India: ಜಾಗತಿಕವಾಗಿ ಪ್ರಬಲವಾಗುತ್ತಿರುವ ಭಾರತ


Team Udayavani, Aug 30, 2023, 1:08 AM IST

indian flag1

ಭಾರತದ ಚಂದ್ರಯಾನದ ಯಶಸ್ಸು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ಈ ಯಶಸ್ಸು ಮಾನವೀಯತೆಯುಳ್ಳ ಎಲ್ಲರಗೂ ಸೇರಿ¨ªಾಗಿದೆ ಎಂಬ ಪ್ರಧಾನಿ ಮೋದಿಯವರ ಮಾತು ಚೇತೋಹಾರಿಯಾಗಿದೆ. ಇತರ ದೇಶಗಳ ಅಭಿವೃದ್ಧಿಗೆ ಸಹಕಾರ ನೀಡುವ ಆಶಯ ಹಾಗೂ ಇತ್ತೀಚೆಗೆ ನಡೆದ ಬ್ರಿಕ್ಸ್‌ ಶೃಂಗ ಸಭೆಯಲ್ಲಿ ಭಾರತದ ಕಾಳಜಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ಎತ್ತರಕ್ಕೇರಿಸಿದ್ದಂತೂ ಸತ್ಯ.

ಅಭಿವೃದ್ಧಿಶೀಲ ದೇಶಗಳ ಪರಸ್ಪರ ಸಹಕಾರ ವೇದಿಕೆಯಲ್ಲಿ ಭಾರತವು ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಆರ್ಥಿಕ ಏಕೀಕರಣವು ವ್ಯಾಪಾರ ನಿರ್ಬಂಧಗಳನ್ನು ಮಿತಿಗೊಳಿಸಲು ಹಾಗೂ ರಾಜಕೀ ಯ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸಲು ದೇಶಗಳ ಸಹಯೋಗವನ್ನು ಸೂಚಿಸುತ್ತದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಸರಕಾರದ ಕಡಿಮೆ ಹಸ್ತಕ್ಷೇಪದೊಂದಿಗೆ ಹೆಚ್ಚು ಸ್ಥಿರವಾಗಿ ಕಾರ್ಯ ನಿರ್ವ ಹಿಸಲು ಅನುವು ಮಾಡಿಕೊಡುವುದರೊಂದಿಗೆ ದೇಶ ಗಳು ತಮ್ಮ ಸಂಪನ್ಮೂಲಗಳ ಹೆಚ್ಚಿನ ಬಳಕೆಯನ್ನು ಮಾಡಲು ಅವಕಾಶವನ್ನು ನೀಡುತ್ತದೆ.

ಬ್ರಿಕ್ಸ್‌ ಮತ್ತು ಜಿ7
ಬ್ರೆಜಿಲ, ರಷ್ಯಾ,ಭಾರತ, ಚೀನ ಮತ್ತು ದಕ್ಷಿಣ ಆಫ್ರಿಕಾ ಐದು ರಾಷ್ಟ್ರಗಳನ್ನು ಒಳಗೊಂಡ ಒಂದು ಸಂಘಟನೆಯೇ ಬ್ರಿಕ್ಸ್‌ . ಬ್ರಿಕ್ಸ್‌ ಸಹಕಾರ ಮಾದರಿಯ ಮೂಲಕ ಉದಯೋನ್ಮುಖ ಮಾರು ಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಮ ತೋಲಿತ ಅಭಿವೃದ್ಧಿಗೆ ವಿಶಿಷ್ಟವಾದ ಕೊಡುಗೆ ನೀಡುತ್ತಿದೆ.

ಸುಮಾರು ಐವತ್ತು ವರ್ಷಗಳ ಹಿಂದೆ ಜಾಗತಿಕ ತೈಲ ಸಮಸ್ಯೆ ಎದುರಾದಾಗ ಶ್ರೀಮಂತ ದೇಶಗಳಾದ ಅಮೆರಿಕ, ಕೆನಡಾ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌ ಮತ್ತು ರಷ್ಯಾ ಸೇರಿ ಜಿ8 ಒಕ್ಕೂಟ ಆರಂಭವಾಗಿತ್ತು. 2014ರಲ್ಲಿ ರಷ್ಯಾ ಹೊರಬಂದ ಅನಂತರ ಈ ಗಂಪು ಜಿ7 ಎಂದೇ ಪ್ರಸಿದ್ಧವಾಯಿತು. ಅಭಿವೃದ್ಧಿಶೀಲ ದೇಶಗಳ ಪ್ರಮುಖ ಆರ್ಥಿಕ, ಸಾಮಾ ಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಿ 2006ರಲ್ಲಿ ಬ್ರಿಕ್ಸ್‌ ರೂಪು ಗೊಂಡಿತು.

