Udupi ಜಿಲ್ಲೆಯಲ್ಲಿ ಅಭಿವೃದ್ಧಿಯಾಗಲಿವೆ; ಇನ್ನೂ 4 ಹೊಸ ಕೈಗಾರಿಕೆ ಪ್ರದೇಶಗಳು
Team Udayavani, Aug 28, 2023, 6:30 AM IST
ಉಡುಪಿ: ಸಣ್ಣ ಕೈಗಾರಿಕೆಗಳೇ ಹೆಚ್ಚಿರುವ ಉಡುಪಿ ಜಿಲ್ಲೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಹೊಸದಾಗಿ ನಾಲ್ಕು ಕೈಗಾರಿಕೆ ಪ್ರದೇಶ ಅಭಿವೃದ್ಧಿಯಾಗಲಿವೆ.
ಈಗಾಗಲೇ ಅಸ್ತಿತ್ವದಲ್ಲಿ ಇರುವ ನಾಲ್ಕು ಕೈಗಾರಿಕೆ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಹೊಸ ಕೈಗಾರಿಕೆ ಪ್ರದೇಶ ಆರಂಭದ ಜತೆಗೆ ಅಸ್ತಿತ್ವದಲ್ಲಿರುವ ಕೈಗಾರಿಕೆ ಪ್ರದೇಶಗಳಿಗೆ ಕಾಯಕಲ್ಪ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಪ್ರಸ್ತಾವಿತ ಹೊಸ ಕೈಗಾರಿಕೆ
ಪ್ರದೇಶಗಳು
ಹೆಬ್ರಿ ತಾಲೂಕಿನ ಕೆರೆ ಬೆಟ್ಟು ಗ್ರಾಮದಲ್ಲಿ 31.28 ಎಕ್ರೆ ಖಾಸಗಿ ಜಮೀನನ್ನು ಮತ್ತು ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಖಾಸಗಿ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಉಳಿದ 36.56 ಎಕ್ರೆ ಸರಕಾರಿ ಜಮೀನಾಗಿದೆ. ಶಿವಪುರ ಗ್ರಾಮದಲ್ಲಿ 40.16 ಎಕ್ರೆ ಜಮೀನಿನ ಭೂ ಮಾಲಕರಿಗೆ ಪರಿಹಾರ ನೀಡಲಾಗಿದ್ದು, 5.41 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲು ಬಾಕಿಯಿದೆ. ಸರಕಾರದಿಂದ ಈಗಾಗಲೇ 20 ಕೋ.ರೂ. ಬಿಡುಗಡೆಯಾಗಿದ್ದು, 8.76 ಕೋ.ರೂ. ಬಿಡುಗಡೆಗೆ ಪತ್ರ ಬರೆಯಲಾಗಿದೆ. ಆದರೆ, ಅನುದಾನ ಇನ್ನೂ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 44.48 ಎಕ್ರೆ ಖಾಸಗಿ ಹಾಗೂ 5.58 ಎಕ್ರೆ ಸರಕಾರಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. 41.43 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲಾಗಿದೆ. 3.41 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲು ಬಾಕಿಯಿದೆ. ಇಲ್ಲಿಯೂ ಸರಕಾರದ ಪೂರ್ಣಾನುದಾನ ಇನ್ನೂ ಬಂದಿಲ್ಲ.ಬ್ರಹ್ಮಾವರ ತಾಲೂಕಿನ ಉಪ್ಪೂರು ಕೊಳಗಿರಿ ಪ್ರದೇಶದಲ್ಲಿ 100 ಎಕ್ರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಕೆಐಎಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ವೆ ಕಾರ್ಯ ಇನ್ನಷ್ಟೆ ಆಗಬೇಕಿದೆ. ಉಡುಪಿ ಪವರ್ ಕಾರ್ಪೋರೇಶನ್ ಲಿ.(ಯುಪಿಸಿಎಲ್) ಎರಡನೇ ಹಂತಕ್ಕೆ ಸಾಂತೂರು ಗ್ರಾಮದ 289.84 ಎಕ್ರೆ ಖಾಸಗಿ ಜಮೀನು, ಎಲ್ಲೂರು ಗ್ರಾಮದ 66.69 ಎಕ್ರೆ ಖಾಸಗಿ ಜಮೀನು ಸ್ವಾಧೀನಕ್ಕೆ ಈಗಾಗಲೇ ಜಿಲ್ಲಾಧಿಕಾರಿಯಿಂದ ಕೆಐಎಡಿಬಿಯಿಂದ ಪತ್ರ ಕಳುಹಿಸಲಾಗಿದೆ. ಸರ್ವೆ ಕಾರ್ಯ ಆರಂಭವಾಗಿಲ್ಲ. ಒಟ್ಟಾರೆಯಾಗಿ ನಾಲ್ಕು ಕಡೆಗಳಲ್ಲಿ ಹೊಸದಾಗಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಯಾಗಲಿದೆ.
