Shri Guru Raya: ಆತ್ಮೋಪಾಸನೆಯ ಸಾಧಕ ಶ್ರೀ ಗುರುರಾಯರು


Team Udayavani, Aug 31, 2023, 11:25 PM IST

GURU RAAYA

ನಮ್ಮ ಪ್ರಾಚೀನ ಋಷಿ-ಮುನಿಗಳಿಗೆ ಒಂದು ವಿಶಿಷ್ಟ ಅಲೌಕಿಕವಾದ ದೃಷ್ಟಿಯಿತ್ತು. ಅವರು ಗೋಚರ ಮತ್ತು ಅಗೋಚರಗಳ ಸಂಬಂಧವನ್ನು ಅನ್ವೇಷಿಸುತ್ತಿದ್ದರು. ಕಣ್ಣಿಗೆ ಕಾಣುವಂತಹ ಜಗತ್ತು, ಪ್ರಾಪಂಚಿಕ ಸುಖ- ಲೋಲುಪತೆಗಳು ಸತ್ಯವೋ? ಅಥವಾ ಅಗೋಚರ ವಾದ ಬ್ರಹ್ಮ-ಬ್ರಹ್ಮರಹಸ್ಯ, ಆತ್ಮ-ಆತ್ಮರಹಸ್ಯ, ಜ್ಞಾನ- ಜ್ಞಾನ ರಹಸ್ಯಗಳ ದ್ರಷ್ಟಾರತೆ ಮಿಗಿಲಾಗಿದುದೊ? ಎಂದು ಸದಾ ಹುಡುಕಾಡುತ್ತಿದ್ದರು. ಯಾವ ಉದ್ದೇಶದಿಂದ ಈ ಜಗತ್ತು ಜನ್ಮ ತಾಳಿದೆ? ಅದರ ಕತೃì ಯಾರು? ನಾವು ಏಕೆ ಇಲ್ಲಿ ಜನಿಸಿದ್ದೇವೆ? ನಾವು ಯಾವ ಉದ್ದೇಶದಿಂದ ಇಲ್ಲಿ ಜೀವಿಸುತ್ತಿದ್ದೇವೆ? ಕೊನೆಗೆ ನಾವು ಎಲ್ಲಿ ತಲುಪುತ್ತೇವೆ? ಇಂತಹ ಜಟಿಲವಾದ ಜಿಜ್ಞಾಸೆಗೆ ತೊಡಗಿ ಅನ್ವೇಷಕರಾಗಿ ತಪಸ್ವಿಗಳಾಗುತ್ತಿದ್ದರು. ಇಂತಹ ಧರ್ಮ-ಕರ್ಮ ಮೀಮಾಂಸಕರ ಅಪೂರ್ವ ಸಾಧನೆಯೇ ನಮಗೆ ಅಧ್ಯಾತ್ಮ ಸ್ವರೂಪದಲ್ಲಿ ದರ್ಶಿಸಲ್ಪಟ್ಟಿದೆ.

ಪ್ರಸ್ತಾನತ್ರಯಗಳೆಂದರೆ ಉಪನಿಷತ್ತುಗಳು, ವೇದಾಂತ ಸೂತ್ರ ಮತ್ತು ಭಗವದ್ಗೀತೆ. ಈಗಾಗಲೇ ಬಿಂಬಿಸಿದಂತೆ ಇವುಗಳು ತಪಸ್ವಿಗಳ, ಧರ್ಮ ಮೀಮಾಂಸಕರ ಕರ್ಮಫ‌ಲ ಸಿದ್ಧಾಂತ ಸ್ವರೂಪ ಗಳಾಗಿವೆ. ಉಪನಿಷತ್ತಿನಲ್ಲಿ ಪ್ರತಿಪಾದಿಸಲ್ಪಟ್ಟ ತತ್ತ್ವ ರಹಸ್ಯ ಗಳು ವೇದಾಂತ ಸೂತ್ರ ಭಗವದ್ಗೀತೆಯಲ್ಲಿ ಸ್ಪಷ್ಟತೆ ಯನ್ನು ಪಡೆದಿದೆ. ಕಠೊಪನಿಷತ್ತಿನಲ್ಲಿ ಯಮನು ನಚಿಕೇತನಿಗೆ “ಆತ್ಮನ ತನು’ವನ್ನು ಕಾಣಲು ಆತ್ಮನನ್ನೇ ಪ್ರಾರ್ಥಿಸು’ ಎಂದಂತೆ ಸತ್ಯ ಜ್ಞಾನ ರಹಸ್ಯಕ್ಕಾಗಿ ಮೊದಲು ಜ್ಞಾನಾನ್ವೇಷಣೆ ಮಾಡಬೇಕಾಗುತ್ತದೆ. ಈ ರೀತಿ “ಆತ್ಮನ ತನು’ ಸ್ವರೂಪವಾದ ಪರಮಾತ್ಮನನ್ನು ಪ್ರಸ್ತಾನತ್ರಯಗಳ ಅಧ್ಯಯನದಿಂದ ಅರಿತುಕೊಂಡು ವಿಭೂತಿ ಪುರುಷ ಮಹಾತ್ಮರಾಗಿ ಆವಿರ್ಭವಿಸಿದವರೇ ಶ್ರೀ ಸದ್ಗುರು ರಾಘವೇಂದ್ರತೀರ್ಥರು.

