Bagalkot: ಆಧಾರ ಗೋಳು ಕೇಳುವವರು ಯಾರು?


Team Udayavani, Aug 30, 2023, 6:41 PM IST

Bagalkot: ಆಧಾರ ಗೋಳು ಕೇಳುವವರು ಯಾರು?

ಮಿಶ್ರಿಕೋಟಿ: ಸರ್ಕಾರದ ಭಾಗ್ಯಗಳನ್ನು ಪಡೆಯಲು ಆಧಾರ ಕಾರ್ಡ್‌ ಇರಬೇಕು. ಆದರೆ ಆಧಾರ ಕಾರ್ಡ್‌ನಲ್ಲಿ ಚಿಕ್ಕಪುಟ್ಟ ತಿದ್ದುಪಡಿ ಮಾಡಿಸುವುದು ಕಲಘಟಗಿ ತಾಲೂಕಿನ ಜನರಿಗೆ ಅಷ್ಟು ಸುಲಭವಲ್ಲ. ಇಡೀ ತಾಲೂಕಿಗೊಂದೇ ಆಧಾರ ಕೇಂದ್ರವಿದ್ದು, ತಾಲೂಕಿನ ಎಲ್ಲ ಭಾಗದ ಜನತೆ ಕಲಘಟಗಿಯ ತಹಶೀಲ್ದಾರ್‌ ಕಚೇರಿಯಲ್ಲಿರುವ ಎ.ಜೆ.ಎಸ್‌. ಕೆ ಆಧಾರ ಕೇಂದ್ರವನ್ನು ಹುಡುಕಿಕೊಂಡು ಬರುತ್ತಿದ್ದಾರೆ.

ಹೊಸ ಸರ್ಕಾರ ಒಂದೊಂದಾಗಿ ಗ್ಯಾರಂಟಿ ಯೋಜನೆ ಈಡೇರಿಸುತ್ತಿದೆ. ಆದರೆ ಎಲ್ಲ ಗ್ಯಾರಂಟಿ ಭಾಗ್ಯಗಳಿಗೆ ಆಧಾರ ಅಪ್‌ಡೇಟ್‌ ಇರಬೇಕು. ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಆಗಿರಬೇಕು. ಆಧಾರ ಕಾರ್ಡ್‌ನಲ್ಲಿ ಚಾಲ್ತಿಯಲ್ಲಿರುವ ಮೊಬೈಲ್‌ ನಂಬರ್‌
ಇರಬೇಕು. ಹೀಗೆ ಹತ್ತು ಹಲವು ಆಧಾರ ಸಂಬಂಧಿತ ತಾಂತ್ರಿಕ ಸಮಸ್ಯೆಗಳಿಂದಾಗಿ ಗ್ರಾಮೀಣ ಭಾಗದ ಜನ ಆಧಾರ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ.

ಬೆಳ್ಳಂಬೆಳಗ್ಗೆಯಿಂದ ಸರತಿ: ಆ.29 ಮಂಗಳವಾರ ಆಧಾರ ನೋಂದಣಿಯ ಟೋಕನ್‌ ಪಡೆದುಕೊಳ್ಳಲು ಜನ ನೂರಾರು ಸಂಖ್ಯೆಯಲ್ಲಿ ಸರದಿಯಲ್ಲಿದ್ದರು. ಅವರೆಲ್ಲ ಬೆಳಗ್ಗೆ 4 ಗಂಟೆಗೂ ಮೊದಲು ತಮ್ಮ ತಮ್ಮ ಗ್ರಾಮಗಳಿಂದ ಬಂದಿದ್ದರು. ಆಧಾರ ಕೇಂದ್ರದ ಸಿಬ್ಬಂದಿ ಬರುವ ಮೊದಲೇ ಜನ ಸ್ವಯಂಪ್ರೇರಣೆಯಿಂದ ಸರತಿ ಸಾಲಿನಲ್ಲಿ ಯಾವುದೇ ಲೋಪದೋಷವಾಗಬಾರದು ಎಂದು ಅನುಕ್ರಮವಾಗಿ ತಾವೇ ಒಂದು ಹಾಳೆಯಲ್ಲಿ ತಮ್ಮ ಹೆಸರುಗಳನ್ನು ಬರೆದುಕೊಳ್ಳುತ್ತಿದ್ದರು! ಶಿವನಾಪುರ, ಸೂಳಿಕಟ್ಟಿ, ಸೋಮನಕೊಪ್ಪ, ಭೋಗೆನಾಗರಕೊಪ್ಪ, ತುಮರಿಕೊಪ್ಪ, ದೇವಿಕೊಪ್ಪ, ದಾಸ್ತಿಕೊಪ್ಪ, ದಿಂಬವಳ್ಳಿ, ಬೇಗೂರು, ಸಂಗೇದೇವರಕೊಪ್ಪ, ಕಲಘಟಗಿ ಪಟ್ಟಣ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳ ಜನ ಬಂದು ಸರತಿಯಲ್ಲಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳ ಪೋಷಕರು ಹೀಗೆ ಎಲ್ಲ ತರಹದ ಜನ ಸೇರಿದ್ದರು.

