Kabini Dam: ಮಳೆ ಇಲ್ಲದೆ ಕಬಿನಿ ಡ್ಯಾಂ ನೀರಿನ ಸಂಗ್ರಹದಲ್ಲಿ ಕುಸಿತ!

Team Udayavani, Aug 26, 2023, 3:27 PM IST

Kabini Dam: ಮಳೆ ಇಲ್ಲದೆ ಕಬಿನಿ ಡ್ಯಾಂ ನೀರಿನ ಸಂಗ್ರಹದಲ್ಲಿ ಕುಸಿತ!

ಎಚ್‌.ಡಿ.ಕೋಟೆ: ಆಗಸ್ಟ್‌ನಲ್ಲಿ ಕೇರಳದ ವೈನಾಡು, ಜಲಾನಯನ ಪ್ರದೇಶದಲ್ಲಿ ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ ಜೀವನಾಡಿ ಕಬಿನಿ ಜಲಾಶಯದ ಒಳಹರಿವು ತೀರಾ ಕುಸಿತ ಕಂಡಿದೆ. ಈ ನಡುವೆ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ನೀರಿನ ಸಂಗ್ರಹ ಮಟ್ಟ(2284)ದಲ್ಲಿ ಗಣನೀಯವಾಗಿ ಇಳಿಗೆ ಆಗುತ್ತಿದೆ.

ಜುಲೈನಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಒಳ ಹರಿವು 25 ಸಾವಿರ ಕ್ಯೂಸೆಕ್‌ಗೆ ಏರಿಕೆ ಆಗಿ, ಜಲಾಶಯ 15 ದಿನದಲ್ಲಿ ಭರ್ತಿ ಆಗಿತ್ತು. ನದಿಗೆ 20 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿತ್ತು. ಆದರೆ, ಜುಲೈ ಕೊನೆಯ ವಾರದಿಂದಲೂ ಮಳೆ ಕಡಿಮೆ ಆಗಿದ್ದರಿಂದ ಇದೀಗ ಡ್ಯಾಂನ ಒಳಅರಿವು 950ಕ್ಕೆ ಇಳಿದಿದೆ. ಜಲಾಶಯದ ಇತಿಹಾಸದಲ್ಲೇ ಆಗಸ್ಟ್‌ನಲ್ಲಿ ಕನಿಷ್ಠ ಮಟ್ಟಕ್ಕೆ ಒಳಹರಿವು ಇಳಿಕೆ ಆಗಿದೆ.

ಇದರ ನಡುವೆ ಸರ್ಕಾರವು ನೆರೆಯ ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್‌, ಬಲದಂಡೆ ನಾಲೆಗೆ 2300 ಕ್ಯೂಸೆಕ್‌, ಎಡದಂಡೆ ನಾಲೆಗೆ 25 ಕ್ಯೂಸೆಕ್‌ ನೀರು ಹರಿಸಿತ್ತು. ಈಗಲೂ 2000 ಕ್ಯೂಸೆಕ್‌ನಷ್ಟು ನೀರು ತಮಿಳುನಾಡಿಗೆ ಹರಿಯುತ್ತಲೇ ಇದ್ದು, ಜಲಾಶಯದ ಸಂಗ್ರಹಮಟ್ಟ 2275.72ಕ್ಕೆ ಅಡಿಗೆ ತಲುಪಿದೆ.

ಭತ್ತದ ಬೆಳೆಗೆ ನೀರಿಲ್ಲ?:  ಈ ಬಾರಿ ಜಲಾಶಯ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದ ಬಲ, ಎಡದಂಡೆ ನಾಲೆಗೆ ಹಂತವಾಗಿ ನೀರು ಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು, ಸ್ವಲ್ಪ ನೀರು ಹರಿ ಬಿಟ್ಟಿದ್ದರು. ಆದರೆ, ಈಗ ಭತ್ತದ ಬೆಳೆಗೆ ನೀರು ಸಿಗುವುದು ಕಷ್ಟ ಎಂಬ ಮಾತು ಅಧಿಕಾರಿಗಳ ಮೂಲಗಳಿಂದ ಕೇಳಿಬಂದಿದೆ. ಇದರಿಂದ ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಲ್ಲಿ ಆತಂಕ ಮನೆ ಮಾಡಿದೆ.

ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸಂಪೂರ್ಣ ನಿಲ್ಲಿಸಿ, ನಾಲೆಗಳಿಗೆ ಬಿಡುವಂತೆ ರೈತರು ಮನವಿ ಮಾಡಿದ್ದಾರೆ.

ಈ ಬಾರಿ ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆ ನಾಟಿಗೆ ಮುಂದಾಗಿದ್ದರು. ಆದರೆ, ಈಗ ಡ್ಯಾಂನಲ್ಲಿ ನೀರು ಕುಸಿತಕಂಡಿದೆ. ಭತ್ತ ಬೆಳೆಗೆ ನೀರು ಕೊಡದಿದ್ದರೆ, ಬೀದಿಗಿಳಿದು ಹೋರಾಟ ಮಾಡ್ತೇವೆ.-ಎಚ್‌.ಬಿ.ಶಿವಲಿಂಗಪ್ಪ, ಅಚ್ಚುಕಟ್ಟು ಪ್ರದೇಶದ ರೈತ ಹೋರಾಟಗಾರ.

ಜಲಾಶಯದ ಒಳ ಹರಿವು ಕ್ಷೀಣಿಸಿದೆ. ಈ ಬಾರಿ ಭತ್ತದ ಬೆಳೆಗೆ ನೀರು ಕಷ್ಟ. ನೀರು ಕೊಡುತ್ತೇವೆ ಎಂದು ನಾವೂ ಹೇಳಿಲ್ಲ, ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ.-ಚಂದ್ರಶೇಖರ್‌, ಇಇ, ಕಬಿನಿ ಜಲಾಶಯ, ಬೀಚನಹಳ್ಳಿ. 

– ಬಿ.ನಿಂಗಣ್ಣಕೋಟೆ

ಟಾಪ್ ನ್ಯೂಸ್

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Hunasuru-Marriage

Hunsur: ಶಿಷ್ಯೆಯನ್ನೇ ಪ್ರೀತಿಸಿ ವಿವಾಹವಾದ ಉಪನ್ಯಾಸಕ!

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Dalilama

Visit: ಜ.5ಕ್ಕೆ ಬೈಲುಕುಪ್ಪಗೆ ದಲೈಲಾಮಾ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

2

Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.