ಕರ್ಮವು ಜ್ಞಾನಕ್ಕೆ ಸಹವರ್ತಿಯಾಗಿರಬೇಕು

ಉಪಾಸಕನು ತನ್ನ ಜ್ಞಾನಕ್ಕೆ ಸಹಕಾರಿ ಎಂದೆ ನಿಸುವ ಕರ್ಮಗಳನ್ನೇ ಮಾಡಬೇಕು. ಈ ರೀತಿ ಮಾಡು ವುದರಿಂದ ಆತನಿಗೆ ಕರ್ಮದ ಸ್ವಾಭಾವಿಕ ದೋಷಗಳು ತಗಲುವುದಿಲ್ಲ. ಲೋಕೋದ್ಧಾರ ಮತ್ತು ಭಗವತ್‌ ಸೇವೆ ಮಾಡುವ ನಿತ್ಯಕರ್ಮವು ಜ್ಞಾನಕ್ಕೆ ಹೇತುವಾಗಿರಬೇಕು ಎಂಬ ವೇದಾಂತ ಸೂತ್ರವನ್ನು ಶ್ರೀ ಗುರುಗಳು ತನ್ನಲ್ಲಿ ಅಳವಡಿಸಿ ಕೊಂಡು ಶ್ರೀ ಮಧ್ವಮತ ಪ್ರಚಾರಕ ಮತ್ತು ಹರಿ-ವಾಯು ಉಪಾಸಕನಾದರು. ತನ್ಮೂಲಕ ದೇವತ್ವ, ಅಮರತ್ವವನ್ನು ಪಡೆದರು.
ಯಸ್ಮಿನ್‌ ಸರ್ವಾಣಿ ಭೂತಾನ್ಯಾತೆಭೂದ್ವಿಜಾನತಃ
ತತ್ರಕೋ ಮೋಹಃ ಕಶ್ಲೋಕಃ ಏಕತ್ವ ಮನು ಪಶ್ಯತಃ ||

ಅರಿತವನಿಗೆ ಎಲ್ಲ ಪ್ರಾಣಿಗಳೂ ತನ್ನ ಆತ್ಮನೇ ಎಂಬ ರೀತಿಯಲ್ಲಿ ಗೋಚರಿಸುತ್ತವೆ. ಈ ರೀತಿಯಲ್ಲಿ ಸಮಾನ ಭಾವ ಉಂಟಾದಾಗ ಶೋಕ- ಮೋಹ ಗಳಿಗೆ ಅವಕಾ ಶವಾದರೂ ಎಲ್ಲಿ ಎಂಬ ಉಪನಿಷತ್‌ ತತ್ತ್ವವನ್ನು ತನ್ನ ತಪಃಶಕ್ತಿಯ ಮೂಲಕ 18ನೇ ಶತಮಾನದಲ್ಲಿ ಶ್ರೀ ಗುರುರಾಘವೇಂದ್ರ ತೀರ್ಥರು ನಿರೂಪಿಸಿ ಸನಾತನಿ ಗಳನ್ನು ಮೋಹ ಮತ್ತು ಶೋಕದಿಂದ ವಿಮುಕ್ತಿ ಗೊಳಿಸಲು ಯತ್ನಿಸಿದರು.

