Karataka Damanaka; ಶಿವಣ್ಣ ಸಿಂಪ್ಲಿ ಸೂಪರ್!: ಪ್ರಭುದೇವ ನೇರ ಮಾತು
Team Udayavani, Aug 26, 2023, 4:57 PM IST
ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ ಅವರು ಇದೀಗ ಕನ್ನಡ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದು ಯೋಗರಾಜ್ ಭಟ್ ಅವರ ನಿರ್ದೇಶನದ ‘ಕರಟಕ ಧಮನಕ’ ಚಿತ್ರದಲ್ಲಿ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ನಟಿಸುತ್ತಿದ್ದಾರೆ. ಈ ಬಗ್ಗೆ ಪ್ರಭುದೇವ ಅವರೊಂದಿಗೆ ಮಾತುಕತೆ.
1 ಬಹಳ ವರ್ಷಗಳ ನಂತರ ಕನ್ನಡದ “ಕರಟಕ ಧಮನಕ’ದಲ್ಲಿ ಮತ್ತೆ ಅಭಿನಯಿಸುತ್ತಿದ್ದೀರಿ. ಹೇಗಿದೆ ಅನುಭವ?
– ನಾನು ಸುಮಾರು 18-20 ವರ್ಷದ ಹಿಂದೆಯೇ ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದೆ. ಆಮೇಲೆ ಕೂಡ ಕನ್ನಡದಲ್ಲಿ ಒಂದಷ್ಟು ಸಿನಿಮಾ ಮಾಡಿದ್ದೆ. ಆನಂತರ ನಾನು ನಿರ್ದೇಶನದ ಕಡೆಗೆ ಹೆಚ್ಚು ಗಮನ ಹರಿಸಿದ್ದರಿಂದ, ಎಲ್ಲ ಭಾಷೆಗಳಲ್ಲೂ ಅಭಿನಯ ಸ್ವಲ್ಪ ಕಡಿಮೆಯಾಯಿತು. ಈಗ “ಕರಟಕ ಧಮನಕ’ ಕಥೆ ಸಿಕ್ಕಿದೆ ಮತ್ತೆ ಅಭಿನಯಿಸುತ್ತಿದ್ದೇನೆ. ತುಂಬ ಖುಷಿಯಾಗುತ್ತಿದೆ.
2 ಮೊದಲ ಬಾರಿ ಶಿವಣ್ಣ ಜೊತೆ ಅಭಿನಯಿಸುತ್ತಿರುವ ಬಗ್ಗೆ ಹೇಳಿ?
ತುಂಬ ಖುಷಿಯಾಗುತ್ತಿದೆ. ನಾನು ಚಿಕ್ಕವಯಸ್ಸಿನಿಂದಲೂ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಾವೆಲ್ಲ. ಅವರ ಜೊತೆ ಅಭಿನಯಿಸುವ ಚಾನ್ಸ್ ಅಂತೂ ಸಿಕ್ಕಿಲ್ಲ. ಇಗ ಅವರ ಮಕ್ಕಳ ಜೊತೆ ಅಭಿನಯಿಸುವ ಚಾನ್ಸ್ ಸಿಕ್ಕಿರುವುದಕ್ಕೆ ಲಕ್ಕಿ ಅಂದುಕೊಳ್ಳುತ್ತೇನೆ.
3 ಶಿವಣ್ಣ ಅವರಲ್ಲಿ ನೀವು ಕಂಡಿದ್ದೇನು?
ಶಿವರಾಜಕುಮಾರ್ ತುಂಬ ದೊಡ್ಡ ಸ್ಟಾರ್ ಆಗಿದ್ದರೂ, ಅವರ ಸಿಂಪ್ಲಿಸಿಟಿ ನನಗೆ ಇಷ್ಟವಾಗುತ್ತದೆ. ಶೂಟಿಂಗ್ ಸೆಟ್‌ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಶಿವರಾಜಕುಮಾರ್ ನಡೆದುಕೊಳ್ಳುತ್ತಾರೆ. ನಾನು ಕಂಡಿರುವಂತೆ, ಅವರೊಬ್ಬರು ನಿರ್ದೇಶಕರು ಮತ್ತು ತಂತ್ರಜ್ಞರ ನಟ
4 ಶಿವಣ್ಣ ಅವರಿಗೆ ಕೊರಿಯೋಗ್ರಫಿ ಮಾಡುತ್ತಿದ್ದೀರಂತೆ?
ಹೌದು, “ಕರಟಕ ದಮನಕ’ ಸಿನಿಮಾದಲಿ ಶಿವಣ್ಣ ಅವರಿಗಾಗಿ ಒಂದು ಸ್ಪೆಷಲ್ ಸಾಂಗ್ ಇದೆ. ಮ್ಯೂಸಿಕ್ ಡೈರೆಕ್ಟರ್ ವಿ. ಹರಿಕೃಷ್ಣ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯಾನ್ಸ್ ನಂಬರ್‌ಗೆ ಹೇಳಿ ಮಾಡಿಸಿದಂತಿರುವ ಈ ಹಾಡಿನಲ್ಲಿ ಶಿವಣ್ಣ ಅವರಿಗೆ ಕೊರಿಯೋಗ್ರಫಿ ಮಾಡುತ್ತಿದ್ದೇನೆ.
5 ಶಿವಣ್ಣ ಜೊತೆಗೆ ಅಭಿನಯಿಸುವ ಯೋಚನೆಯಿತ್ತಾ? ಅಥವಾ ಇದು ತಾನಾಗೆ ಸಿಕ್ಕ ಅವಕಾಶವಾ?
“ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ನಾನು ಮತ್ತು ಪುನೀತ್ ರಾಜಕುಮಾರ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದೆವು. ಶಿವಣ್ಣ ಅವರನ್ನೂ ಅನೇಕ ಕಾರ್ಯಕ್ರಮಗಳಲ್ಲಿ ನೋಡಿದ್ದೆ, ಭೇಟಿಯಾಗಿ ಮಾತನಾಡಿದ್ದೆ. ಆದರೆ ಅವರೊಂದಿಗೆ ಅಭಿನಯಿಸುವ ಚಾನ್ಸ್ ಇಲ್ಲಿಯವರೆಗೆ ಸಿಕ್ಕಿರಲಿಲ್ಲ. ಈಗ ಅವರೊಂದಿಗೆ ಅಭಿನಯಿಸುವ ಡ್ಯಾನ್ಸ್ ಮಾಡುವ ಎಲ್ಲ ಚಾನ್ಸ್ ಸಿಕ್ಕಿದೆ. ನನ್ನ ಯೋಚನೆ ಅವಕಾಶವಾಗಿ ಸಿಕ್ಕಿತು ಎನ್ನಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.