![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 28, 2023, 7:19 AM IST
ಮೇಷ: ಗುರು ದೇವತಾನುಗ್ರಹದಿಂದ ಕಾರ್ಯ ಸಿದ್ಧಿ. ಹಿರಿಯರ ಆರೋಗ್ಯ ಉತ್ತಮ. ಪಾಲುದಾರಿಕೆ ವ್ಯವಹಾರ ಸುಗಮ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳು ಏಕಾಗ್ರತೆಗೆ ಪ್ರಯತ್ನಿಸಲು ಸಕಾಲ. ಪತಿ ಪತ್ನಿಯರಲ್ಲಿ ಸಹಮತ.
ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಮಿತ್ರರೊಡನೆ ಮನಸ್ತಾಪಕ್ಕೆ ಎಡೆಗೊಡದಿರಿ. ವೃತ್ತಿಸಂಬಂಧ ಸಣ್ಣ ಪ್ರವಾಸ ಸಂಭವ. ಮನೆಯಲ್ಲಿ ಅನುಕೂಲದ ವಾತಾವರಣ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ.
ಮಿಥುನ: ಆರೋಗ್ಯದ ಕಡೆಗೆ ಗಮನವಿರಲಿ. ಕಾರ್ಯ ಮುಗಿಸಲು ಆತುರ ಬೇಡ. ಕಿರಿಯರ ಭವಿಷ್ಯ ಚಿಂತನೆ. ಸಣ್ಣ ಉದ್ಯಮಿಗಳಿಗೆ ಪೂರಕ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ. ವಿದ್ಯಾರ್ಥಿಗಳಿಗೆ ಪ್ರಯತ್ನಪಟ್ಟರೆ ಯಶಸ್ಸು.
ಕರ್ಕ: ವೃತ್ತಿಪರ ಕಲಾವಿದರಿಗೆ ಸಿಹಿ ಸುದ್ದಿ. ಉದ್ಯೋಗ, ವ್ಯವಹಾರ ರಂಗದಲ್ಲಿ ಹೊಸ ಸಾಧ್ಯತೆ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಮನೋಲ್ಲಾಸ. ಮಕ್ಕಳ ಏಕಾಗ್ರತೆ ವೃದ್ಧಿಗೆ ಪ್ರಯತ್ನ ಅಗತ್ಯ. ದೇವತಾರಾಧನೆಯಿಂದ ಯಶಸ್ಸು.
ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ನಿರಂತರ ಶ್ರಮದಿಂದ ಆಯಾಸ. ಕೃಷಿ ಕ್ಷೇತ್ರದಲ್ಲಿ ಆಸಕ್ತರಿಗೆ ಶುಭ ಸಮಾಚಾರ. ಗೃಹಿಣಿಯರ ಆರೋಗ್ಯ ಗಮನಿಸಿ. ಅಧ್ಯಾಪನ ವೃತ್ತಿಯವರಿಗೆ ಶ್ರಮ. ದೇವತಾ ಕಾರ್ಯದಿಂದ ಯಶಸ್ಸು.
ಕನ್ಯಾ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಥಿರ ವಾತಾವರಣ. ವಿಳಂಬಿತ ಕಾರ್ಯ ಪೂರ್ಣಗೊಳ್ಳುವ ಸಮಯ. ಧಾನ್ಯ ವ್ಯಾಪಾರಿಗಳಿಗೆ ಶುಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಲವಲವಿಕೆ. ಕುಟುಂಬದಲ್ಲಿ ಸಂತಸದ ವಾತಾವರಣ.
ತುಲಾ: ಬಹುದಿನ ಅಪೇಕ್ಷೆಯೊಂದು ಕೈಗೂಡಿದ ಆನಂದ. ತೃಪ್ತಿಯಿಂದ ಕಾಲುಚಾಚಿ ಕೂರುವ ಸಮಯ ಅಲ್ಲ. ದಂಪತಿಗಳ ನಡುವೆ ಹೊಂದಾಣಿಕೆ. ಅಧಿಕಾರಿ ವರ್ಗಕ್ಕೆ ಹೆಚ್ಚು ಹೊಣೆಗಾರಿಕೆ. ಮಕ್ಕಳಿಂದ ಸಂತಸ. ಜಲಚರ ವಸ್ತುಗಳಿಂದ ಲಾಭ.
ವೃಶ್ಚಿಕ: ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ಲಭ್ಯ.ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ.ಹಿರಿಯರ ಆರೋಗ್ಯ ಉತ್ತಮ. ನೆರೆಯವರ ಸಹಕಾರ.
ಧನು: ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಮಕ್ಕಳಿಗೆ ಸಂತಸ. ಶೈಕ್ಷಣಿಕ ಸಮಯ ಉತ್ತಮ.
ಮಕರ: ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ವ್ಯವಹಾರದಲ್ಲಿ ಒಳ್ಳೆಯ ಲಾಭ.
ಕುಂಭ: ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಶ್ಲಾಘನೆ. ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ.ಮನೆಮಂದಿಗೆ ಹರ್ಷ ಹಿರಿಯರ ಆರೋಗ್ಯ ಉತ್ತಮ. ಸಮಾಜದಲ್ಲಿ ಗೌರವಾಧಾರಗಳಿಂದ ಮನ್ನಣೆ.
ಮೀನ: ಉದ್ಯೋಗ, ವ್ಯವಹಾರದಲ್ಲಿ ತೃಪ್ತಿ.ಹಣಕಾಸು ವ್ಯವಹಾರ ಸ್ಥಿರ .ಹಳೆಯ ಗೆಳೆಯರ ಭೇಟಿ.ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ. ಮಕ್ಕಳ, ಹಿರಿಯರ ಆರೋಗ್ಯ ಗಮನಿಸಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.