ತನ್ನ ಸದಸ್ಯ ರಾಷ್ಟ್ರಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ನೀಡಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಘ ಟನೆಯಾದ ಬ್ರಿಕ್ಸ್‌ ಹಾಗೂ ತನ್ನ ಸಂಖ್ಯೆಯನ್ನು ಹೆಚ್ಚಿಸು ವತ್ತ ಆದ್ಯತೆ ನೀಡದ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಂಘಟನೆ ಜಿ7 ಮಧ್ಯೆ ಸದ್ಯ ಪರೋಕ್ಷ ಸಮರವೇ ಏರ್ಪಡುವಂತೆ ಕಾಣಿಸುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಭಾರತದ ಆಶಾದಾಯಕ ಹೆಜ್ಜೆ ಹೆಮ್ಮೆ ಪಡುವಂತೆ ಮಾಡಿದೆ.

ಬಹು-ಧ್ರುವ ವಿಶ್ವಕ್ರಮದತ್ತ ಬ್ರಿಕ್ಸ್‌
2008ರ ಆರ್ಥಿಕ ಬಿಕ್ಕಟ್ಟುಗಳು ಡಾಲರ್‌ ಪ್ರಾಬ ಲ್ಯದ ವಿತ್ತೀಯ ವ್ಯವಸ್ಥೆಯ ಸುಸ್ಥಿರತೆಯ ಮೇಲೆ ಅನುಮಾನಗಳನ್ನು ಹುಟ್ಟುಹಾಕಿದವು ಹಾಗೂ ಬ್ರಿಕ್ಸ್‌ ರಾಷ್ಟ್ರಗಳ ನಡುವೆ ಸಹಕಾರ ಪ್ರಾರಂಭವಾಗಲು ಮುಖ್ಯ ಕಾರಣವಾಯತು. ಇಂದು ಬ್ರಿಕ್ಸ್‌ ಪ್ರಪಂಚದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಒಟ್ಟು ಗೂಡಿಸುವ ಒಂದು ಪ್ರಮುಖ ಗುಂಪಾಗಿದೆ. ಇತ್ತೀ ಚಿಗಿನ ವರ್ಷಗಳಲ್ಲಿ ಚೀನ ಮತ್ತು ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಯಲ್ಲಿ ಬ್ರಿಕ್ಸ್‌ ಜಾಗತಿಕವಾಗ ಪ್ರಭಾವ ಬೀರುವ ಸಾಮರ್ಥ್ಯವನ್ನು ಗಳಿಸಿಕೊಂಡಿದೆ. ಭಾರತ ಜಿ7 ಒಕ್ಕೂಟದಲ್ಲಿರುವ ಇಟಲಿ, ಫ್ರಾನ್ಸ್‌ ಮತ್ತು ಇಂಗ್ಲೆಂ ಡನ್ನು ಮೀರಿಸಿದೆ.

ವಿಶ್ವದ ಜನಸಂಖ್ಯೆಯ ಶೇ.41ನ್ನು ಒಳ ಗೊಂಡಿರುವ ಬ್ರಿಕ್ಸ್‌ ವಿಶ್ವದ ಜಿಡಿಪಿಯ ಶೇ.31.5 ಮತ್ತು ವಿಶ್ವ ವ್ಯಾಪಾರದಲ್ಲಿ ಶೇ.16 ಪಾಲನ್ನು ಹೊಂ ದಿದೆ. ಜಿಡಿಪಿಯಲ್ಲಿ ಜಿ7 ಕೊಡುಗೆ ಶೇ.30 ಕ್ಕೆ ಕುಸಿದಿದೆ ಹಾಗೂ 2030 ರ ವೇಳೆ ಬ್ರಿಕ್ಸ್‌ ಕೊಡುಗೆ ಶೇ.50 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.

