Chandrayaan-3: ಚಂದ್ರನ ಕುಳಿ ತಪ್ಪಿಸಲು ಮಾರ್ಗ ಹುಡುಕಾಟ

ಅದರ ದೃಶ್ಯವು ಲ್ಯಾಂಡರ್‌ ನಲ್ಲಿನ ನ್ಯಾವಿಗೇಶನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ

Team Udayavani, Sep 1, 2023, 2:32 PM IST

Chandrayaan-3: ಚಂದ್ರನ ಕುಳಿ ತಪ್ಪಿಸಲು ಮಾರ್ಗ ಹುಡುಕಾಟ

ಬೆಂಗಳೂರು: ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ನಲ್ಲಿರುವ ಐಎಲ್‌ಎಸ್‌ಎ ಪ್ರಜ್ಞಾನ್‌ ರೋವರ್‌ ಮತ್ತು ಇತರೆ ಪೇಲೋಡ್‌ಗಳ ಚಲನವಲನಗಳನ್ನು ದಾಖಲಿಸುತ್ತಿದೆ ಎಂದು ಇಸ್ರೋ ಗುರುವಾರ ತಿಳಿಸಿದೆ.

“ಪ್ರಾಕೃತಿಕ ಕಂಪನಗಳು, ಕೃತಕ ಘಟನೆಗಳು ಹಾಗೂ ಪರಿಣಾಮಗಳನ್ನು ಅಳೆಯುವುದು ಇನ್ಸ್‌ ಸ್ಟ್ರೆ ಮೆಂಟ್‌ ಫಾರ್‌ ದಿ ಲೂನಾರ್‌ ಸಿಸ್ಮಿಕ್‌ ಆ್ಯಕ್ಟಿವಿಟಿ(ಐಎಲ್‌ಎಸ್‌ಎ)ನ ಪ್ರಾಥಮಿಕ ಉದ್ದೇಶವಾಗಿದೆ. ಆ.25ರಂದು ರೋವರ್‌ನ ಚಲನವನಗಳನ್ನು ಐಎಲ್‌ಎಸ್‌ಎ ದಾಖಲಿತು. ಇದೇ ರೀತಿ ಆ.26ರಂದು ಕೂಡ ಚಲನವನಗಳನ್ನು ದಾಖಲಿಸಿದೆ. ಚಲನವಲನಗಳು ಸಹಜವಾಗಿ ಕಂಡುಬಂದಿದೆ. ಐಎಲ್‌ಎಸ್‌ಎ ತನ್ನ ಕಾರ್ಯವನ್ನು ಮುಂದುವರಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಪಥ ಬದಲಾವಣೆ ವಿಡಿಯೋ: ಬೆಂಗಳೂರಿನಲ್ಲಿರುವ ಇಸ್ರೋ ಕಮಾಂಡ್‌ ಸೆಂಟರ್‌ನಿಂದ ಪ್ರಜ್ಞಾನ್‌ ರೋವರ್‌ಗೆ ಕಮಾಂಡ್‌ಗಳನ್ನು ನೀಡಲಾ ಗುತ್ತಿದೆ. ಮುಂದಿನ ವಾರ ಅಂದರೆ ಚಂದ್ರನಲ್ಲಿ ರಾತ್ರಿಯಾಗುವ ಮುನ್ನ ಅಧ್ಯಯನವನ್ನು ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚಂದ್ರನ ಮೇಲ್ಮೈನಲ್ಲಿರುವ ಅನೇಕ ಕುಳಿ, ದೊಡ್ಡ ಕಲ್ಲುಗಳನ್ನು ತಪ್ಪಿಸಲು ಬೇರೆ
ಮಾರ್ಗವನ್ನು ಹುಡುಕಲಾಗುತ್ತಿದೆ. ಅದಕ್ಕಾಗಿ ರೋವರ್‌ ಅನ್ನು ಸುರಕ್ಷಿತ ಮಾರ್ಗಕ್ಕೆ ತಿರುಗಿಸಲಾಗಿದೆ. ಅದರ ದೃಶ್ಯವು ಲ್ಯಾಂಡರ್‌ ನಲ್ಲಿನ ನ್ಯಾವಿಗೇಶನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಇಸ್ರೋ ತಿಳಿಸಿದೆ.