ನೋಂದಣಿ ಸಮಸ್ಯೆ: ಈ ಮೊದಲು ಪ್ರತಿದಿನ ಆಧಾರ ನೋಂದಣಿ ಟೋಕನ್‌ ಪ್ರತಿ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಜನಸಂದಣಿ ಹೆಚ್ಚಿದಂತೆ ಒಂದೇ ದಿನ ಎಷ್ಟು ಜನ ಇರುತ್ತಾರೋ ಎಲ್ಲರಿಗೂ ಪ್ರತಿದಿನಕ್ಕೆ 20 ಅಥವಾ 25ರಂತೆ ಎರಡು ವಾರಗಳ ಮುಂಗಡ ಟೋಕನ್‌ ನೀಡುತ್ತಿದ್ದಾರೆ. ಕಳೆದ ಬಾರಿ ಆ.9ರಿಂದ ಆ.28ರ ವರೆಗೆ ಇಪ್ಪತ್ತೊಂದು ದಿನಗಳ ಟೋಕನ್‌ ನೀಡಿದ್ದು, ಹೊಸ ಟೋಕನ್‌ ಆ.29ರಂದು ನಿಗದಿ ಮಾಡಲಾಗಿತ್ತು.

ಯಾಕೆ ತಿದ್ದುಪಡಿ ಬೇಕು?
ಸರ್ಕಾರದ ವಿವಿಧ ಯೋಜನೆಗಳಿಗೆ, ಶಾಲಾ ದಾಖಲಾತಿ, ಬಡ ಮಕ್ಕಳ ವಿದ್ಯಾರ್ಥಿವೇತನ, ಮೊಬೈಲ್‌ ನಂಬರ ಜೋಡಣೆ, ತಂದೆಯ ಹೆಸರು ತಿದ್ದುಪಡಿ, ನಿಯತಕಾಲಿಕ ಆಧಾರ ಅಪ್‌ಡೇಟ್‌, ಬಾಲಆಧಾರ, ಹೆಸರು ತಿದ್ದುಪಡಿ, ಅಂಚೆ ವಿಳಾಸ ಬದಲಾವಣೆ ಹೀಗೆ ಎಲ್ಲದಕ್ಕೂ ಆಧಾರ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಸಲೇಬೇಕು.

ಕಲಘಟಗಿ ತಾಲೂಕು ಸುಮಾರು 87 ಕಂದಾಯ ಗ್ರಾಮಗಳು, 27 ಗ್ರಾಪಂ‌ಳು, 3 ಹೋಬಳಿ ಕೇಂದ್ರ, 684 ಚಕಿಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಬೃಹತ್‌ ತಾಲೂಕು ಆಗಿದೆ. ಆದರೂ ಆಧಾರ ಸೇವಾ ಕೇಂದ್ರ ಕಲಘಟಗಿಯ ತಹಶೀಲ್ದಾರ್‌ ಕಚೇರಿಯಲ್ಲಿ ಮಾತ್ರ ಇದೆ. ದುಮ್ಮವಾಡ ಮತ್ತು ತಬಕದಹೊನ್ನಳ್ಳಿಯ ನಾಡಕಚೇರಿಯಲ್ಲಿ ಆಧಾರ ಕೇಂದ್ರಗಳು ಇಲ್ಲ. ಮಂಗಳವಾರ (ಆ.29) ಬಂದಿದ್ದ ಜನರಿಗೆ ಅನುಗುಣವಾಗಿ ಮುಂದಿನ ತಿಂಗಳ 26ರ ವರೆಗೆ ಟೋಕನ್‌ ನೀಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈಗಿರುವ ಜನಸಂದಣಿ ನೋಡಿಕೊಂಡು ಹೋಬಳಿ ಮಟ್ಟದಲ್ಲಾದರೂ ಸ್ಥಳೀಯ ಆಡಳಿತವು ಒಂದು ಆಧಾರ ಕೇಂದ್ರಗಳನ್ನು ಒದಗಿಸಿಕೊಡಬೇಕೆಂಬುದು ತಾಲೂಕಿನ ಜನರ ಬೇಡಿಕೆಯಾಗಿದೆ.

ಇತ್ತೀಚೆಗೆ ಆಧಾರ ನೋಂದಣಿ ಮತ್ತು ತಿದ್ದುಪಡಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಒಂದೇ ಆಧಾರ ಕೇಂದ್ರ ಇರುವುದರಿಂದ ಜನಸಂದಣಿಯಾಗುತ್ತಿದ್ದು, ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ.
*ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್‌

ಮೊಮ್ಮಕ್ಕಳ ಪರವಾಗಿ ನಾನು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಶಾಲಾ ದಾಖಲಾತಿಗಾಗಿ ಆಧಾರ ಕಾರ್ಡ್‌ ತಿದ್ದುಪಡಿಯಾಗಬೇಕಿದೆ. ಜನರ ಒತ್ತಡ ಹೆಚ್ಚಿರುವುದರಿಂದ ಕಾಯುವಿಕೆ ತಪ್ಪುತ್ತಿಲ್ಲ. ಈಗ ಸರ್ಕಾರದ ಪ್ರತಿಯೊಂದು ಯೋಜನೆಗೂ ಆಧಾರ ಕಾರ್ಡ್‌ ಬೇಕು. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಇನ್ನೊಂದು ಕೇಂದ್ರ ಆರಂಭಿಸಬೇಕು.
*ಹಜರೇಸಾಬ ಕಲಘಟಗಿ

*ಗಿರೀಶ ಮುಕ್ಕಲ್ಲ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.