Billava ಸಮಾಜದ ತುಲನಾತ್ಮಕ ಅಧ್ಯಯನ ಆವಶ್ಯ
"ಬಿಲ್ಲವರ ಗುತ್ತು ಬರ್ಕೆಗಳು' ಸಂಶೋಧನ ಗ್ರಂಥ ಬಿಡುಗಡೆಗೊಳಿಸಿ ಹರಿಪ್ರಸಾದ್
Team Udayavani, Aug 27, 2023, 11:32 PM IST
ಮಂಗಳೂರು: ಹಲವು ನಾಮಾಂಕಿತದೊಂದಿಗೆ ಕಾಣಿಸಿಕೊಂಡಿರುವ ಬಿಲ್ಲವರು ಸಮಾಜದ ವಿವಿಧ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಲ್ಲವರು ಮೂಲತಃ ಯೋಧ, ಸೈನಿಕರಾಗಿದ್ದವರು. ಈ ಕುರಿತು ವಿಸ್ತಾರವಾದ ಹಾಗೂ ತುಲನಾತ್ಮಕವಾದ ಅಧ್ಯಯನದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ರವಿವಾರ ನಡೆದ ಸಂಶೋಧಕ ಬಾಬುಶಿವ ಪೂಜಾರಿ ಅವರ ಬಳಗದ ರಚನೆಯ “ಬಿಲ್ಲವರ ಗುತ್ತು ಬರ್ಕೆಗಳು’ ಸಂಶೋಧನ ಗ್ರಂಥ ಬಿಡುಗಡೆ ಸಮಾರಂಭದ ಗೌರವ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.
ಬಿಲ್ಲವರ ಗತವೈಭವವನ್ನು ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಗ್ರಂಥ ದಾರಿದೀಪವಾಗಿದೆ. ಬಾಬುಶಿವ ಪೂಜಾರಿಯವರ ಅಪ್ರಕಟಿತ ಯಾವುದೇ ಕೃತಿಗಳಿದ್ದರೂ ಮುದ್ರಿಸಿಕೊಡುತ್ತೇನೆ ಎಂದರು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಗ್ರಂಥ ಬಿಡುಗಡೆಗೊಳಿಸಿದರು. ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಉದ್ಘಾಟಿಸಿದರು. ಹಿರಿಯ ಸಾಹಿತಿ, ಗ್ರಂಥದ ಅಧ್ಯಯನ ತಂಡದ ಪ್ರಮುಖರಾದ ಬಿ.ಎಂ ರೋಹಿಣಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಅಖೀಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಬಿಲ್ಲವ ಪ್ರಮುಖರಾದ ಹರೀಶ್ ಜಿ. ಅಮೀನ್, ಎನ್.ಟಿ. ಪೂಜಾರಿ, ಊರ್ಮಿಳಾ ರಮೇಶ್ ಕುಮಾರ್, ಎಂ. ವೇದಕುಮಾರ್, ಸುನಿಲ್ ಪೂಜಾರಿ, ಗೋಪಾಲ ಬಂಗೇರ ಯಾನೆ ದಂಡು ದೇವುಬೈದ್ಯರು, ಪೀತಾಂಬರ ಹೆರಾಜೆ, ಬಿ.ಎನ್. ಶಂಕರ ಪೂಜಾರಿ, ಪದ್ಮರಾಜ್ ಆರ್., ಪ್ರೊ|ಎಂ. ಶಶಿಧರ ಕೋಟ್ಯಾನ್, ಹರೀಶ್ ಪೂಜಾರಿ, ಬೇಬಿ ಪೂಜಾರಿ, ಡಾ| ಗಣೇಶ್ ಅಮೀನ್ ಸಂಕಮಾರ್, ಸಹಕಾರರತ್ನ ಚಿತ್ತರಂಜನ್ ಬೋಳಾರ್, ರಮಾನಾಥ ಕೋಟೆಕಾರ್, ಸಂಕೇತ್ ಪೂಜಾರಿ, ವೆಂಕಪ್ಪ ಮಾಸ್ಟರ್ ಬೆಳ್ತಂಗಡಿ, ಯೋಗೀಶ್ ಕುಮಾರ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಸಮ್ಮಾನ
ಸಂಶೋಧನ ತಂಡದಲ್ಲಿದ್ದ ದಿ| ತಮ್ಮಯ್ಯರ ಪತ್ನಿ ಇಂದುಮತಿ ತಮ್ಮಯ್ಯ ಅವರನ್ನು ಹಾಗೂ ಬಾಬುಶಿವ ಪೂಜಾರಿ ದಂಪತಿಯನ್ನು ಸಮ್ಮಾನಿಸಲಾಯಿತು.ಬಾಬು ಶಿವಪೂಜಾರಿ ಮುಂಬಯಿ ಪ್ರಸ್ತಾವನೆಗೈದು, ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು. ಶೈಲು ಬಿರ್ವ ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು ನಿರೂಪಿಸಿದರು.
ಕುಲಶಾಸ್ತ್ರೀಯ ಅಧ್ಯಯನ ಅಗತ್ಯ
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ನಾರಾಯಣ ಗುರುಗಳ ಮಾತಿನಂತೆ ಕೇರಳದಲ್ಲಿ ಶೈಕ್ಷಣಿಕ, ಸಾಮಾಜಿಕ ಕ್ರಾಂತಿ ನಡೆದಿದೆ. ಹೀಗಾಗಿ ಕಳೆದ 15 ವರ್ಷಗಳಿಂದ ಅಲ್ಲಿನ ಸಿಎಂ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಈಳವರಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಬೇರೆ ಸಮುದಾಯದ ಮಕ್ಕಳು ಹೊರದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ, ಬಿಲ್ಲವ ಕೆಲವು ಯುವಕರು ಜೈಲುಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
“ಬಿಲ್ಲವರು ಶೇಂದಿ ಸಂಗ್ರಹಿಸುವ ವೃತ್ತಿ ಮಾಡುವವರು ಎನ್ನುವ ಮೂಲಕ ಅವರನ್ನು ಕೆಳಹಂತದಲ್ಲಿಯೇ ಪರಿಭಾವಿಸುವ ಮನಸ್ಥಿತಿ ಕೆಲವರಿಂದ ನಡೆದುಕೊಂಡು ಬಂದಿದೆ. ಆದರೆ ಬಿಲ್ಲವರು ಮೂಲತಃ ಯೋಧರು, ಸೈನಿಕರು ಹಾಗೂ ವೈದ್ಯರಾಗಿದ್ದರು ಎಂಬ ಬಗ್ಗೆ ಸಾಕಷ್ಟು ಉಲ್ಲೇಖಗಳು ಇವೆ. ಹೀಗಾಗಿ ದ.ಕ. ಜಿಲ್ಲೆಯಲ್ಲಿ ಕೋಟಿ ಚೆನ್ನಯ ಅವರ ಹೆಸರಿನಲ್ಲಿ ಸೈನಿಕ ಶಾಲೆಯನ್ನು ನಿರ್ಮಾಣ ಮಾಡುವ ಅಗತ್ಯವಿದೆ. ಜತೆಗೆ ಬಿಲ್ಲವ ಸಮಾಜದ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.