ಬೆಂಗಳೂರಿನಲ್ಲಿರುವ ಎಲೆಕ್ಟ್ರೊ-ಆಪ್ಟಿಕ್ಸ್‌ ಸಿಸ್ಟಮ್ಸ್‌ ಐಎಲ್‌ಎಸ್‌ಎ ಅನ್ನು ಅಭಿವೃದ್ಧಿಪಡಿಸಿದೆ. ಹೆಚ್ಚಿನ ಸಂವೇದನೆಯ 6 ವೇಗವರ್ಧಕಗಳನ್ನು ಐಎಲ್‌ಎಸ್‌ಎ ಹೊಂದಿದೆ. ಇದನ್ನು ಸಿಲಿಕಾನ್‌ ಮೈಕ್ರೋಮ್ಯಾಚಿನಿಂಗ್‌ ಪ್ರಕ್ರಿಯೆಯನ್ನು ಬಳಸಿಕೊಂಡು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಗಂಧಕವನ್ನೂ ಮತ್ತೊಮ್ಮೆ ದೃಢಪಡಿಸಿದ ಎಪಿಎಕ್ಸ್‌ಎಸ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಹಾಗೂ ಇತರೆ ಅಂಶಗಳು ಇರುವುದನ್ನು ಈಗಾಗಲೇ ಪ್ರಜ್ಞಾನ್‌ ರೋವರ್‌ನಲ್ಲಿರುವ ಎಲ್‌ ಐಬಿಎಸ್‌ ಪೇಲೋಡ್‌ ಪತ್ತೆ ಮಾಡಿದೆ. ಅದನ್ನು ಅದೇ ರೋವರ್‌ನಲ್ಲಿರುವ ಮತ್ತೊಂದು ಪೇಲೋಡ್‌ ಎಪಿಎಕ್ಸ್‌ಎಸ್‌ ಕೂಡ ಖಚಿತಪಡಿಸಿದೆ. ಆರಂಭದಲ್ಲಿ ಎಲ್‌ಐಬಿಎಸ್‌ ಗಂಧಕ, ಅಲ್ಯುಮಿನಿಯಂ, ಕ್ಯಾಲಿÒಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್‌, ಸಿಲಿಕಾನ್‌ ಧಾತುಗಳನ್ನು ಪತ್ತೆ ಮಾಡಿತ್ತು. ಈ ಎಲ್‌ಐಬಿಎಸ್‌ ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ- ಆಪ್ಟಿಕ್ಸ್‌ ಸಿಸ್ಟಮ್‌ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.

ಚಂದಮಾಮನ ಮೇಲೆ ಪುಟ್ಟ ಮಗು ಆಟ ಈ ದೃಶ್ಯವು(ವಿಕ್ರಮ್‌-ಪ್ರಜ್ಞಾನ್‌ ಚಿತ್ರ) ಪುಟ್ಟ ಮಗುವೊಂದು(ರೋವರ್‌) ಚಂದಮಾಮನ ಮೇಲೆ ಕುಣಿಯುತ್ತ ಆಟವಾಡುತ್ತಿದ್ದು, ಅಮ್ಮ(ಲ್ಯಾಂಡರ್‌) ಅದನ್ನು ಪ್ರೀತಿಯಿಂದ ನೋಡುವಂತಿದೆ ಎಂದು ಇಸ್ರೋ ಈ ದೃಶಕ್ಕೆ ಕ್ಯಾಪ್ಷನ್‌ ಕೊಟ್ಟಿದೆ.

ಇಸ್ರೋ ಅಧ್ಯಕ್ಷರಿಗೆ ಸ್ವಾಗತ ಇಂಡಿಗೋ ವಿಮಾನದ ಗಗನಸಖಿಯರು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರಿಗೆ ಆತ್ಮೀಯ ಸ್ವಾಗತ ನೀಡಿದ್ದಾರೆ. ಈ ಕುರಿತು ವಿಡಿಯೊ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಗಗನಸಖಿ ಪೂಜಾ ಶಾ ಹಂಚಿಕೊಂಡಿದ್ದಾರೆ. ಸೋಮನಾಥ್‌ ಅವರು ವಿಮಾನ ಪ್ರವೇಶಿಸುತ್ತಿದ್ದಂತೆ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಗಗನಸಖಿಯರು, ಅವರನ್ನು ಆಸನದಲ್ಲಿ ಕೂರಿಸಿದ್ದಾರೆ. ನಂತರ, “ನಮ್ಮ ರಾಷ್ಟ್ರೀಯ ಹೀರೊಗೆ ಭವ್ಯ ಸ್ವಾಗತ. ಅವರನ್ನು ಕರತಾಡನದ ಮೂಲಕ ಎಲ್ಲರೂ
ಸ್ವಾಗತಿಸೋಣ. ಇಂದು ನಮ್ಮೊಂದಿಗೆ ನೀವು ಪ್ರಯಾಣಿಸುತ್ತಿರುವುದೇ ಹೆಮ್ಮೆಯ ಸಂಗತಿ. ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿಸಿದ್ದಕ್ಕೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು’ ಎಂದು ಗಗನಸಖಿ ಹೇಳಿದ್ದಾರೆ.

ಟಾಪ್ ನ್ಯೂಸ್

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.