Snake Bite: 9ನೇ ತರಗತಿ ವಿದ್ಯಾರ್ಥಿಗೆ 9 ಸಲ ಕಚ್ಚಿದ ಸರ್ಪ!
Team Udayavani, Aug 30, 2023, 12:12 AM IST
ವಾಡಿ: ಹಾವು ಕಣ್ಣಿಗೆ ಬಿದ್ದರೆ ಸಾಕು ಎದೆಯೊಡೆಯುತ್ತದೆ. ಇನ್ನೂ ಸರ್ಪ ಕಚ್ಚಿತೆಂದರೆ ಹೃದಯದ ಬಡಿತವೇ ನಿಂತು ಬಿಡುತ್ತದೆ. ಆದರೆ ಇಲ್ಲೊಬ್ಬ ಹುಡುಗನಿಗೆ ಹಾವು ಪದೇ ಪದೆ ಕಚ್ಚುತ್ತಿದ್ದು, ಅದರ ಕಾಟಕ್ಕೆ ಬೇಸತ್ತು ಊರು ತೊರೆದು ಮತ್ತೂಂದು ಊರಿಗೆ ಹೋಗಿ ನೆಲೆಸಿದರೂ ಅಲ್ಲಿಯೂ ಕಚ್ಚಿದೆ. ಬರೋಬ್ಬರಿ ಒಂಬತ್ತು ಸಲ ಹಾವು ಕಚ್ಚಿದ್ದು, ಬಾಲಕನ ಕುಟುಂಬಸ್ಥರ ನೆಮ್ಮದಿ ಕೆಡಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಹಳಕರ್ಟಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ವಿಜಕುಮಾರ ರಾವೂರಕರ ಅವರ ಪುತ್ರ ರಾವೂರ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಒಂಬತ್ತನೇ ತರಗತಿ ಯಲ್ಲಿ ಓದುತ್ತಿರುವ ಪ್ರಜ್ವಲ್ ವಿಜಯಕುಮಾರ (13) ಪದೇ ಪದೆ ಹಾವು ಕಡಿತಕ್ಕೊಳಗಾಗುತ್ತಿದ್ದ. ಆರಂಭದಲ್ಲಿ ಆರು ಸಲ ಮನೆಯಲ್ಲೇ ಕಾಲಿಗೆ ಕಡಿದಿತ್ತು. ಇದರಿಂದ ಬೇಸತ್ತು ಊರು ತೊರೆದು ವಾಡಿ ಪಟ್ಟಣದ ಬಳಿರಾಮ ಚೌಕ್ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರೂ ಬಿಡದ ಸರ್ಪ ಮೂರು ಸಲ ಕೈ ಬೆರಳಿಗೆ ಕಡಿದಿದೆ. ಆ. 26ರಂದು ಬಾಲಕನಿಗೆ ಹಾವು ಕಡಿದಿದ್ದು, ಸದ್ಯ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಂಬತ್ತು ಬಾರಿ ಹಾವು ಕಡಿದರೂ ಮಗನ ಪ್ರಾಣಕ್ಕೆ ತೊಂದರೆಯಾಗಿಲ್ಲ. ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ. ಈ ಹಾವುಗಳು ನಮ್ಮ ಮಗನ ಬೆನ್ನಟ್ಟಿದ್ದೇಕೆ ಎಂಬುದೇ ಅರ್ಥ ವಾಗುತ್ತಿಲ್ಲ ಎಂದು ಆತನ ತಂದೆ ವಿಜಕುಮಾರ ರಾವೂರಕರ “ಉದಯವಾಣಿ’ ಜತೆ ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
Debt Reduction: ನಬಾರ್ಡ್ ಸಾಲ ಕಡಿತ: ಪ್ರಧಾನಿ ಮೋದಿ, ಶಾ ಭೇಟಿಗೆ ರಾಜ್ಯ ಸರಕಾರದ ನಿರ್ಧಾರ
MUST WATCH
ಹೊಸ ಸೇರ್ಪಡೆ
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.