Maharaja Trophy ಕ್ರಿಕೆಟ್: ಹುಬ್ಬಳ್ಳಿ-ಮೈಸೂರು ಫೈನಲ್ ಫೈಟ್
Team Udayavani, Aug 28, 2023, 11:24 PM IST
ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್’ ಪಂದ್ಯಾವಳಿಯ ಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ -ಮೈಸೂರು ವಾರಿಯರ್ ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ 8 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ದ್ವಿತೀಯ ಸೆಮಿಫೈನಲ್‌ನಲ್ಲಿ ಮೈಸೂರು 36 ರನ್ನುಗಳಿಂದ ಹಾಲಿ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್‌ಗೆ ಸೋಲುಣಿಸಿತು.
ಶಿವಮೊಗ್ಗ 7 ವಿಕೆಟಿಗೆ ಕೇವಲ 149 ರನ್ ಗಳಿಸಿದರೆ, ಹುಬ್ಬಳ್ಳಿ ಬರೀ 14 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಆರಂಭಕಾರ ರೋಹನ್ ಕದಂ ಅವರ ಅರ್ಧ ಶತಕ (54) ಹೊರತುಪಡಿಸಿದರೆ ಶಿವಮೊಗ್ಗ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ಕಂಡುಬರಲಿಲ್ಲ. ನಿಹಾಲ್ ಉಲ್ಲಾಳ್ (7), ವಿನಯ್ ಸಾಗರ್ (13), ಅಭಿನವ್ ಮನೋಹರ್ (2) ಇನ್ನಿಂಗ್ಸ್ ಆಧರಿಸಲು ವಿಫಲರಾದರು. ಎಚ್.ಎಸ್. ಶರತ್ 18, ನಾಯಕ ಶ್ರೇಯಸ್ ಗೋಪಾಲ್ ಮತ್ತು ಪ್ರಣವ್ ಭಾಟಿಯ ತಲಾ 16 ರನ್ ಹೊಡೆದರು. ಹುಬ್ಬಳ್ಳಿ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಲವಿಶ್ ಕೌಶಲ್ ಮತ್ತು ಮನ್ವಂತ್ ಕುಮಾರ್ ಎಲ್. ಇಬ್ಬರೂ 2 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಹುಬ್ಬಳ್ಳಿ ಲವ್‌ನೀತ್ ಸಿಸೋಡಿಯ (13) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಮೊಹಮ್ಮದ್ ತಾಹಾ ಮತ್ತು ಕೃಷ್ಣನ್ ಶ್ರೀಜಿತ್ 114 ರನ್ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಶ್ರೀಜಿತ್ 39 ಎಸೆತಗಳಿಂದ ಅಜೇಯ 61 ರನ್ ಹೊಡೆದರೆ (7 ಬೌಂಡರಿ, 2 ಸಿಕ್ಸರ್), ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ತಾಹಾ 38 ಎಸೆತ ಎದುರಿಸಿ 69 ರನ್ ಬಾರಿಸಿದರು. ಇವರ ಬ್ಯಾಟಿಂಗ್ ಅಬ್ಬರದ ವೇಳೆ 8 ಸಿಕ್ಸರ್ ಸಿಡಿಯಿತು. ಬೌಂಡರಿ ಮಾತ್ರ ಒಂದೇ.
ನಾಯರ್ ಶತಕ
ಮೈಸೂರು ವಾರಿಯರ್ 2 ವಿಕೆಟಿಗೆ 248 ರನ್ ಪೇರಿಸಿ ಸವಾಲೊಡ್ಡಿತು. ನಾಯಕ ಕರುಣ್ ನಾಯರ್ 42 ಎಸೆತಗಳಿಂದ ಅಜೇಯ 107 ರನ್ ಬಾರಿಸಿದರು (7 ಫೋರ್, 9 ಸಿಕ್ಸರ್). ಆರ್. ಸಮರ್ಥ್ 80 ರನ್ ಹೊಡೆದರು. ಜವಾಬಿತ್ತ ಗುಲ್ಬರ್ಗ 8 ವಿಕೆಟಿಗೆ 212 ರನ್ ಮಾಡಿತು. ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.