ISRO: ಚಂದ್ರನಲ್ಲಿದೆ ಗಂಧಕ, ಆಮ್ಲಜನಕ: ಇಸ್ರೋ ರೋವರ್ನಿಂದ ಹೊಸ ಮಾಹಿತಿ
Team Udayavani, Aug 30, 2023, 12:20 AM IST
ಬೆಂಗಳೂರು: ಚಂದ್ರನ ದಕ್ಷಿಣ ಭಾಗದಲ್ಲಿ ಗಂಧಕದ ಅಂಶ ಇರುವುದನ್ನು ಪ್ರಗ್ಯಾನ್ ರೋವರ್ ಪತ್ತೆ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಅದು ಚಂದ್ರನ ಮೇಲ್ಮೆ„ ಮತ್ತು ಕೆಲವೇ ಸೆಂಟಿಮೀಟರ್ ಆಳದಲ್ಲಿ ಅಗಾಧ ತಾಪಮಾನ ವ್ಯತ್ಯಾಸ ಇದೆ ಎಂಬ ಅಂಶವನ್ನು ಪತ್ತೆ ಹಚ್ಚಿ ಹೊಸ ಇತಿಹಾಸ ಸೃಷ್ಟಿಸಿತ್ತು.
ಗಂಧಕ ಅಂಶ ಪತ್ತೆಯಾಗಿ ರುವ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ಚಂದ್ರನಲ್ಲಿ ಸಿಕ್ಕಿರುವ ಮಾಹಿತಿಯನ್ನು ಪ್ರಾಥಮಿಕವಾಗಿ ಅಧ್ಯಯನ ನಡೆಸಿದ ಬಳಿಕ ಅಲ್ಲಿ ಅಲ್ಯುಮಿನಿಯಂ, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್ ಇರುವ ಬಗ್ಗೆಯೂ ದೃಢಪಟ್ಟಿದೆ. ಅಲ್ಲಿ ನೀರು ಯಾವ ಪ್ರಮಾಣ ದಲ್ಲಿ ಇದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದಿದೆ.
ಪ್ರಗ್ಯಾನ್ ರೋವರ್ನಲ್ಲಿರುವ ಲೇಸರ್ – ಇಂಡ್ನೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್ಐಬಿಎಸ್) ಉಪಕರಣದ ಮೂಲಕ ಮೊದಲ ಬಾರಿಗೆ ಈ ಬಗ್ಗೆ ಖಚಿತಪಡಿಸಿದೆ.
ಆಮ್ಲಜನಕವೂ ಇದೆ
ಚಂದ್ರನಲ್ಲಿ ಆಮ್ಲಜನಕದ ಅಂಶ ಇರುವುದನ್ನು ಕೂಡ ಎಲ್ಐಬಿಎಸ್ ದೃಢಪಡಿಸಿದೆ ಎಂದು ಇಸ್ರೋ ಹೇಳಿದೆ. ವಿಶೇಷ ವಾಗಿ ಅಭಿವೃದ್ಧಿಪಡಿಸಲಾಗಿರುವ ಲೇಸರ್ ಕಿರಣಗಳ ಮೂಲಕ ಚಂದ್ರನ ದಕ್ಷಿಣ ಭಾಗದ ಮೇಲ್ಮೆ„ ಪ್ರದೇಶವನ್ನು ಸಮಗ್ರವಾಗಿ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.