ಸೌಲಭ್ಯ ಒದಗಿಸಬೇಕು
ಮಣಿಪಾಲ ಸಮೀಪದ ಶಿವಳ್ಳಿ ಕೈಗಾರಿಕೆ ಪ್ರದೇಶ, ಬೆಳಪು ಕೈಗಾರಿಕೆ ಪ್ರದೇಶ, ನಂದಿಕೂರು ಕೈಗಾರಿಕೆ ಪ್ರದೇಶ ಹಾಗೂ ಮಿಯಾರು ಕೈಗಾರಿಕೆ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯದ ಕೊರತೆಯಿದೆ. ಈ ಎಲ್ಲ ಕೈಗಾರಿಕೆ ಪ್ರದೇಶದಲ್ಲಿ ರಸ್ತೆ, ಬೀದಿ ದೀಪದ ಸಮಸ್ಯೆ ಹೆಚ್ಚಿದೆ. ಸಂಪರ್ಕ ರಸ್ತೆಗಳ ಕೊರತೆಯೂ ಇದೆ. ಅಸ್ತಿತ್ವದಲ್ಲಿರುವ ಕೈಗಾರಿಕೆ ಪ್ರದೇಶಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹವಾಗಿದೆ.
ಎರಡು ವರ್ಷ ಬೇಕು
ಕೈಗಾರಿಕೆ ಪ್ರದೇಶಕ್ಕೆ ಭೂಮಿ ಸ್ವಾಧೀನ ಪಡಿಸಿಕೊಂಡು ಭೂ ಮಾಲಕರಿಗೆ ಪರಿಹಾರ ನೀಡುವ ಕಾರ್ಯ ಪೂರ್ಣಗೊಂಡ ಅನಂತರದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಂದ ಆ ಪ್ರದೇಶವನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಲಾಗುತ್ತದೆ. ಕೆಐಎಡಿಬಿ ಆ ಪ್ರದೇಶದಲ್ಲಿ ಕೈಗಾರಿಕೆಗೆ ಬೇಕಾದ ರಸ್ತೆ, ಒಳಚರಂಡಿ ವ್ಯವಸ್ಥೆ, ಬೀದಿದೀಪ, ನಿವೇಶನ ಅಚ್ಚುಕಟ್ಟು ಸಹಿತ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಿದೆ. ಅನಂತರದಲ್ಲಿ ಸೈಟ್(ನಿವೇಶನಗಳ) ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಜಿಲ್ಲೆಯ ನಾಲ್ಕು ಕೈಗಾರಿಕೆ ಪ್ರದೇಶ ಕಾರ್ಯಾರಂಭಕ್ಕೆ ಕನಿಷ್ಠ 2ರಿಂದ 3 ವರ್ಷ ಬೇಕಾಗಬಹುದು ಎಂದು ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್ ಮಾಹಿತಿ ನೀಡಿದ್ದಾರೆ.
ಹೊಸ ಕೈಗಾರಿಕೆ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಎರಡು ಕಡೆ ಪೂರ್ಣಗೊಂಡಿದೆ. ಭೂ ಮಾಲಕರಿಗೆ ಪರಿಹಾರವನ್ನು ಒದಗಿಸಲಾಗುತ್ತಿದೆ. ಭೂ ಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡ ಅನಂತರದಲ್ಲಿ ಅಭಿವೃದ್ಧಿಗಾಗಿ ಕೆಐಎಡಿಬಿ ಹಸ್ತಾಂತರಿಸಲಿದ್ದೇವೆ.
-ರಾಜು, ವಿಶೇಷ ಭೂ ಸ್ವಾಧೀನ ಅಧಿಕಾರಿ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.