Supermoon: ಆ. 31: ಹುಣ್ಣಿಮೆಯ ಸೂಪರ್ಮೂನ್… 14 ಅಂಶ ದೊಡ್ಡದಾಗಿ ಕಾಣುವ ಚಂದ್ರ
Team Udayavani, Aug 30, 2023, 8:45 AM IST
ಉಡುಪಿ: ಪ್ರಸಕ್ತ ವರ್ಷದ 4 ಸೂಪರ್ಮೂನ್ಗಳಲ್ಲಿ ಆ. 31ರ ಸೂಪರ್ಮೂನ್ ಅತ್ಯಂತ ಮಹತ್ವದ್ದಾಗಿದೆ.
ಜು. 3, ಆ. 1, ಆ. 31 ಮತ್ತು ಸೆ. 29 ಸೂಪರ್ಮೂನ್ ಕಾಣಿಸುವ ದಿನಗಳಾಗಿವೆ.
ಜು. 3ರಂದು ಚಂದ್ರ ಭೂಮಿ ಯಿಂದ 3,61,800 ಕಿ.ಮೀ., ಆ. 1ರಂದು 3,57,530 ಕಿ.ಮೀ., ಆ. 31ರಂದು 3,57,344 ಕಿ.ಮೀ. ಹಾಗೂ ಸೆ. 29ರಂದು 3,61,552 ಕಿ.ಮೀ. ಅಂತರದಲ್ಲಿರುತ್ತಾನೆ. ಶ್ರಾವಣದ ಈ ಹುಣ್ಣಿಮೆಯ ಸೂಪರ್ಮೂನ್ ಹೆಚ್ಚಿನ ಪ್ರಭೆಯಿಂದ ಕೂಡಿರುತ್ತದೆ. 4 ಸೂಪರ್ಮೂನ್ಗಳಲ್ಲಿ ಆ. 31ರ ಸೂಪರ್ಮೂನ್ ಭೂಮಿಗಿಂತ ಹೆಚ್ಚು ಸಮೀಪ. ಹೀಗಾಗಿ ಹುಣ್ಣಿಮೆಯ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ ಇರಲಿದೆ.
ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು, ಅದರಲ್ಲೂ ಇವೆರಡೂ ಸೂಪರ್ಮೂನ್ಗಳಾಗಿರುವುದು ವಿಶೇಷ ಎಂದು ಖಗೋಳಶಾಸ್ತ್ರಜ್ಞ ಡಾ| ಎ.ಪಿ. ಭಟ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Fresh violence: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ ಓರ್ವ ಮೃತ್ಯು, ಹಲವರಿಗೆ ಗಾಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.