Haveri: ಬದುಕು ಛಿದ್ರಗೊಳಿಸಿದ ಪಟಾಕಿ; ಗೋದಾಮಿಗೆ ಪರವಾನಗಿ ಕೊಟ್ಟವರು ಯಾರು?
ಪಟಾಕಿ ಸಂಗ್ರಹಿಸಿಟ್ಟಿದ್ದ ಕಟ್ಟಡದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ.
Team Udayavani, Aug 31, 2023, 1:22 PM IST
ಹಾವೇರಿ: ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂದರ್ಭ ಗೋದಾಮಿನ ಒಳಗಡೆ ಯಾರಾದರೂ ಕಾರ್ಮಿಕರು ಇದ್ದಾರೆಯೇ ಎಂದು ವಿಚಾರಿಸಿದಾಗ ಅಂಗಡಿ ಮಾಲಿಕರು ಯಾರೂ ಇಲ್ಲ ಎಂಬ ಮಾಹಿತಿ ಕೊಟ್ಟಿರುವುದು, ಅಗ್ನಿ ಅವಘಡ ತಡೆಗಟ್ಟಲು ಗೋದಾಮಿನಲ್ಲಿ ಮುಂಜಾಗ್ರತಾ ಕ್ರಮಗಳು ಇಲ್ಲದಿರುವ ಪರಿಣಾಮ ಅಗ್ನಿ ದುರಂತ ಸಂಭವಿಸಿ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ನಗರದ ಹಾನಗಲ್ಲ ರಸ್ತೆಯಲ್ಲಿರುವ ಆಲದಕಟ್ಟಿ ಗ್ರಾಮದ ಬಳಿಯ ವಿಜಯ ಯರೇಸೀಮೆ ಎಂಬುವರು ಜನವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿ ವಾಣಿಜ್ಯ ಕಟ್ಟಡ ನಿರ್ಮಿಸಿಕೊಂಡಿದ್ದರು. 2021ರಲ್ಲಿ ಪಟಾಕಿ ಮಾರಾಟ ಹಾಗೂ ಸಂಗ್ರಹಣೆಗೆ ಲೈಸೆನ್ಸ್ ಪಡೆದುಕೊಂಡಿದ್ದರು. ಪ್ರಸಕ್ತ ಸಾಲಿಗೆ ಲೈಸೆನ್ಸ್‌ಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿ ಲೈಸೆನ್ಸ್ ನವೀಕರಣ ವಿಚಾರಣೆ ಹಂತದಲ್ಲಿರುವಾಗಲೇ ಈ ಅವಘಡ ಸಂಭವಿಸಿದೆ.
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಿಟ್ಟಿದ್ದಲ್ಲದೇ, ಶೆಟರ್ಸ್‌ಗೆ ವೆಲ್ಡಿಂಗ್ ಮಾಡಿಸುವಾಗ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಈ ದುರಂತ ಸಂಭವಿಸಿ ಹಾವೇರಿ ಜನತೆ ಬೆಚ್ಚಿಬೀಳುವಂತೆ ಮಾಡಿದೆ.
ಗೋದಾಮು ಮಾಲಿಕರ ನಿರ್ಲಕ್ಷ್ಯ:
ಹೊರಗಡೆ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಒಳಗಡೆ ನಾಲ್ವರು ಕೆಲಸಗಾರರು ಪಟಾಕಿ ಹೊಂದಿಸುವ ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ 11.45ರ ವೇಳೆಗೆ ಗೋದಾಮಿಗೆ ಬೆಂಕಿ ಹತ್ತಿದೆ. ಮಧ್ಯಾಹ್ನದ ವೇಳೆಗೆ ಧಗಧಗಿಸಿ ಬೆಂಕಿ ಉರಿಯುತ್ತಿದೆ. ಆಗ
ಗೋದಾಮಿನ ಒಳಗಡೆ ಯಾರಾದರೂ ಇದ್ದಾರೆಯೇ ಎಂದು ವಿಚಾರಿಸಿದಾಗ, ಅಂಗಡಿ ಮಾಲಿಕ ಯಾರೂ ಇಲ್ಲ ಎಂಬ
ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಕೆಲಸಕ್ಕೆ ಬಂದಿದ್ದ ನಾಲ್ವರ ಫೋನ್‌ಗಳು ಸ್ವಿಚ್ಡ್ ಆಫ್ ಆಗಿವೆ. ಎಲ್ಲಿದ್ದಾರೆ ಎಂದು ಅವರ ಸಂಬಂಧಿಕರು ಕೇಳಿದರೂ ಕೆಲಸದ
ನಿಮಿತ್ತ ಹೊರಗಡೆ ಹೋಗಿದ್ದಾರೆ ಎಂಬ ಸಬೂಬು ಹೇಳಿದ್ದಾರೆ. ಸರಿಯಾದ ಮಾಹಿತಿ ಕೊಟ್ಟಿದ್ದರೆ ನಾಲ್ವರ ಜೀವಗಳು
ಉಳಿಯುತ್ತಿದ್ದವು ಎಂದು ಕಾಟೇನಹಳ್ಳಿ ಗ್ರಾಮದ ಹೊನ್ನಪ್ಪ ಯಲಿಗಾರ ದೂರಿದರು.
