I.N.D.I.A.;14 ಸದಸ್ಯರ ಸಮನ್ವಯ ಸಮಿತಿ: 3 ಮಹತ್ವದ ನಿರ್ಣಯಗಳ ಅಂಗೀಕಾರ
ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ನಿರ್ಧರಿಸಿದ್ದೇವೆ...
Team Udayavani, Sep 1, 2023, 4:17 PM IST
ಮುಂಬಯಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಭಾರಿ ರಣತಂತ್ರ ಹಣಿಯಲು ಸಜ್ಜಾಗಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಗುರುವಾರ ಮತ್ತು ಶುಕ್ರವಾರ ನಡೆದ ಮಹತ್ವದ ಸಭೆಯಲ್ಲಿ 14 ಸದಸ್ಯರ ಸಮನ್ವಯ ಸಮಿತಿ ರಚಿಸಿದ್ದು, ಮೂರು ಮಹತ್ವದ ನಿರ್ಣಯಗಳನ್ನು ಅಂಗೀಕಾರ ಮಾಡಲಾಗಿದೆ.
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಮಾತನಾಡಿ “ಇಂದು, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮೂರು ನಿರ್ಣಯಗಳನ್ನು ಅಂಗೀಕರಿಸಿವೆ. 1.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯನ್ನು ಪ್ರಾರಂಭಿಸಲಾಗುವುದು. ಕೊಡು,ಕೊಳ್ಳುವಿಕೆ ಎಂಬ ಸಹಕಾರಿ ಮನೋಭಾವದಲ್ಲಿ ತತ್ ಕ್ಷಣವೇ ಮತ್ತು ಬೇಗನೆ ತೀರ್ಮಾನಿಸಿದ್ದೇವೆ. 2. ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಶೀಘ್ರವಾಗಿ ಸಾರ್ವಜನಿಕ ರ‍್ಯಾಲಿಗಳನ್ನು ಆಯೋಜಿಸಲು ಪಕ್ಷಗಳು ಈ ಮೂಲಕ ನಿರ್ಧರಿಸುತ್ತೇವೆ. 3. ವಿವಿಧ ಭಾಷೆಗಳಲ್ಲಿ ‘ಜುಡೇಗಾ ಭಾರತ್, ಜೀತೇಗಾ ಭಾರತ್ ‘ ಎಂಬ ವಿಷಯದ ಕುರಿತು ನಮ್ಮ ಸಂಬಂಧಿತ ಸಂವಹನಗಳು ಮತ್ತು ಮಾಧ್ಯಮ ಕಾರ್ಯತಂತ್ರಗಳು ಮತ್ತು ಅಭಿಯಾನಗಳನ್ನು ಸಂಯೋಜಿಸಲು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.
14 ಸದಸ್ಯರ ಸಮನ್ವಯ ಸಮಿತಿ ರಚನೆ
ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು 14 ಸದಸ್ಯರ ಸಮನ್ವಯ ಸಮಿತಿಯ ಸದಸ್ಯರ ಹೆಸರನ್ನು ಪ್ರಕಟಿಸಿದರು. ಕೆಸಿ ವೇಣುಗೋಪಾಲ್ (ಕಾಂಗ್ರೆಸ್), ಶರದ್ ಪವಾರ್ (ಎನ್‌ಸಿಪಿ), ಟಿಆರ್ ಬಾಲು (ಡಿಎಂಕೆ), ಹೇಮಂತ್ ಸೊರೆನ್ (ಜೆಎಂಎಂ), ಸಂಜಯ್ ರಾವುತ್ (ಶಿವಸೇನಾ-ಯುಬಿಟಿ) , ತೇಜಸ್ವಿ ಯಾದವ್ (ಆರ್‌ಜೆಡಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ರಾಘವ್ ಚಡ್ಡಾ (ಎಎಪಿ), ಜಾವೇದ್ ಅಲಿ ಖಾನ್ (ಎಸ್‌ಪಿ), ಲಲನ್ ಸಿಂಗ್ (ಜೆಡಿಯು), ಡಿ ರಾಜಾ (ಸಿಪಿಐ), ಒಮರ್ ಅಬ್ದುಲ್ಲಾ (ಎನ್‌ಸಿ), ಮೆಹಬೂಬಾ ಮುಫ್ತಿ (ಪಿಡಿಪಿ) ಮತ್ತು ಸಿಪಿಐ(ಎಂ)ನಿಂದ ಮತ್ತೊಬ್ಬ ಸದಸ್ಯರನ್ನು ಘೋಷಿಸಲಾಗುತ್ತದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಎಲ್ಲ ಪಕ್ಷಗಳು ಈ ಸಭೆಯನ್ನು ಉತ್ತಮವಾಗಿ ನಡೆಸಿವೆ. ಈ ಹಿಂದೆ ನನ್ನ ನಿವಾಸದಲ್ಲಿ ಮಾತುಕತೆಯ ಸಮಯದಲ್ಲಿ ಮೈತ್ರಿ ಕೂಟವನ್ನು ರಚಿಸಲಾಯಿತು, ಪಾಟ್ನಾ ಸಭೆಯಲ್ಲಿ ಅಜೆಂಡಾವನ್ನು ನಿಗದಿಪಡಿಸಲಾಯಿತು ಮತ್ತು ಈಗ ಮುಂಬೈನಲ್ಲಿ, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಪರಸ್ಪರರ ಮುಂದೆ ಹಂಚಿಕೊಂಡಿದ್ದಾರೆ ಎಂದರು.
”ಪ್ರತಿಯೊಬ್ಬರಿಗೂ ಒಂದೇ ಗುರಿ ಇದ್ದು, ದೇಶದಲ್ಲಿ ನಿರುದ್ಯೋಗ, ಏರುತ್ತಿರುವ ಇಂಧನ ಬೆಲೆಗಳು ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳ ವಿರುದ್ಧ ಹೋರಾಡಲು ಬಿಜೆಪಿ ಮೊದಲು ಬೆಲೆಗಳನ್ನು ಹೆಚ್ಚಿಸಿದರು ಬಳಿಕ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದರು. ಮೋದಿ ಎಂದಿಗೂ ಬಡವರಿಗಾಗಿ ಕೆಲಸ ಮಾಡುವುದಿಲ್ಲ ಎಂದು ನಾನು ಹೇಳಬಲ್ಲೆ, ನಿನ್ನೆರಾಹುಲ್ ಗಾಂಧಿ ಅವರು ಅದಾನಿ ಆದಾಯ ಹೆಚ್ಚಾಗಿರುವ ಕುರಿತು ವರದಿಯನ್ನು ತೋರಿಸಿದರು” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.