ಶ್ರೀ ರಾಘವೇಂದ್ರ ಸ್ವಾಮಿಗಳು ಜ್ಞಾನ ಯೋಗಿ ಗಳಾದರೂ ಕರ್ಮಯೋಗದತ್ತಲೇ ಲೌಕಿಕ ಜಗತ್ತನ್ನು ಪ್ರೇರೇಪಿಸುತ್ತಿದ್ದರು. ಕರ್ಮಯೋಗಿಗಳಾದ ತಪಸ್ವಿ ಗಳು ತಮ್ಮ ತಪೋಬಲದಿಂದ ದಿವ್ಯ ದೃಷ್ಟಿ, ದಿವ್ಯವಾಣಿ, ದಿವ್ಯಕೌಶಲ ಈ ಮೂರನ್ನೂ ಸಾಧಿಸುತ್ತಿದ್ದರು. ಯಾವ ರೀತಿ ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಕರ್ಮ ಯೋಗವನ್ನು ಬೋಧಿಸುವ ಮೊದಲು ತನ್ನ ವಿಶ್ವ ರೂಪವನ್ನು ತೋರಿಸಿ ದಿವ್ಯದೃಷ್ಟಿ ನೀಡಿದನೋ ಅದೇ ರೀತಿ ಗುರುಗಳು ಜಿಜ್ಞಾಸು ಭಕ್ತರಿಗೆ ಜ್ಞಾನದ ಅರಿವನ್ನು ಉಂಟು ಮಾಡುತ್ತಿದ್ದರು. ಅದಕ್ಕಾಗಿ ದಿವ್ಯ ದೃಷ್ಟಿಯೆಂಬ ಪವಾಡವನ್ನು ಸೂಚಿಸುತ್ತಿದ್ದರು. ತಮ್ಮ ಅಪೂರ್ವವಾದ ದಿವ್ಯದೃಷ್ಟಿ ಹಾಗೂ ದಿವ್ಯ ವಾಣಿಯಿಂದ ಗುರುಗಳು ಭಕ್ತರನ್ನು ಮೊದಲು ಸದ್ಭಕ್ತರನ್ನಾಗಿಸಿ ಅನಂತರ ಸತ್ಕರ್ಷಿ ಗಳನ್ನಾಗಿಸುತ್ತಿದ್ದರು. ಸನಾತನಿಗಳಲ್ಲಿ ಅತ್ಯಾವಶ್ಯಕವಾಗಿ ಇರಬೇಕಾದ ಅರ್ಹತೆಯೇ ಇದು ಎಂದು ಗುರುಗಳು ಉಪದೇಶಿಸುತ್ತಿದ್ದರು.

ಶ್ರೀ ಗುರುರಾಘವೇಂದ್ರರು ಸೃಷ್ಟಿ- ಉತ್ಪತ್ತಿ ವಿಚಾರ, ಮಾನಸಶಾಸ್ತ್ರ, ಅಧ್ಯಾತ್ಮಶಾಸ್ತ್ರ ಹಾಗೂ ನೀತಿಶಾಸ್ತ್ರ ಈ ನಾಲ್ಕು ವಿಚಾರದಲ್ಲೂ ಅಪೂರ್ವ ನಿಷ್ಣಾತೆಯನ್ನು ಪಡೆದಿದ್ದರು. ಆದುದರಿಂದ ಅವರನ್ನು

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ
ನಾದಬಿಂದು ಕಲಾರೂಪಂ ತಸ್ಮೈ ಶ್ರೀ ಗುರವೇ ನಮಃ||
ಎಂದು ಸರ್ವರೂ ವಂದಿಸುತ್ತಿದ್ದರು.

