Aditya-L1: ಆದಿತ್ಯ-ಎಲ್1 ಉಡಾವಣ ತಾಲೀಮು ಪೂರ್ಣ
Team Udayavani, Aug 30, 2023, 11:51 PM IST
ಹೊಸದಿಲ್ಲಿ: ಭಾರತದ ಮೊದಲ ಸೂರ್ಯ ಸಂಶೋಧನ ಯೋಜನೆ “ಆದಿತ್ಯ ಎಲ್1′ ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಬುಧವಾರ ಉಡಾವಣ ತಾಲೀಮು ನಡೆಸಿದೆ. ಈ ಕುರಿತ ಚಿತ್ರಗಳನ್ನು ಟ್ವಿಟರ್ನಲ್ಲಿ ಇಸ್ರೋ ಹಂಚಿಕೊಂಡಿದೆ. “ಆದಿತ್ಯ-ಎಲ್1 ಯೋಜನೆಯಡಿ ಪಿಎಸ್ಎಲ್ವಿ-ಸಿ57 ಉಡಾವಣೆಗೆ ಎಲ್ಲ ಸಿದ್ಧತೆಗಳು ಪ್ರಗತಿಯಲ್ಲಿವೆ. ಈ ಕುರಿತ ಉಡಾವಣ ತಾಲೀಮು ಪೂರ್ಣಗೊಂಡಿದೆ’ ಎಂದು ಇಸ್ರೋ ಟ್ವೀಟ್ ಮಾಡಿದೆ. ಸೆ. 2ರಂದು “ಆದಿತ್ಯ ಎಲ್1′ ಉಡಾವಣೆಗೆ ಇಸ್ರೋ ದಿನಾಂಕ ನಿಗದಿಪಡಿಸಿದೆ.
ಈ ನೌಕೆಯು ಏಳು ಪೇಲೋಡ್ಗಳನ್ನು ಹೊಂದಿರಲಿದೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಪಾರ್ಟಿಕಲ್ ಡಿಟೆಕ್ಟರ್ಗಳ ಸಹಾಯದಿಂದ ಸೂರ್ಯನ ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಹೊರಗಿನ ಪದರಗಳನ್ನು ಅಧ್ಯಯನ ನಡೆಸಲಾಗುತ್ತದೆ. ಇದು ಯಾವುದೇ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ, ಸೂರ್ಯ-ಭೂಮಿ ನಡುವಿನ ಲ್ಯಾಗ್ರಾಂಜಿಯನ್ ಪಾಯಿಂಟ್(ಎಲ್1) ಸುತ್ತಲಿನ ಕಕ್ಷೆಯಲ್ಲಿ ಆದಿತ್ಯ-ಎಲ್1 ಇರಲಿದ್ದು, ಸೂರ್ಯನ ನಿರಂತರ ಅಧ್ಯಯನ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.