Belthangady: ವಿಷ ಸೇವಿಸಿದ್ದ ಬಾಣಂತಿ ಸಾವು
Team Udayavani, Aug 29, 2023, 12:31 AM IST
ಬೆಳ್ತಂಗಡಿ: ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ (25) ಆ. 1ರಂದು ಉಡುಪಿಯಲ್ಲಿ ಹೆರಿಗೆಯಾಗಿದ್ದು, ಈ ಸಮಯ ಉಂಟಾದ ಗಾಯಕ್ಕೆ ಬಳಿಕ ಜಾರಿಗೆದಡಿ ಎಂಬಲ್ಲಿ ಹೊಲಿಗೆ ಹಾಕಲಾಗಿತ್ತು. ಅನಂತರ ವಿಪರೀತ ನೋವು ಕಂಡುಬಂದಿದ್ದು ಆ. 26ರಂದು ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತತ್ಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.