Maharaja Trophy: ಮಂಗಳೂರು ಡ್ರ್ಯಾಗನ್ಸ್‌  ಔಟ್‌: ಸೆಮಿಫೈನಲ್‌ ಪ್ರವೇಶಿಸಿದ ಗುಲ್ಬರ್ಗ


Team Udayavani, Aug 27, 2023, 11:32 PM IST

1-sadsd

ಬೆಂಗಳೂರು: ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ 3ನೇ ತಂಡವಾಗಿ “ಮಹಾರಾಜ ಟ್ರೋಫಿ’ ಕೆಎಸ್‌ಸಿಎ ಟಿ20 ಲೀಗ್‌ ಸೆಮಿಫೈನಲ್‌ ಪ್ರವೇಶಿಸಿದೆ. ರವಿವಾರದ ಮೊದಲ ಪಂದ್ಯದಲ್ಲಿ ಅದು ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಉಪಾಂತ್ಯದ ಟಿಕೆಟ್‌ ಪಡೆದುಕೊಂಡಿತು.

ಹುಬ್ಬಳ್ಳಿ ಟೈಗರ್ ಮತ್ತು ಮೈಸೂರು ವಾರಿಯರ್ ಸೆಮಿಫೈನಲ್‌ ಪ್ರವೇಶಿಸಿದ ಮೊದಲೆರಡು ತಂಡಗಳಾಗಿವೆ.
ದಿನದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು 11 ರನ್ನುಗಳಿಂದ ಪರಾಭವಗೊಳಿಸಿದ ಶಿವಮೊಗ್ಗ ಲಯನ್ಸ್‌ 4ನೇ ತಂಡವಾಗಿ ಸೆಮಿಫೈನಲ್‌ ತಲುಪಿತು. ಈ ಫ‌ಲಿತಾಂಶದಿಂದ ಮಂಗಳೂರು ತಂಡ ಕೂಟದಿಂದ ನಿರ್ಗಮಿಸಿತು.

ಸೆಮಿಫೈನಲ್‌ ಪ್ರವೇಶಕ್ಕೆ ಎರಡೂ ತಂಡಗಳಿಗೆ ಗೆಲುವಿನ ಅಗತ್ಯವಿತ್ತು. ಅದೃಷ್ಟ ಗುಲ್ಬರ್ಗಕ್ಕೆ ಒಲಿಯಿತು. ಅದು ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ನೀಡಿತು. ಮಂಗಳೂರು ಡ್ರ್ಯಾಗನ್ಸ್‌ 19.1 ಓವರ್‌ಗಳಲ್ಲಿ 144ಕ್ಕೆ ಕುಸಿದರೆ, ಗುಲ್ಬರ್ಗ ಮಿಸ್ಟಿಕ್ಸ್‌ 15.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 145 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಇದು 10 ಪಂದ್ಯಗಳಲ್ಲಿ ಗುಲ್ಬರ್ಗ ಸಾಧಿಸಿದ 6ನೇ ಗೆಲುವು. ಇನ್ನೊಂದೆಡೆ ಮಂಗಳೂರು ಇಷ್ಟೇ ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಅಭಿಲಾಷ್‌ ಶೆಟ್ಟಿ, ನಾಯಕ ವಿಜಯ್‌ಕುಮಾರ್‌ ವೈಶಾಖ್‌ ಮತ್ತು ಹಾರ್ದಿಕ್‌ ರಾಜ್‌ ಸೇರಿಕೊಂಡು ಮಂಗಳೂರು ಸರದಿಗೆ ಕಡಿವಾಣ ಹಾಕಿದರು. ಅನಿರುದ್ಧ ಜೋಶಿ ಸರ್ವಾಧಿಕ 46 ರನ್‌ ಮಾಡಿದರೆ, ಆರಂಭಕಾರ ಶರತ್‌ ಬಿ.ಆರ್‌. 38 , ತಿಪ್ಪಾ ರೆಡ್ಡಿ 27 ರನ್‌ ಹೊಡೆದರು.
ಚೇಸಿಂಗ್‌ ವೇಳೆ ಗುಲ್ಬರ್ಗ ಆರಂಭಿಕರಾದ ಎಲ್‌.ಆರ್‌. ಚೇತನ್‌-ಅನೀಶ್‌ ಕೆ.ವಿ. ಅಮೋಘ ಜತೆಯಾಟ ನಿಭಾಯಿಸಿದರು. 11.2 ಓವರ್‌ಗಳಲ್ಲಿ 114 ರನ್‌ ಪೇರಿಸಿ ಮಂಗಳೂರು ಬೌಲರ್‌ಗಳಿಗೆ ಬೆವರಿಳಿಸಿದರು. ಅನೀಶ್‌ ಅವರದು ಅಜೇಯ 72 ರನ್‌ ಕೊಡುಗೆ (42 ಎಸೆತ, 5 ಬೌಂಡರಿ, 4 ಸಿಕ್ಸರ್‌). ಚೇತನ್‌ 37 ಎಸೆತ ಎದುರಿಸಿ 58 ರನ್‌ ಮಾಡಿದರು (6 ಬೌಂಡರಿ, 3 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ಮಂಗಳೂರು ಡ್ರ್ಯಾಗನ್ಸ್‌-19.1 ಓವರ್‌ಗಳಲ್ಲಿ 144 (ಅನಿರುದ್ಧ ಜೋಶಿ 46, ಶರತ್‌ ಬಿ.ಆರ್‌. 38, ತಿಪ್ಪಾ ರೆಡ್ಡಿ 27, ಅಭಿಲಾಷ್‌ ಶೆಟ್ಟಿ 33ಕ್ಕೆ 3, ವಿಜಯ್‌ಕುಮಾರ್‌ ವೈಶಾಖ್‌ 20ಕ್ಕೆ 2, ಹಾರ್ದಿಕ್‌ ರಾಜ್‌ 24ಕ್ಕೆ 2). ಗುಲ್ಬರ್ಗ ಮಿಸ್ಟಿಕ್ಸ್‌-15.3 ಓವರ್‌ಗಳಲ್ಲಿ 2 ವಿಕೆಟಿಗೆ 145 (ಅನೀಶ್‌ ಕೆ.ವಿ. ಔಟಾಗದೆ 72, ಎಲ್‌.ಆರ್‌. ಚೇತನ್‌ 58, ಕೆ. ಗೌತಮ್‌ 21ಕ್ಕೆ 2).

ಟಾಪ್ ನ್ಯೂಸ್

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Jammu Kashmir: Two terrorists hit in an encounter

Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

Intra-Squad Match: ಆಸ್ಟ್ರೇಲಿಯಾ ಕ್ರಿಕೆಟ್‌ ಪ್ರವಾಸ… ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

Intra-Squad Match: ಆಸ್ಟ್ರೇಲಿಯಾ ಕ್ರಿಕೆಟ್‌ ಪ್ರವಾಸ… ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.