ಎರಡನೇ ಮಹಾಯುದ್ಧದ ಅನಂತರ ಜಾಗತಿಕ ಸೂಪರ್‌ ಪವರ್‌ ಸ್ಥಾನಮಾನವನ್ನು ಅನುಭವಿಸಿದ ಅಮೆರಿಕ ಇಂದು ಬ್ರಿಕ್ಸ್‌ನಿಂದ ಸವಾಲನ್ನು ಎದುರಿ ಸುತ್ತಿರುವುದಂತೂ ಸತ್ಯ. 2050ರ ವೇಳೆಗೆ ವಿಶ್ವ ವ್ಯಾಪಾರದಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯೊಂದಿಗೆ ಬ್ರಿಕ್ಸ್‌ ಬಣವನ್ನು ವಿಸ್ತರಿಸಲು ಪ್ರಯತ್ನಗಳು ನಡೆ ಯುತ್ತಿವೆ. “ಬಹು-ಧ್ರುವ’ ವಿಶ್ವಕ್ರಮಕ್ಕಾಗಿ ಪ್ರತಿಪಾ ದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್‌ ವಿಸ್ತರಣೆಯನ್ನು ಬೆಂಬಲಿಸಿದರು.

ಬ್ರಿಕ್ಸ್‌ ಸಹಕಾರ ಕಾರ್ಯವಿಧಾನದ ರಚನೆಯು ವೇಗವಾಗಿ ಬೆಳೆಯುತ್ತಿರುವ ಹಲವಾರು ದೇಶಗಳನ್ನು ಒಂದುಗೂಡಿಸುವ ರಾಜಕೀಯ ಅಗತ್ಯವನ್ನು ಆಧರಿ ಸಿದೆ. ಬ್ರಿಕ್ಸ್‌ ವಿಸ್ತರಣೆ ವಿಚಾರದಲ್ಲಿ ಭಾರತ ಮತ್ತು ಬ್ರೆಜಿಲ್‌ ತಮ್ಮದೇ ಆದ ನಿಲುವು ಹೊಂದಿವೆ. ಯಾವು ದೇ ಕಾರಣಕ್ಕೂ ಚೀನ ಹೇಳಿದಂತೆ ಕುಣಿಯುವ ಮತ್ತು ಚೀನದ ಸಿಲ್ಕ್ ರೋಡ್‌ ಯೋಜನೆಗೆ ಅನು ಕೂಲವಾಗುವಂತಹ ದೇಶಗಳಿಗೆ ಮಾತ್ರ ಸದಸ್ಯತ್ವ ನೀಡಬಾರದು ಎಂಬುದು ಭಾರತ ಮತ್ತು ಬ್ರೆಜಿಲ್‌ ದೇಶಗಳ ನಿಲುವು.

ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಸಮಾವೇ ಶಗೊಂಡ 15ನೇ ಬ್ರಿಕ್ಸ್‌ ಶೃಂಗ ಸಭೆಯಲ್ಲಿ ಅರ್ಜೆಂ ಟಿನಾ, ಇರಾನ್‌, ಸೌದಿ ಅರೇಬಿಯಾ, ಯುಎಇ, ಇಥಿ ಯೋಪಿಯಾ, ಈಜಿಪ್ಟ್ ನೂತನ ಸದಸ್ಯರಾಗಿ ಸೇರ್ಪ ಡೆಗೊಂಡಿವೆ. ಇನ್ನೂ ಸುಮಾರು ರಾಷ್ಟ್ರಗಳು ಬ್ರಿಕ್ಸ್‌ ಸೇರಿಕೊಳ್ಳುವ ಹಂಬಲ ವ್ಯಕ್ತಪಡಿಸಿವೆ.

ಜಾಗತಿಕ ದಕ್ಷಿಣದ ಧ್ವನಿ
ಬ್ರಿಕ್ಸ್‌ನ ವಿಸ್ತರಣೆಯು ಒಂದೆಡೆ “ಜಾಗತಿಕ ದಕ್ಷಿಣ ದ ಧ್ವನಿ’ ಎಂಬ ತನ್ನ ಹಕ್ಕನ್ನು ಬಲಪಡಿಸುತ್ತದೆ, ಇನ್ನೊಂ ದೆಡೆ ಚೀನದ ಹೆಚ್ಚುತ್ತಿರುವ ಪ್ರಾಬಲ್ಯದ ಬಗ್ಗೆ ಕಳವಳ ವನ್ನು ಹೆಚ್ಚಿಸುತ್ತದೆ. ಬ್ರಿಕ್ಸ್‌ ಪಾಶ್ಚಾತ್ಯ ವಿರೋಧಿ ಗುಂಪಾಗಬೇಕೆಂದು ಚೀನ ಬಯಸುತ್ತದೆ, ಆದರೆ ಭಾರತೀಯ ದೃಷ್ಟಿಕೋನವೆಂದರೆ ಅದು ಪಾಶ್ಚಾ ತ್ಯೇತರ ಗುಂಪು ಮತ್ತು ಹಾಗೆಯೇ ಉಳಿಯಬೇಕು.

