Airport Security ಕರ್ತವ್ಯದಲ್ಲಿದ್ದ 3 ಶ್ವಾನಗಳಿಗೆ ಸೇವೆಯಿಂದ ನಿವೃತ್ತಿ
Team Udayavani, Aug 26, 2023, 5:42 PM IST
ಪಣಜಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‍ನ (CISF) ಏರ್ ಪೋರ್ಟ್ ಸೆಕ್ಯುರಿಟಿ ಗ್ರೂಪ್‍ನ ಬಾಂಬ್ ಪತ್ತೆ ದಳದಲ್ಲಿ ಕರ್ತವ್ಯದಲ್ಲಿದ್ದ 3 ಶ್ವಾನಗಳನ್ನು ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ. ಸುಮಾರು 10 ವರ್ಷಗಳ ಸೇವೆಯ ನಂತರ, ತಕ್ಷಕ್, ಶೆರೋ, ಟೈಗರ್ ಎಂಬ ಮೂರು ನಾಯಿಗಳು ನಿವೃತ್ತವಾಗಿವೆ.
ದಾಬೋಲಿ ವಿಮಾನ ನಿಲ್ದಾಣದಲ್ಲಿ ಮೂರೂ ಶ್ವಾನಗಳಿಗೆ ಸಿಎಸ್‍ಐಎಫ್ ದಳದ ವತಿಯಿಂದ ಬೀಳ್ಕೊಡಲಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೂರು ನಾಯಿಗಳಿಗೆ ಹಾರ ಹಾಕಿ ಗೌರವಿಸಿದರು. ಇದಲ್ಲದೇ ಎಲ್ಲಾ ಮೂರು ನಾಯಿಗಳಿಗೂ ಪದಕಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಿಐಎಸ್‍ಎಫ್ ಯೋಧರೊಂದಿಗೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಮೂರು ನಾಯಿಗಳು ಪ್ರಯಾಣಿಕರ ಸುರಕ್ಷಿತ ವಿಮಾನ ಪ್ರಯಾಣಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಈ ಸನ್ಮಾನ ಸಮಾರಂಭದಲ್ಲಿ ಮೂರು ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ತೋರಿದ ಸಾಕುಪ್ರಾಣಿ ಪ್ರಿಯರಿಗೆ ಹಸ್ತಾಂತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.