವೇ ನಾಶವಾಗಿದೆಯಂತೆ

ಸುಧೀರ್, Aug 26, 2023, 5:15 PM IST

Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು

ಹಾವುಗಳ ಹೆಸರು ಕೇಳಿದರೆ ಸಾಕು ಮೈಯೆಲ್ಲಾ ಒಮ್ಮೆ ಜುಂ ಎನ್ನುತ್ತೆ…ಈಗಿನ ಕಾಲದಲ್ಲಿ ಹಾವುಗಳ ಸಂಖ್ಯೆ ವಿಪರೀತ ಕಡಿಮೆಯಾಗಿದೆ ಈ ಹಿಂದೆ ದಿನಕ್ಕೊಂದಾದರೂ ಹಾವುಗಳು ಕಣ್ಣಿಗೆ ಕಾಣುತ್ತಿತ್ತು ಆದರೆ ಈಗ ಅದು ತುಂಬಾ ವಿರಳವಾಗಿದೆ. ಆದರೆ ಇಲ್ಲೊಂದು ಪ್ರದೇಶವಿದೆ ಇಲ್ಲಿ ಹಾವು ಬಿಟ್ಟರೆ ಬೇರೆ ಯಾವುದೇ ಪ್ರಾಣಿಗಳು ಕಾಣಲು ಸಿಗುವುದಿಲ್ಲವಂತೆ. ದೇಶದ ನಾನಾ ಜಾತಿಯ ವಿಷಪೂರಿತ ಹಾವುಗಳಿಂದ ಹಿಡಿದು ಸಾಮಾನ್ಯ ವಿಷ ರಹಿತ ಹಾವುಗಳು ಕಾಣ ಸಿಗುವುದು ಈ ಪ್ರದೇಶದಲ್ಲಿ ಮಾತ್ರವಂತೆ, ಅದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಪ್ರದೇಶವನ್ನು ಅಳುವುದೇ ಈ ಹಾವುಗಳು.

ಬನ್ನಿ ಹಾಗಾದರೆ ಹಾವುಗಳೇ ಇರುವ ಆ ಪ್ರದೇಶ ಯಾವುದು, ಯಾವೆಲ್ಲಾ ಪ್ರಭೇದದ ಹಾವುಗಳು ಇಲ್ಲಿವೆ ಜೊತೆಗೆ ಇಲ್ಲಿರುವ ಹಾವುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…

ಬ್ರೆಜಿಲ್‌ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್‌ ದೂರದಲ್ಲಿರುವ ಇಲ್ಹಾ ಡ ಕ್ವಿಮಾಡ ಗ್ರಾಂಡೇ ಎಂಬ ಹೆಸರಿನ ಈ ದ್ವೀಪ ಬಹುಶಃ ಮಾನವನಿಗೆ ಕಾಲಿಡಲು ಸಾಧ್ಯವಾಗದೇ ಇರುವ ಕೆಲವೇ ಕೆಲವು ವಿಸ್ಮಯ ಪ್ರದೇಶಗಳಲ್ಲಿ ಇದೂ ಒಂದಿರಬೇಕು ಹಾಗಾಗಿ ಇದನ್ನು ಹಾವಿನ ದ್ವೀಪ ಎಂದು ಹೆಸರುವಾಸಿಯಾಗಿದೆ. ಅಷ್ಟು ಮಾತ್ರವಲ್ಲದೆ ಹಾವುಗಳೇ ತುಂಬಿರುವುದರಿಂದ ಈ ದ್ವೀಪ ಜನಸಂಪರ್ಕದಿಂದ ಕೂಡ ದೂರ ಉಳಿದುಬಿಟ್ಟಿದೆ.

ಈ ಐಲ್ಯಾಂಡ್ ನಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಹಾವುಗಳು ಕಾಣಸಿಗುತ್ತವೆಯಂತೆ ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಎಲ್ಲಾದರೂ ಇದೆ ಎಂದಿದ್ದರೆ ಅವು ಇಲ್ಲಿ ಮಾತ್ರ. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವು ಸೇರಿದಂತೆ ಸಾವಿರಾರು ಪ್ರಭೇದದ ಹಾವುಗಳು ಇಲ್ಲಿವೆಯಂತೆ.

ಅಂದಹಾಗೆ, ಸ್ನೇಕ್ ಐಲ್ಯಾಂಡ್‌ನ ನಿಜವಾದ ಹೆಸರು ಇಲ್ಹಾ ಡ ಕ್ವಿಮಡಾ ಗ್ರಾಂಡೆ. ಇದು ಸಾವೊ ಪಾಲೊದಿಂದ ಕೇವಲ 90 ಮೈಲುಗಳಷ್ಟು ದೂರದಲ್ಲಿದೆ. ಜನರು ದ್ವೀಪಕ್ಕೆ ಹೋಗಲು ಸಾಧ್ಯವಿಲ್ಲ. ಬ್ರೆಜಿಲಿಯನ್ ನೌಕಾಪಡೆಯು ತಮ್ಮ ಸ್ವಂತ ಸುರಕ್ಷತೆ ಮತ್ತು ಹಾವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾರು ದ್ವೀಪಕ್ಕೆ ಭೇಟಿ ನೀಡಲು ಅನುಮತಿಸಬೇಕೆಂದು ನಿರ್ಧರಿಸುತ್ತಾರೆ. ಆದಾಗ್ಯೂ, ಕೆಲವು ವಿಜ್ಞಾನಿಗಳು ಮತ್ತು ನೌಕಾ ಅಧಿಕಾರಿಗಳು ಮಾತ್ರ ದ್ವೀಪಕ್ಕೆ ಭೇಟಿ ನೀಡಬಹುದು.