ಜನವಸತಿ ಪ್ರದೇಶದಲ್ಲಿ ಲೈಸೆನ್ಸ್: ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡು ವಾಣಿಜ್ಯ ಕಟ್ಟಡ ನಿರ್ಮಿಸಿದ್ದಲ್ಲದೆ ಅಪಾಯಕಾರಿ ಸಿಡಿಮದ್ದುಗಳನ್ನು ಜನವಸತಿ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಪಟಾಕಿ ಸಂಗ್ರಹಿಸಿಟ್ಟುಕೊಂಡಿರುವ ಕಟ್ಟಡದ
ಅಕ್ಕಪಕ್ಕದಲ್ಲಿ ವಸತಿ ಮನೆಗಳಿವೆ ಎಂದು ಗ್ರಾಪಂ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟರೂ ಲೈಸೆನ್ಸ್ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಮೂಡುವಂತಾಗಿದೆ.
ಪಟಾಕಿ ಸಂಗ್ರಹಿಸಿಟ್ಟಿದ್ದ ಕಟ್ಟಡದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ತುರ್ತು ನಿರ್ಗಮನ ಬಾಗಿಲು ಇಲ್ಲ. ಬೆಂಕಿ ತಗಲಿದರೆ ನಂದಿಸಲು ಸಾಮಗ್ರಿಗಳ ಸಂಗ್ರಹ ಇರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಲೈಸೆನ್ಸ್ ಕೊಟ್ಟ ಬಳಿಕ ಅಧಿಕಾರಿಗಳು ಏನೆಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲಿಸುವ ಗೋಜಿಗೂ ಹೋಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ವೆಲ್ಡಿಂಗ್ ಮಾಡೋಕೆ ಹೋಗದ ಹಾವೇರಿಗರು
ಗಣೇಶನ ಹಬ್ಬದ ನಿಮಿತ್ತ ಕೋಟ್ಯಂತರ ರೂ. ಮೌಲ್ಯದ ಪಟಾಕಿಗಳನ್ನು ಈಗಾಗಲೇ ಸಂಗ್ರಹ ಮಾಡಲಾಗಿತ್ತು. ಹೀಗಾಗಿ, ಗೋದಾಮಿನ ಶೆಟರ್ಸ್ ವೆಲ್ಡಿಂಗ್ ಮಾಡೋಕೆ ಕರೆದರೆ ಹೆದರಿ ಹಾವೇರಿಯವರು ಯಾರೂ ವೆಲ್ಡಿಂಗ್ ಕೆಲಸಕ್ಕೆ ಹೋಗಿರಲಿಲ್ಲ.
ಹೀಗಾಗಿ, ಹರಿಹರದಿಂದ ಇಬ್ಬರನ್ನು ಕರೆದುಕೊಂಡು ಬಂದು ವೆಲ್ಡಿಂಗ್ ಮಾಡಿಸುತ್ತಿದ್ದರು. ಆಗ ಒಂದು ಸಣ್ಣ ಕಿಡಿ ತಗುಲಿ ದೊಡ್ಡ ದುರಂತ ಸಂಭವಿಸಿದೆ.
ಪಟಾಕಿ ಗೋದಾಮಿನಲ್ಲಿಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ. ಈ ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ವೆಚ್ಚ ಸರ್ಕಾರ ಭರಿಸಲಿದೆ. ಗೋದಾಮಿನಲ್ಲಿ 500ರಿಂದ 1000 ಕೆಜಿ ಸಂಗ್ರಹ ಮಾಡಲು ಅವಕಾಶವಿದ್ದರೂ, ಇವರು ಹೆಚ್ಚಿನ ದಾಸ್ತಾನು ಮಾಡಿದ್ದರು ಎಂಬ ಮಾಹಿತಿ ಇದೆ. ಇಲ್ಲಿ ಸರಿಯಾದ ಸುರಕ್ಷತಾ ಕ್ರಮಗಳು ಇರಲಿಲ್ಲ. ಲೈಸೆನ್ಸ್ ರಿನಿವಲ್ ಗೆ ಅರ್ಜಿ ಕೊಟ್ಟಿದ್ದಾರೆ. ಜನವಸತಿ ಪ್ರದೇಶದಲ್ಲಿ ಹೇಗೆ ಲೈಸೆನ್ಸ್ ಕೊಟ್ಟರು ಎಂಬುದು ಸೇರಿದಂತೆ ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ತರುತ್ತೇವೆ.
ಶಿವಾನಂದ ಪಾಟೀಲ, ಉಸ್ತುವಾರಿ ಸಚಿವರು
ದುರಂತದಿಂದ ಬೆಚ್ಚಿಬಿದ್ದ ಜನ
ರಾಣಿಬೆನ್ನೂರಿನ ಸ್ಪಾರ್ಕ್ ಕ್ಯಾಂಡಲ್ ಘಟಕದಲ್ಲಿ ನಡೆದ ಅಗ್ನಿ ಅವಘಡ ಮಾಸುವ ಮುನ್ನವೇ ಆಲದಕಟ್ಟಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ರಾಣಿಬೆನ್ನೂರು ಸ್ಪಾರ್ಕ್ ಕ್ಯಾಂಡಲ್ ಘಟಕದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಆಲದಕಟ್ಟಿ ಪಟಾಕಿ ಗೋದಾಮು ದುರಂತದಲ್ಲಿ ನಾಲ್ವರು ಸಜೀವ
ದಹನವಾಗಿದ್ದಾರೆ. ಈ ಘಟನೆ ಪಟಾಕಿ ಅಂಗಡಿಕಾರರ ಸುರಕ್ಷತೆ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ಜತೆಗೆ,
ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆಯೂ ಧ್ವನಿ ಎತ್ತುವಂತೆ ಮಾಡಿದೆ.
ಪರವಾನಗಿ ನೀಡಿದ ಮೇಲೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ಮಾಡುತ್ತಿಲ್ಲ ಎಂಬುದಕ್ಕೆ ಗೋದಾಮು ದುರ್ಘಟನೆ ಸಾಕ್ಷಿಯಾಗಿದೆ.
*ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ
Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ
ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.