ಗುರುಗಳು ಸನಾತನಿಗಳ ಪಾವನತೆಗಾಗಿ “ಜಪಿ ತೋನಾಸ್ತಿ ಪಾನಕಃ’ ಎನ್ನುತ್ತಾ ನಾಮಸ್ಮರಣಾ ಪ್ರೇರಕ ರಾದರು. ಶ್ರೀ ಹರಿಯ ಸ್ಮರಣೆ, ರಾಮರಕ್ಷಾ ಸ್ತೋತ್ರ, ಅಷ್ಟಾಕ್ಷರ ಜಪ, ಶ್ರೀ ಗುರು ನಮನಗಳಿಂದ ಬಂಧ ಮುಕ್ತರಾಗಬಹುದು ಎಂದು ಉಪಾಸನೆಗೆ ಪ್ರೇರೇ ಪಿಸಿದರು. ಆತ್ಮ ತತ್ತ್ವದ ಸರಳ ಪ್ರಚಾರಕ್ಕಾಗಿ ದಶೋ ಪನಿಷತ್‌ಗಳಿಗೆ ಭಾಷ್ಯಕರಾದರು. ಮೊದಲು ಜ್ಞಾನಿ ಗಳಾಗಿ, ಜ್ಞಾನದಿಂದ ಕರ್ಮ ಮಾಡಿರಿ. ಕರ್ಮದಿಂದ ದಯಾವಂತರಾಗಿರಿ. ದಯೆಯಿಂದ ದಾನಿಗಳಾಗಿರಿ. ದಾನದಿಂದ ಮುಕ್ತಿ ಪಡೆಯಿರಿ ಎಂದು ಪಂಚಮವೇದ -ಉಪನಿಷತ್‌ ತತ್ಪಾಂ ತರಂಗವನ್ನು ತೆರೆದಿರಿಸಿದರು.
ಶ್ರೀ ಗುರುಗಳು ಅಪರಿಮಿತ ಬ್ರಹ್ಮತೇಜೋ ಬಲ ದಿಂದ ಸಾಂದರ್ಭಿಕ ಪವಾಡಗಳ ಮೂಲಕ ದೇವ ಮಾನವನೆನಿಸಿದರು. ಖ್ಯಾತ ದಾರ್ಶನಿಕ ಪ್ಲೇಟೋ ಒಂದೆಡೆ “ನಿಖರತೆಗೆ ಯಶಸ್ಸಿನ ಸತ್ಯ-ಶಕ್ತಿ ದೊರಕ ಬೇಕಾದರೆ ಆಕರ್ಷಣೆ ಅನಿವಾರ್ಯ’ ಎಂದಿದ್ದಾನೆ. ಈ ಸಿದ್ಧಾಂತವು ರಾಯರ ವಿಚಾರದಲ್ಲಿ ತೀರಾ ಸತ್ಯ ವೆನಿಸಿದೆ. ಅವರು ಅನಿವಾರ್ಯವಾಗಿ ಪವಾಡಪುರುಷರೆಂದೆನಿಸಬೇಕಾಯಿತು. ಆದರೆ ಅವರು ಪವಾಡಗಳನ್ನು ಪ್ರದರ್ಶಿಸಿದುದು ಪ್ರಚಾರಕ್ಕಾಗಿ ಅಲ್ಲ, ಬದಲು ಮಂತ್ರಶಾಸ್ತ್ರ ಹಾಗೂ ದೈವೀಕತೆಗೆ ನಿಲುಕದ್ದು ಯಾವುದೂ ಇಲ್ಲ ಎಂಬ ತತ್ತ್ವವನ್ನು ಸಾರಲು – ಸಾದರಪಡಿಸಲು.