ಬ್ರಿಕ್ಸ್‌ ಗುಂಪು ಭಾರತದ ವಿಧಾನವನ್ನು ಅನು ಸರಿಸಿದರೆ, ಅದು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ಅದರ ಆಧಾರದ ಮೇಲೆ, ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯನ್ನು ಸುಧಾರಿಸುವ ಮಾರ್ಗಗಳನ್ನು ಚರ್ಚಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾ ಮಗಳಂತಹ ಜಾಗತಿಕ ಸಮಸ್ಯೆಗಳನ್ನು ಎದುರಿ ಸಲು ಜಿ7ನೊಂದಿಗೆ ತೊಡಗಿಸಿಕೊಳ್ಳಬಹು ದು. ಪ್ರಸ್ತುತ ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ಬಯ ಸುವ, ಆದರೆ ಅಮೆರಿಕ ಮತ್ತು ಚೀನದ ನಡುವೆ ಸ್ಪಷ್ಟವಾಗಿ ಪಕ್ಷವನ್ನು ತೆಗೆದುಕೊಳ್ಳಲು ಬಯಸದ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಹೆಚ್ಚು ಒಪ್ಪಿಗೆಯಾಗಿ ತೋರುತ್ತದೆ.

ಹೆಚ್ಚಿನ ಸಂಖ್ಯೆಯ ಅಭಿವೃದ್ಧಿಶೀಲ ರಾಷ್ಟ್ರಗಳು ಬ್ರಿಕ್ಸ್‌ ದೇಶಗಳಿಗೆ ಸೇರಲು ಕೂಗುತ್ತಿರುವಾಗ, ಭಾರ ತವು ವಿಸ್ತೃತ ಬಣದ ಕ್ರಿಯಾತ್ಮಕತೆಯ ಬಗ್ಗೆ ಜಾಗರೂ ಕವಾಗಿದೆ ಮತ್ತು ಅದು ತನ್ನ ಕಾರ್ಯತಂತ್ರದ ಪಾಲು ದಾರರಿಗೆ ಆದ್ಯತೆ ನೀಡುವುದಾಗಿ ಸೂಚಿಸಿದೆ.

ಜಾಗತಿಕ ಶಕ್ತಿಯಾಗಿ ಬ್ರಿಕ್ಸ್‌ ಹಾಗೂ ಚಾಲಕಶಕ್ತಿಯಾಗಿ ಭಾರತ

ಬ್ರಿಕ್ಸ್‌ ಸಮಾನತೆ, ಪರಸ್ಪರ ತಿಳಿವಳಿಕೆ, ನಂಬಿಕೆ ಮತ್ತು ಗೌರವದ ಮನೋಭಾವವನ್ನು ಆಧರಿಸಿದೆ. ಬ್ರಿಕ್ಸ್‌ ಹೊಸ ಯುಗದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಶಕ್ತಿಗಳನ್ನು ಒಟ್ಟುಗೂಡಿಸುತ್ತದೆ; ಅವುಗಳಲ್ಲಿ ಪ್ರತಿಯೊಂದೂ ಯುರೋಪ್‌, ಏಷ್ಯಾ, ದಕ್ಷಿಣ ಅಮೆ ರಿಕ ಮತ್ತು ಆಫ್ರಿಕಾದಲ್ಲಿ ಪ್ರಾದೇಶಿಕ ಶಕ್ತಿಯಾಗಿದೆ.

