UBI: ದಾಖಲೆಯ ಲಾಭಾಂಶ ಚೆಕ್ ಹಸ್ತಾಂತರ
Team Udayavani, Aug 30, 2023, 1:07 AM IST
ಮಣಿಪಾಲ: ಯೂನಿಯನ್‌ಬ್ಯಾಂಕ್ ಆಫ್ ಇಂಡಿಯಾವು ತನ್ನ ಇತಿಹಾಸದಲ್ಲಿಯೇ ದಾಖಲೆಯ 1,712 ಕೋಟಿ ರೂ.ಗಳ ಲಾಭಾಂಶ ವನ್ನು ಕೇಂದ್ರ ಸರಕಾರಕ್ಕೆ ನೀಡಿದೆ.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ((MD, CEO) ಎ. ಮಣಿಮೇಖಲೈ ಅವರು ಹೊಸದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ದಾಖಲೆಯ 1,712 ಕೋಟಿ ರೂ.ಗಳ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದರು. ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ನೀಡಿರುವ ಸರ್ವಾಧಿಕ ಲಾಭಾಂಶವಾಗಿದೆ.
ಹೊಸ ಅಧ್ಯಕ್ಷರ ಸಾಧನೆ
2022ರ ಜೂನ್ 2 ರಂದು ಸರಕಾರವು ಎ. ಮಣಿಮೇಖಲೈ ಅವರನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಎಂಡಿ ಮತ್ತು ಸಿಇಒ ಆಗಿ ಮೂರು ವರ್ಷಗಳ ಅವಧಿಗೆ ನೇಮಿಸಿತು. ಅವರ ನೇಮಕದ ಬಳಿಕ ಒಂದು ವರ್ಷದೊಳಗೆ ಬ್ಯಾಂಕಿನ ಪ್ರಗತಿಯ ವೇಗಕ್ಕೆ ಹೊಸ ಆಯಾಮವನ್ನು ನೀಡಿದರು. ಮೇ 2023ರ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ಲಾಭಾಂಶದಲ್ಲಿ ಶೇ. 80.57 ಜಿಗಿತವನ್ನು ಕಂಡು 2,811 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿತು. ರಿಟನ್-ಆಫ್ ಖಾತೆಗಳಿಂದ ದೊಡ್ಡ ಪ್ರಮಾಣದ ಬಾಕಿ ಸಾಲ ವಸೂಲಾತಿಯೇ ಇದಕ್ಕೆ ಮೂಲ ಕಾರಣವಾಗಿದೆ.
ಒಂದು ವರ್ಷದ ಹಿಂದೆ 5,265 ಕೋಟಿ ರೂ. ಇದ್ದ ಬ್ಯಾಂಕಿನ ನಿವ್ವಳ ಲಾಭವು 2022-23ರಲ್ಲಿ 8,512 ಕೋಟಿ ರೂ.ಗೆ ಏರಿದೆ. ಕಳೆದ ವರ್ಷ ರಿಟನ್-ಆಫ್ ಖಾತೆಗಳಿಂದ ವಸೂಲಾತಿ 294 ಕೋಟಿ ರೂ. ಆಗಿದ್ದರೆ, ಈ ಸಾಲಿನಲ್ಲಿ 2,954 ಕೋಟಿ ರೂ. ವಸೂಲಾಗಿದೆ.
ಗುರಿ 15,000, ಸಾಧನೆ 20,000
ಆರ್ಥಿಕ ವರ್ಷ 2023ರಲ್ಲಿ ಬ್ಯಾಂಕ್ 15,000 ಕೋಟಿ ರೂಪಾಯಿಗಳ ಸಾಲ ವಸೂಲಾತಿಯ ಗುರಿ ಹೊಂದಿತ್ತು. ಆದರೆ 20,000 ಕೋಟಿಗೂ ಹೆಚ್ಚು ಸಂಗ್ರಹಿಸುವ ಮೂಲಕ ಗುರಿಯನ್ನು ಮೀರಿದ ಅದ್ಭುತ ಸಾಧನೆಗೈದಿದೆ ಎಂದು ಮಣಿಮೇಖಲೈ ತಿಳಿಸಿದ್ದಾರೆ.
ವೃತ್ತಿ ಜೀವನದ ಯಶಸ್ಸು
ವಿವಿಧ ಸರಕಾರಿ ಬ್ಯಾಂಕ್‌ಗಳಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ವೃತ್ತಿಪರ ಬ್ಯಾಂಕರ್ ಆಗಿರುವ ಎ. ಮಣಿಮೇಖಲೈ ಅವರು ಬೆಂಗಳೂರು ವಿವಿಯಿಂದ ಎಂಬಿಎ ಮತ್ತು ಮುಂಬಯಿಯ ನಸೀì ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್(NMIMS)ನಿಂದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ.
ಅವರು ಬ್ಯಾಂಕಿಂಗ್ ವೃತ್ತಿಜೀವನ ವನ್ನು ಹಿಂದಿನ ವಿಜಯಾ ಬ್ಯಾಂಕ್‌ನಲ್ಲಿ 1988ರಲ್ಲಿ ಅಧಿಕಾರಿಯಾಗಿ ಪ್ರಾರಂಭಿಸಿದರು. ಅವರು ಅಲ್ಪಾವಧಿ ಯಲ್ಲಿಯೇ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿದ್ದಲ್ಲದೆ, ಬೆಂಗಳೂರು ಉತ್ತರ ವಲಯದ ಮುಖ್ಯಸ್ಥರೂ ಆಗಿದ್ದರು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರುವ ಮೊದಲು, ಅವರು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.