PM ಚೀನಗೆ ಮೋದಿ ಟಾಂಗ್;ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶಗಳ ಸಾಲ ಪುನಾರಚನೆಯೇ ಭಾರತದ ಆದ್ಯತೆ
ಸಾಲದ ಸುಳಿಗೆ ಸಿಲುಕಿಸುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಕಿವಿಮಾತು
Team Udayavani, Aug 26, 2023, 8:30 PM IST
ನವದೆಹಲಿ:“ಕೆಲವು ಶಕ್ತಿಗಳು ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಷ್ಟ್ರಗಳನ್ನು ದುರ್ಬಳಕೆ ಮಾಡಿಕೊಂಡು, ಆ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ. ಇಂಥ ಜಾಲಕ್ಕೆ ಬೀಳದೇ ಎಲ್ಲ ದೇಶಗಳೂ ಹಣಕಾಸು ಅಶಿಸ್ತಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಮೂಲಕ ಸಣ್ಣಪುಟ್ಟ ದೇಶಗಳನ್ನು ಸಾಲದ ಬಲೆಯೊಳಗೆ ಕೆಡವಿ ಹಾಕಿ ಸಂಕಷ್ಟಕ್ಕೆ ನೂಕುತ್ತಿರುವ ಚೀನಾ ವಿರುದ್ಧ ಮೋದಿ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದಾರೆ.
“ಬ್ಯುಸಿನೆಸ್ ಟುಡೇ’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಚೀನಾ ಈಗಾಗಲೇ ಶತಕೋಟಿ ಡಾಲರ್‌ಗಟ್ಟಲೆ ಸಾಲವನ್ನು ನೀಡಿ 12ಕ್ಕೂ ಅಧಿಕ ದೇಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ.
ಕೀನ್ಯಾ, ಝಾಂಬಿಯಾ, ಲಾವೋಸ್, ಮಂಗೋಲಿಯಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಚೀನಾದ ಮೋಸದ ಬಲೆಗೆ ಬಿದ್ದಿವೆ. ಇಂಥ ದೇಶಗಳನ್ನು ಚೀನಾ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದು, “ಎಲ್ಲ ದೇಶಗಳೂ ಆರ್ಥಿಕ ಶಿಸ್ತು ಪಾಲಿಸುವುದು ಮುಖ್ಯ. ಇತರರ ಅಸಹಾಯಕತೆಯನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳುವಂಥ ಕೆಲವು ಶಕ್ತಿಗಳಿವೆ. ಅಂಥವುಗಳ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದಿರಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಸಾಲ ಪುನರ್‌ರಚನೆಯೇ ಆದ್ಯತೆ:
2030ರ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಬೇಕೆಂದರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಪ್ರಗತಿ ಹೊಂದಬೇಕಾದ ಅಗತ್ಯವಿದೆ. ಇಂಥ ದೇಶಗಳ ಸಾಲ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿ20 ಬದ್ಧವಾಗಿದೆ. ಪ್ರಸಕ್ತ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ಜಿ20, ಸಮಾನ ಚೌಕಟ್ಟಿನೊಂದಿಗೆ ಸಾಲಬಾಧೆಯಿಂದ ತೊಂದರೆಗೊಳಗಾದ ದೇಶಗಳ ಸಾಲ ಪುನರ್‌ರಚನೆಗೆ ಆದ್ಯತೆ ನೀಡುತ್ತಿದೆ ಎಂದೂ ಮೋದಿ ಹೇಳಿದ್ದಾರೆ.
ಜಿ20 ಶೃಂಗ ಯಶಸ್ವಿಗೊಳಿಸಿ:
ಸೆ.9 ಮತ್ತು 10ರಂದು ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದರಲ್ಲಿ 30ಕ್ಕೂ ಹೆಚ್ಚು ವಿಶ್ವನಾಯಕರು, ಐರೋಪ್ಯ ಒಕ್ಕೂಟ ಮತ್ತು ಅತಿಥಿ ರಾಷ್ಟ್ರಗಳ ಪ್ರಮುಖ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ 14 ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಆ ಸಮಯದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸ್ವಲ್ಪಮಟ್ಟಿಗೆ ತೊಂದರೆ ಎದುರಾಗಬಹುದು. ಇದನ್ನೆಲ್ಲ ಸಹಿಸಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಿ, ದೇಶದ ವರ್ಚಸ್ಸಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಿ ಎಂದು ದೆಹಲಿ ನಿವಾಸಿಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ವಿರಾಸತ್, ವಿಕಾಸ್ ಭಾರತದ ಮಂತ್ರ
ಜಿ20 ಸಂಸ್ಕೃತಿ ಸಚಿವರ ಕೆಲಸವು ಇಡೀ ಮಾನವತೆ ಮೇಲೆ ಪರಿಣಾಮ ಬೀರುವಂಥದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ಜಿ20 ಸಂಸ್ಕೃತಿ ಸಚಿವರ ಸಭೆಯಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಶನಿವಾರ ವರ್ಚುವಲ್ ಆಗಿ ಮಾತನಾಡಿದ ಅವರು, “ಪರಂಪರೆ ಎನ್ನುವುದು ಆರ್ಥಿಕ ಪ್ರಗತಿ ಮತ್ತು ವೈವಿಧಿÂàಕರಣದ ಪ್ರಮುಖ ಶಕ್ತಿಯಾಗಿದೆ. ವಿರಾಸತ್ ಜತೆಗೆ ವಿಕಾಸ ಎಂಬುದು ಭಾರತದ ಮಂತ್ರವಾಗಿದೆ. ಸಂಸ್ಕೃತಿಗೆ ಎಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್ ಎಂಟ್ರಿ ನೇಮಕಾತಿ
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.