ಪರಮ ಜ್ಞಾನೋಪಾಸಕ ಯತೀಂದ್ರರು
ಸದಾ ಜ್ಞಾನದಾಹಿಗಳಾಗಿದ್ದ ಶ್ರೀ ರಾಘವೇಂದ್ರರು ಚಂದ್ರಿಕಾ ಪ್ರಕಾಶ ತಣ್ತೀ ಪ್ರಕಾಶಿಕಾ, ಭಾವದೀಪ, ತರ್ಕ ತಾಂಡವ, ವ್ಯಾಖ್ಯಾನ/ತಾತ್ಪರ್ಯ ನಿರ್ಣಯ ಭಾವ ಸಂಗ್ರಹ, ಮಂತ್ರಾರ್ಥ ಮಂಜರೀ, ದಶೋಪನಿಷತ್‌ ಖಂಡಾರ್ಥ, ತಂತ್ರದೀಪಿಕಾ, ನ್ಯಾಯ ಮುಕ್ತಾವಲೀ, ಪ್ರಮೇಯದೀಪಿಕಾ ವ್ಯಾಖ್ಯಾ, ಗೀತಾ ತಾತ್ಪರ್ಯ, ಟೀಕಾ ವಿವರಣಂ, ವೇದತ್ರಯ ನಿವೃತ್ತಿ, ಪುರುಷ ಸೂಕ್ತಾದಿ ಪಂಚಸೂಕ್ತ ವ್ಯಾಖ್ಯಾನ, ತತ್ತ್ವ ಮಂಜರಿ, ವಾದಾವಲಿ ವ್ಯಾಖ್ಯಾ, ದಶ ಪ್ರಕರಣ ವ್ಯಾಖ್ಯಾ, ರಾಮಚಾರಿತ್ರ್ಯ ಮಂಜರೀ, ಕೃಷ್ಣ ಚರಿತ್ರ ಮಂಜರೀ, ಪ್ರಮಾಣ ಪದ್ಧತಿ ವ್ಯಾಖ್ಯಾ, ಅಣುಮಧ್ವ ವಿಜಯ ವ್ಯಾಖ್ಯಾ, ಪ್ರಾತಃ ಸಂಕಲ್ಪ ಗಥಃ, ಗೀತಾರ್ಥ ಸಂಗ್ರಹ, ಭಾಟ್ಟಸಂಗ್ರಹ ಹೀಗೆ ಅಪೂರ್ವ ವಿದ್ವತ್‌ ಗ್ರಂಥಗಳ ಸಮೂಹವನ್ನೇ ತತ್ತ್ವ ಸಿದ್ಧಾಂತ ಲೋಕಕ್ಕೆ ಸಮರ್ಪಿ ಸಿದರು. “ಪರಿಮಳ’ ಎಂಬ ವಿಶಿಷ್ಟ ವಿದ್ವತøಭಾ ಗ್ರಂಥವು ಸಾರಸ್ವತ ಲೋಕ ಕಂಡ ಅಪೂರ್ವ ಕೃತಿಯೆಂದೆನಿಸಿದೆ.

ಯಾವುದೇ ಒಂದು ಧರ್ಮ, ಮತದ ಸಿದ್ಧಾಂ ತಗಳು ಬಾಳಿ ಬದುಕುವುದು ಅದರ ಕುರಿತಾದ ಸಾಹಿತ್ಯ ಕೃತಿಗಳಿಂದ. ಸನಾತನ ಸಂಸ್ಕಾರ, ಸಂಸ್ಕೃತಿ, ಆಚಾರ- ವಿಚಾರ ತತ್ತ್ವದರ್ಶಗಳ ಕುರಿತಾಗಿ ಪೂ ರ್ವಜ ಆಚಾರ್ಯ ರುಗಳು ನಿರೂಪಿಸಿದ ಆಕರ ಗ್ರಂಥಗಳೇ ಧರ್ಮದ ಅಚಲತೆಗೆ ಪ್ರಧಾನ ಕಾರಣ ವಾಗಿದೆ. ಧರ್ಮವನ್ನು ನಾಶಗೊಳಿಸುವ ಉದ್ದೇ ಶದಿಂದ ವೇದಗಳನ್ನು ಸುಟ್ಟು ಬಿಡುವ ಯತ್ನಗಳೇ ನಡೆದಿತ್ತು! ಅಂತಹ ದುರು ದ್ದೇಶಗಳು ಇಂದಿನವರೆಗೂ ಕೇವಲ ಪ್ರಯತ್ನ ಗಳಾಗಿಯೇ ಉಳಿದಿವೆ. ಅದರ ಮೂಲ ಕಾರಣ ಶ್ರೀ ಗುರು ರಾಘ ವೇಂದ್ರ ಯತೀಂ ದ್ರರಂತಹ ದೇವ ಸ್ವರೂಪಿಗಳ ಅಪಾರ ಮಹಿಮೆಗಳು ಎಂದರೆ ಅತಿಶಯೋಕ್ತಿ ಎನಿಸಲಾರದೇನೋ?

ಶ್ರೀ ಸದ್ಗುರು ರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನೋತ್ಸವದ ಈ ಸಂದರ್ಭದಲ್ಲಿ ರಾಯರ ಅನುಗ್ರಹ ಸರ್ವರಿಗೂ ಲಭಿಸಲಿ ಎಂದು ಸಂಪ್ರಾರ್ಥನೆ.
ಮೋಹನದಾಸ ಸುರತ್ಕಲ್‌

 

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.