International Space ಕೇಂದ್ರಕ್ಕೆ 4 ದೇಶಗಳ 4 ಗಗನಯಾತ್ರಿಗಳ ಪಯಣ
ಸ್ಪೇಸ್ ಎಕ್ಸ್‌ನಿಂದ ಮತ್ತೊಂದು ಸಾಹಸ
Team Udayavani, Aug 26, 2023, 8:20 PM IST
ಕೇಪ್ ಕೆನಾವೆರಲ್:ನಾಲ್ಕು ದೇಶಗಳ ನಾಲ್ವರು ಗಗನಯಾತ್ರಿಗಳು ಶನಿವಾರ ಬಾಹ್ಯಾಕಾಶಕ್ಕೆ ನೆಗೆದಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ಇವರೆಲ್ಲರೂ ತಮ್ಮ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್ ಮೂಲಕ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಪ್ರಯೋಗಾಲಯವನ್ನು ತಲುಪಲಿದ್ದಾರೆ.
ಮಾರ್ಚ್ ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತಂಗಿರುವ ಗಗನಯಾತ್ರಿಗಳಿಗೆ ಬದಲಿಯಾಗಿ ಇವರು ಅಲ್ಲಿಗೆ ತೆರಳಲಿದ್ದಾರೆ. ಕೆನೆಡಿ ಸ್ಪೇಸ್ ಸೆಂಟರ್‌ನಿಂದ ಶನಿವಾರ ನಾಸಾದ ಗಗನಯಾತ್ರಿಯೊಂದಿಗೆ, ಡೆನ್ಮಾರ್ಕ್, ಜಪಾನ್ ಮತ್ತು ರಷ್ಯಾದ ತಲಾ ಒಬ್ಬ ಗಗನಯಾತ್ರಿಯನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿದೆ.
ಈವರೆಗೆ ನಾಸಾ ತನ್ನ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಗಗನಯಾತ್ರಿಗಳನ್ನು ಕಳುಹಿಸುವುದಿದ್ದರೆ, ಅದರಲ್ಲಿ 3-4 ಮಂದಿ ಅಮೆರಿಕನ್ನರೇ ಇರುತ್ತಿದ್ದರು. ಆದರೆ, ಬಾಹ್ಯಾಕಾಶನೌಕೆಯ ಪ್ರತಿ ಆಸನದಲ್ಲೂ ಬೇರೆ ಬೇರೆ ರಾಷ್ಟ್ರದ ಗಗನಯಾತ್ರಿಗಳು ಸಂಚರಿಸುತ್ತಿರುವುದು ಇದೇ ಮೊದಲು. ಸೆಪ್ಟೆಂಬರ್ ಮಧ್ಯೆ ನಾಸಾದ ಮತ್ತೊಬ್ಬ ಗಗನಯಾತ್ರಿ ರಷ್ಯಾದ ಇಬ್ಬರೊಂದಿಗೆ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.