Mandya; ಪತ್ರದಲ್ಲಿರುವ ವಿಚಾರದ ಬಗ್ಗೆ ತನಿಖೆ ನಡೆಯುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
Team Udayavani, Aug 28, 2023, 8:25 PM IST
ಮಂಡ್ಯ: ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದರೆನ್ನಲಾದ ಪತ್ರ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ. ಆದರೆ ಅದರಲ್ಲಿರುವ ವಿಚಾರ ನಿಜವೋ, ಸುಳ್ಳೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಸಚಿವರ ವಿರುದ್ಧ ಕೇಳಿ ಬಂದ ಪ್ರಕರಣದ ಹಿನ್ನೆಲೆ ಏನು? ನನ್ನ ಮೇಲೆ ಯಾಕೆ ಬೆಟ್ಟು ತೋರಿಸುತ್ತಾರೆ. ರಾಜ್ಯಪಾಲರಿಗೆ ಪತ್ರ ಬರೆದವರು ಕೆ.ಆರ್.ನಗರದ ಕೃಷಿ ಅ ಧಿಕಾರಿಗಳು. ಇದರಲ್ಲಿ ನನ್ನದು ಷಡ್ಯಂತ್ರ ಏನಿದೆ ಎಂದು ಪ್ರಶ್ನಿಸಿದರು.
ಯಾಕೆ ಈ ಪತ್ರದ ವಿಷಯ ಬಂತು, ಸುಮ್ಮನೆ ವಿಷಯ ಬರುತ್ತಾ? ಎಡಿ, ಜೆಡಿಗಳ ಬಳಿ ಕ್ಯಾಟಗರಿವೈಸ್ ರೇಟ್ ಫಿಕ್ಸ್ ಆಗಿದೆ. ಯಾವ ಅ ಧಿಕಾರಿಗಳು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ವರ್ಗಾವಣೆ ಡಿಮ್ಯಾಂಡ್ ಇದೆ. ದುಡ್ಡು ಕೊಟ್ಟಿದ್ದೀವಿ ಎಂದು ಯಾವ ಅಧಿಕಾರಿಯೂ ಹೇಳಲ್ಲ. ಅದ್ಯಾವುದೋ ನ್ಯೂಸ್ ಪೇಪರ್ ಹಿಡಿದು ಕುಮಾರಸ್ವಾಮಿ ಕಾಲದಲ್ಲಿ ರೇಟ್ ಫಿಕ್ಸ್ ಆಗಿತ್ತು ಅಂತಾರೆ. ನನಗೆ ಗಾಬರಿಯಾಯಿತು. ಆ ಪೇಪರ್ ಕಟಿಂಗ್ ನೋಡಿದರೆ ಅದರಲ್ಲಿ ಈ ಮಹಾನುಭಾವರದ್ದೆ ಇದೆ ಎಂದರು.
ಈಗ ಕೃಷಿ ಅಧಿಕಾರಿಗಳು ಬರೆದ ಪತ್ರ ವಿಚಾರ ತನಿಖೆ ಮಾಡಿದ್ದಾರೆ. ಇಬ್ಬರು ಕೃಷಿ ಅ ಧಿಕಾರಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪತ್ರ ಅಸಲಿಯೋ, ನಕಲಿಯೋ ಒಂದು ಭಾಗ. ಅದಕ್ಕಿಂತ ಹೆಚ್ಚು ಪತ್ರದಲ್ಲಿರುವ ಸಾರಾಂಶ ಅಸಲಿಯೋ, ನಕಲಿಯೋ ತಿಳಿಯಬೇಕು. ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.