ಹಿಂದೆ ಜಗತ್ತಿನಲ್ಲಿ ಏನೇ ಆದರೂ ಜಿ7 ದೇಶಗಳ ಇಂಗಿತ ನಿರ್ಣಾಯಕವಾಗುತ್ತಿತ್ತು. ಆದರೆ ಈಗ ಹಾಗಿಲ್ಲ ಎನ್ನುವುದು ಸರ್ವವಿದಿತ. ರಷ್ಯಾ-ಉಕ್ರೇನ್‌ ಯುದ್ದದ ವಿಷಯದಲ್ಲಿ ಜಿ7 ದಿಗ್ಬಂಧನ ಹೇರಿದರೆ, ಬ್ರಿಕ್ಸ್‌ ದೇಶಗಳು ತಟಸ್ಥ ನಿಲುವನ್ನು ಪ್ರದರ್ಶಿಸಿ ರಷ್ಯಾ ಜತೆಗೆ ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರ ನಡೆಸುತ್ತಿದೆ.

ಆರ್ಥಿಕ ಸ್ಥಿರತೆ ಹಾಗೂ ಕ್ಷಿಪ್ರ ಆರ್ಥಿಕ ಬೆಳವ ಣಿಗೆಯನ್ನು ದಾಖಲಿಸುತ್ತಿರುವ ಭಾರತ, ಮುಂದಿನ ದಶಕದಲ್ಲಿ ಬ್ರಿಕ್ಸ್‌ ಒಕ್ಕೂಟದ ಮಿಕ್ಕೆಲ್ಲ ಸದಸ್ಯ ರಾಷ್ಟ್ರಗ ಳನ್ನೂ ಮೀರಿಸಲಿದೆ ಎಂದು ಗ್ರಹಿಸಲಾಗಿದೆ. ಏರುಗತಿ ಯಲ್ಲಿರುವ ದೇಶೀಯ ಉತ್ಪನ್ನ ಹಾಗೂ ಅನು ಕೂಲಕರ ಜಾಗತಿಕ ಕಾರ್ಯತಂತ್ರದ ವಾತಾವರಣದ ಕಾರಣದಿಂದಾಗಿ ಭಾರತದ ಪ್ರಾಬಲ್ಯ ಹೆಚ್ಚುತ್ತಿದೆ.
ಜೊಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ನಡೆದ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್‌ ಆಗಲಿ ದ್ದು, ದಕ್ಷಿಣಾರ್ಧ ಗೋಳದ ಸಮಸ್ಯೆಗಳಿಗೆ ಪರಿ ಹಾರೋಪಾಯಗಳನ್ನು ಒದಗಿಸುವ ವಿಶ್ವಾಸಾರ್ಹ ರಾಷ್ಟ್ರವಾಗಲಿದೆ’ ಎಂದು ಭರವಸೆ ನೀಡಿದ್ದು ಗಮನಾರ್ಹ.

ಬ್ರಿಕ್ಸ್‌ ಬಾಹ್ಯಾಕಾಶ ಪರಿಶೋಧನ ಒಕ್ಕೂಟದ ಮೋದಿಯವರ ಪ್ರಸ್ತಾವ, ಅಭಿವೃದ್ಧಿಶೀಲ ದೇಶಗಳಿ ಗಾಗಿ ಬಾಹ್ಯಾಕಾಶ ಯಾನದ ಸೌಲಭ್ಯಗಳನ್ನು ಒದಗಿ ಸುವಲ್ಲಿ ಭಾರತದ ಆಶಯಕ್ಕೆ ಹೆಚ್ಚು ಮೌಲ್ಯ ಬಂ ದಿದೆ. ಭಾರತದ ಉಪಕ್ರಮಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಮರ್ಥವಾಗಿ ಗುರುತಿಸಿಕೊಳ್ಳಲು ಹಾಗೂ ಭಾರತವು ಅಂತಾರಾಷ್ಟ್ರೀಯ ಸಮದಾ ಯದ ಅಗತ್ಯತೆಗಳಿಗೆ ಸ್ಪಂದಿಸಬಲ್ಲ ಹಾಗೂ ಹೊಂದಿ ಕೊಳ್ಳಬಲ್ಲ ದೇಶ ಎಂದು ಯಶಸ್ವಿಯಾಗಿ ಬಿಂಬಿಸಿ ಕೊಂಡಿರುವುದು ಆಶಾದಾಯಕ ಬೆಳವಣಿಗೆ.

ಡಾ| ಎ. ಜಯ ಕುಮಾರ ಶೆಟ್ಟಿ, ಉಜಿರೆ

ಟಾಪ್ ನ್ಯೂಸ್

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.