Pragyan Rover; ಚಂದಮಾಮನ ಅಂಗಳದಲ್ಲಿ ಮಗುವಿನ ಆಟ..: ಹೊಸ ವಿಡಿಯೋ ರಿಲೀಸ್ ಮಾಡಿದ ಇಸ್ರೋ
Team Udayavani, Aug 31, 2023, 2:20 PM IST
ಹೊಸದಿಲ್ಲಿ: ಮುಂದಿನ ವಾರ ಚಂದ್ರನ ರಾತ್ರಿ (14 ಭೂಮಿಯ ದಿನಗಳು) ಆರಂಭವಾಗುವ ಮೊದಲು ವೈಜ್ಞಾನಿಕ ಪ್ರಯೋಗಗಳ ಸುದೀರ್ಘ ಪಟ್ಟಿಯನ್ನು ಪೂರ್ಣಗೊಳಿಸ ಬೇಕಿರುವ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿರುವ ವಿಡಿಯೋವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಂಚಿಕೊಂಡಿದೆ.
“ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿ ರೋವರ್ ಅನ್ನು ತಿರುಗುತ್ತಿದೆ. ಈ ತಿರುಗುವಿಕೆಯನ್ನು ಲ್ಯಾಂಡರ್ ಇಮೇಜರ್ ಕ್ಯಾಮೆರಾ ಸೆರೆಹಿಡಿದಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
“ಚಂದಮಾಮದ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿದಾಡುತ್ತಿರುವಂತೆ ಭಾಸವಾಗುತ್ತಿದೆ, ತಾಯಿ ಪ್ರೀತಿಯಿಂದ ನೋಡುತ್ತಾಳೆ…” ಎಂದು ಇಸ್ರೋ ಬರೆದುಕೊಂಡಿದೆ.
ದಿನಂದ ಹಿಂದೆ ಪ್ರಜ್ಞಾನ್ ರೋವರ್ ಚಂದ್ರನಿಂದ ಮೊದಲು ಬಾರಿಗೆ ಚಿತ್ರವೊಂದನ್ನು ಕಳುಹಿಸಿತ್ತು. ಮೊದಲ ಬಾರಿಗೆ ಅದರ ನ್ಯಾವಿಗೇಷನ್ ಕ್ಯಾಮೆರಾವನ್ನು ಬಳಸಿ ವಿಕ್ರಮ್ ಲ್ಯಾಂಡರ್ ನ ಚಿತ್ರವನ್ನು ಸೆರೆಹಿಡಿದಿತ್ತು.
Chandrayaan-3 Mission:
The rover was rotated in search of a safe route. The rotation was captured by a Lander Imager Camera.It feels as though a child is playfully frolicking in the yards of Chandamama, while the mother watches affectionately.
Isn’t it?🙂 pic.twitter.com/w5FwFZzDMp— ISRO (@isro) August 31, 2023
ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಇರುವಿಕೆಯನ್ನು ಪ್ರಜ್ಞಾನ್ ರೋವರ್ ಅದಾಗಲೇ ದೃಢಪಡಿಸಿದೆ. ರೋವರ್ ನಲ್ಲಿರುವ ಉಪಕರಣಗಳಲ್ಲಿ ಒಂದಾದ ಲೇಸರ್-ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್ ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ದೃಢಪಡಿಸಿದೆ ಎಂದು ಇಸ್ರೋ ಮಂಗಳವಾರ ತಿಳಿಸಿತ್ತು. ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಸಹ ಪತ್ತೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.