Crime: ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ, ಹತ್ಯೆ
Team Udayavani, Aug 29, 2023, 8:50 PM IST
ಲಕ್ನೋ: ಘಾಜಿಯಾಬಾದ್ನ ಹೌಸಿಂಗ್ ಸೊಸೈಟಿಯಲ್ಲಿ ಕಾವಲುಗಾರ ತಂಡದ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರ ಮೇಲೆ ಆಕೆಯ ತಂಡದ ಸೂಪರ್ವೈಸರ್ ಹಾಗೂ ಇನ್ನಿತರ ಇಬ್ಬರು ಕಾವಲುಗಾರರು ಸಾಮೂಹಿಕ ಅತ್ಯಾಚಾರವೆಸಗಿ, ಥಳಿಸಿ ಕೊಂದಿರುವ ಘಟನೆ ವರದಿಯಾಗಿದೆ. ಜಾರ್ಖಂಡ್ ಮೂಲದ ಮಹಿಳೆ ತಮ್ಮ ಸಂಬಂಧಿ ಮಹಿಳೆಯೊಂದಿಗೆ ಹೌಸಿಂಗ್ ಸೊಸೈಟಿ ಬಳಿ ವಾಸವಿದ್ದರು. ಅಲ್ಲಿಯೇ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಭಾನುವಾರ ಅವರದ್ದೇ ತಂಡದ ಸೂಪರ್ವೈಸರ್ ಮತ್ತು ಇನ್ನಿಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ. ಅಲ್ಲದೇ, ಆಕೆ ಮೇಲೆ ಸಾಮೂಹಿತ ಅತ್ಯಾಚಾರವೆಸಗಿ, ಬಳಿಕ ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪರಾರಿಯಾಗಲು ಯತ್ನಿಸಿದ್ದಾರೆ. ನಂತರ ಪೊಲೀಸರು ಪ್ರಮುಖ ಆರೋಪಿ ಅಜಯ್ ಎಂಬಾತನನ್ನು ಬಂಧಿಸಿ, ಮಹಿಳೆಯನ್ನು ದೆಹಲಿಯ ಸಫªರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಸ್ಥಿತಿ ಗಂಭೀರವಾಗಿದ್ದ ಕಾರಣ ಮಹಿಳೆ ಉಸಿರು ಚೆಲ್ಲಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಕೇಸು ದಾಖಲಿಸಿ, ಉಳಿದ ಆರೋಪಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.