![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 2, 2023, 11:36 AM IST
ದಾಂಡೇಲಿ : ನಗರದ ಕೆ.ಸಿ.ವೃತ್ತದ ಬಳಿಯಿರುವ ಹಳಿಯಾಳ ರಸ್ತೆಯ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ಹಾಗೂ ಅಳ್ನಾವರಕ್ಕೆ ಕುಡಿಯುವ ನೀರು ಪೊರೈಕೆಯ ಪೈಪ್ ಲೈನಿಗಾಗಿ ಅಗೆದು ಮುಚ್ಚಿರುವ ಹೊಂಡದಲ್ಲಿ ಟ್ರಕ್ ವೊಂದು ಹೂತು ಹೋಗಿ ಟ್ರಕ್ ನ ಒಂದು ಬದಿ ಸಂಪೂರ್ಣ ಜಖಂಗೊಂಡ ಘಟನೆ ಸೆ.1ರಶುಕ್ರವಾರ ನಡೆದಿದೆ.
ಇಲ್ಲಿ ರಸ್ತೆಯ ಬದಿಯಲ್ಲಿ ಕೇಬಲ್ ಅಳವಡಿಕೆಗಾಗಿ ಹಾಗೂ ಅಳ್ನಾವರಕ್ಕೆ ಕುಡಿಯುವ ನೀರು ಪೊರೈಕೆಯ ಪೈಪ್ ಲೈನ್ ಅಳವಡಿಕೆಗಾಗಿ ಹೊಂಡವನ್ನು ಅಗೆದು ಆನಂತರ ಮುಚ್ಚಲಾಗಿತ್ತು.
ಇದೇ ರಸ್ತೆಯಲ್ಲಿ ಕಾಗದ ಕಾರ್ಖಾನೆಗೆ ಕಚ್ಚಾವಸ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರಕ್ ವೊಂದು ಎದುರಿನಿಂದ ಬಂದ ವಾಹನಕ್ಕೆ ದಾರಿ ಮಾಡಿಕೊಡುವ ಸಲುವಾಗಿ ರಸ್ತೆ ಬದಿಗೆ ಹೋಗಿದೆ. ಈ ಸಮಯದಲ್ಲಿ ಅಗೆದು ಮುಚ್ಚಲಾದ ಹೊಂಡದಲ್ಲಿ ಟ್ರಕ್ ನ ಚಕ್ರಗಳು ಹೂತೋಗಿದೆ. ಈ ಪರಿಣಾಮ ಟ್ರಕ್ ನ ಒಂದು ಬದಿ ಜಖಂಗೊಂಡಿದೆ.
ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಟ್ರಕ್ ಇನ್ನೂ ಸ್ಥಳದಲ್ಲೇ ಇದ್ದು ಸುಗಮ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.