Byndoor; ಶಿರೂರು ಇಬ್ಬರು ಮೀನುಗಾರರು ಸಮುದ್ರ ಪಾಲು
Team Udayavani, Aug 27, 2023, 9:12 PM IST
ಬೈಂದೂರು: ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ.
ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ.
ಕಳೆದ ಹಲವು ಸಮಯದಿಂದ ಇವರ ಕುಟುಂಬ ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿದೆ . ಭಾನುವಾರ ಸಂಜೆ ಸ್ಥಳೀಯ ನಾಲ್ವರು ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಪಾಲಾಗಿದ್ದಾರೆ.ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾರರು ಶೋಧಕ್ಕಾಗಿ ಪ್ರಯತ್ನಿಸಿದರು ಕೂಡ ಪತ್ತೆಯಾಗಿಲ್ಲ.ಶೋಧ ಕಾರ್ಯ ಮುಂದುವರಿದಿದೆ.
ಹದಿನೈದು ದಿನದ ಹಿಂದೆ ದುಬೈನಿಂದ ಬಂದಿದ್ದ
ಮೃತಪಟ್ಟಿರುವ ನಝಾನ್ ದುಬಾೖಯಲ್ಲಿ ಸೂಪರ್‌ಮಾರ್ಕೆಟ್ ನಲ್ಲಿ ಉದ್ಯೋಗದಲ್ಲಿದ್ದು ಹದಿನೈದು ದಿನದ ಹಿಂದೆ ರಜೆಗಾಗಿ ಊರಿಗೆ ಬಂದಿದ್ದ.ಬೈಂದೂರು ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕಕ್ಕೂ ಅಧಿಕ ಇಂತಹ ಅವಘಡ ಸಂಭವಿಸಿದ್ದು ಅಳ್ವೆಗದ್ದೆ ಪರಿಸರದಲ್ಲಿ ಕಳೆದ ತಿಂಗಳು ದೋಣಿ ಮಗುಚಿ ಕೂದಳೆಯ ಅಂತರದಲ್ಲಿ ಮೀನುಗಾರರು ಪಾರಾಗಿದ್ದರು.
ಭಾನುವಾರ ನಡೆದ ಈ ಘಟನೆ ಶಿರೂರು ಕಳುಹಿತ್ಲು ಭಾಗದ ಮೀನುಗಾರರಿಗೆ ಆಘಾತ ನೀಡಿದೆ.
ಘಟನ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ,ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ತಹಶೀಲ್ದಾರರು ಆಗಮಿಸಿದ್ದರು. ಸ್ಥಳೀಯ ಮುಖಂಡರು, ಮೀನುಗಾರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.