ಜನ ಸಾಮಾನ್ಯರ ಪ್ರವೇಶಕ್ಕೆ ಅವಕಾಶವಿಲ್ಲ:
ಬ್ರೆಜಿಲಿಯನ್ ನೌಕಾಪಡೆ ಇಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು ದ್ವೀಪಕ್ಕೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ, ಪರಿಸರ ಅಧ್ಯಯನ ನಡೆಸುವ ಸಂಶೋಧಕರಿಗೆ ಹಾಗೂ ನೌಕಾಪಡೆಯ ಸಿಬಂದಿಗಳು ಮಾತ್ರ ತಮ್ಮ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರವೇಶಿಸಲು ಇಲ್ಲಿನ ಸರಕಾರ ಅನುಮತಿ ನೀಡಿದೆ.

ಮಾಂಸವನ್ನೇ ಕರಗಿಸಬಲ್ಲ ವಿಷಪೂರಿತ ಹಾವುಗಳು :
ಈ ದ್ವೀಪದಲ್ಲಿ ಗೋಲ್ಡನ್ ಲ್ಯಾನ್ಸ್ಹೆಡ್ ಮತ್ತು ಬೋತ್ರೋಪ್ಸ್ ಇನ್ಸುಲಾರಿಸ್ ಎಂಬ ವಿಷಪೂರಿತ ಹಾವುಗಳು ವಾಸಿಸುತ್ತಿದ್ದು ಇವುಗಳ ಮುಖ್ಯ ಆಹಾರ ಪಕ್ಷಿಗಳು, ಈ ಹಾವುಗಳು ಒಮ್ಮೆ ಕುಟುಕಿದರೆ ಪಕ್ಷಿ ಸತ್ತೇ ಹೋಗುತ್ತದೆ ಅಷ್ಟು ಮಾತ್ರವಲ್ಲದೆ ಮನುಷ್ಯನಿಗೆ ಕಚ್ಚಿದರೂ ದೇಹ ಮತ್ತು ಚರ್ಮವನ್ನು ಕರಗಿಸುವ ಶಕ್ತಿ ಈ ಹಾವಿನ ವಿಷಕ್ಕೆ ಇದೆ ಎನ್ನಲಾಗಿದೆ. ಪಕ್ಷಿಗಳು ಈ ದ್ವೀಪಕ್ಕೆ ಬರಲು ಹೆದರುತ್ತವೆಯಂತೆ, ಅಲ್ಲದೆ ಪಕ್ಷಿಗಳು ತಮ್ಮ ವಲಸೆ ಹೋಗುವ ಸಂದರ್ಭದಲ್ಲಿ ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯಲು ಬಂದಾಗ ವಿಷಪೂರಿತ ಹಾವುಗಳ ದಾಳಿಗೆ ತುತ್ತಾಗುತ್ತವೆಯಂತೆ.

ಕಾಲಿಟ್ಟಲ್ಲೆಲ್ಲಾ ಹಾವುಗಳೇ:
ಈ ದ್ವೀಪದಲ್ಲಿ ಎಲ್ಲಿ ನೋಡಿದರು ಹಾವುಗಳೇ ಕಾಣುತ್ತವೆಯಂತೆ ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಪ್ರತಿ ಚದರ ಮೀಟರ್‌ಗೆ 5 ಹಾವುಗಳು ಸಿಗುತ್ತವೆಯಂತೆ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ ಎಂದು ಹೇಳಾಗುತ್ತಿದೆ.

ಹಾವುಗಳಿಂದ ಕುಟುಂಬವೇ ನಾಶ:
ಈ ದ್ವೀಪದಲ್ಲಿ ಲೈಟ್ ಹೌಸ್ ಕೂಡ ಇದೆ. ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಈ ಲೈಟ್ ಹೌಸ್ ಸಾಕ್ಷಿಯಾಗಿದೆ. ಲೈಟ್‌ಹೌಸ್ ಕೀಪರ್ ಮತ್ತು ಅವರ ಕುಟುಂಬವು 1909 ಮತ್ತು 1920 ರ ನಡುವೆ ಸ್ನೇಕ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕ್ರಮೇಣ ಈ ಹಾವುಗಳ ದಾಳಿಯಿಂದ ಈ ಕುಟುಂಬವೂ ನಾಶವಾಯಿತು ಎಂದು ಹೇಳಲಾಗಿದೆ.

110 ಎಕರೆ ಪ್ರದೇಶ, 4 ಲಕ್ಷಕ್ಕೂ ಹೆಚ್ಚು ಹಾವುಗಳು:
110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಒಮ್ಮೆ ಯೋಚಿಸಿ ಇಲ್ಲಿಗೆ ಪ್ರವೇಶ ಮಾಡಿದವರು ಮತ್ತೆ ಹಿಂದೆ ಬರುವ ಸಾಧ್ಯತೆ ಇದೆಯಾ ಎಂಬುದು.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Success Story:ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Success: ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

BJP FLAG

Maharashtra; ಚುನಾವಣ ಅಖಾಡ ಸಿದ್ದ: ಬಿಜೆಪಿ ಪಾಲಿಗೆ ಈ ಬಾರಿ ಭಾರೀ ಸವಾಲಿನ ಸ್ಥಿತಿ!

web

ಹೊಳೆಯುವ, ಆರೋಗ್ಯಕರ ತ್ವಚೆಗೆ 10 ಅತ್ಯುತ್ತಮ ನೈಸರ್ಗಿಕ ಪಾನೀಯಗಳು

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Goa-iffai

IFFI: ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನ.20ರಿಂದ ಆರಂಭ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.