Poor work: ನಗರೋತ್ಥಾನ ಕಾಮಗಾರಿ ಕಳಪೆ ಆರೋಪ: ದೂರು ಸಲ್ಲಿಕೆ

Team Udayavani, Sep 2, 2023, 3:41 PM IST

Poor work: ನಗರೋತ್ಥಾನ ಕಾಮಗಾರಿ ಕಳಪೆ ಆರೋಪ: ದೂರು ಸಲ್ಲಿಕೆ

ಯಳಂದೂರು: ಪಪಂನಿಂದ ನಗರೋತ್ಥಾನ ಯೋಜನೆ ಯಡಿ ನಡೆಯುತ್ತಿರುವ ಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಲೋಕಾಯುಕ್ತ, ಪೌರಾಡಳಿತ ನಿರ್ದೇಶನಾಲಯ, ಯೋಜನಾ ನಿರ್ದೇ ಶಕರು, ಪಪಂ ಮುಖ್ಯಾಧಿಕಾರಿಗೆ ಗೌತಮ್‌ ಬಡಾವಣೆಯ ನಿವಾಸಿ ವಿನೋದ್‌ಕುಮಾರ್‌ ದೂರು ಸಲ್ಲಿಸಿದ್ದಾರೆ.

ಪಟ್ಟಣದಿಂದ ಹಾದು ಹೋಗಿರುವ ಈ ಹಿಂದೆ ಯರಿಯೂರು ಕಾಲುವೆ ಎಂದು ಕರೆಯುತ್ತಿದ್ದ ಪ್ರಸ್ತುತ ದೊಡ್ಡ ಚರಂಡಿ ದುರಸ್ತಿಗೆ ನಗರೋತ್ಥಾನ ಯೋಜನೆಯಡಿ 1.23 ಕೋಟಿ ರೂ.ನಲ್ಲಿ ವಿವಿಧ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ನೆರವೇರಿಸಲು ಕಳೆದ ಜನವರಿ ತಿಂಗಳಲ್ಲಿ ಅಂದಿನ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದ್ದರು. ಇದರಲ್ಲಿ ಈ ಚರಂಡಿಯ ದುರಸ್ತಿಯೂ ಸೇರಿತ್ತು. ಈ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಸಂಬಂಧಪಟ್ಟ ಗುತ್ತಿಗೆದಾರ, ಎಂಜಿನಿಯರ್‌ ಸ್ಥಳದಲ್ಲಿ ಇರುವುದಿಲ್ಲ. ಸಿಮೆಂಟ್‌, ಕಬ್ಬಿಣ ಹಾಗೂ ಎಂ.ಸ್ಯಾಂಡ್‌ ಗುಣಮಟ್ಟದಿಂದ ಕೂಡಿಲ್ಲ. ಅಲ್ಲದೆ, ಇದನ್ನು ಕಡಿಮೆ ಪ್ರಮಾಣದಲ್ಲಿ ಇದರ ಬಳಕೆ ಮಾಡಲಾಗಿದೆ. ಇದರ ಬಳಕೆ ಬಗ್ಗೆ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೆ, ಕೆಲವೆಡೆ ಈಗ ಹಾಕಲಾಗಿರುವ ಕಾಂಕ್ರೀಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕೆಲವೆಡೆ ಡೆಕ್‌ ನಿರ್ಮಾಣ ಮಾಡಲಾಗಿದ್ದು, ಅದೂ ಸರಿಯಾಗಿ ಆಗಿಲ್ಲ. ಹಳೆ ಚರಂಡಿ ಕೆಲವೆಡೆ ಗೋಡೆಗಳನ್ನು ತೆರವುಗೊಳಿಸದೆ ಅದರ ಮೇಲೆ ಹೊಸ ಗೋಡೆ ನಿರ್ಮಿಸಲಾಗಿದೆ. ಪಪಂಗೆ ಬಂದಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂಬುದು ಮಹೇಶ್‌, ಮನು ದೂರಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ, ಎಂಜಿನಿಯರ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂಬುದು ದೂರುದಾರ ವಿನೋದ್‌ ಕುಮಾರ್‌ ಮಾಹಿತಿ ನೀಡಿದರು.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಬಗ್ಗೆ ತಾಂತ್ರಿಕ ವಿಭಾಗ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಗುಣಮಟ್ಟ ಪರೀಕ್ಷೆಯನ್ನು ನಡೆಸಿದ ಮೇಲೆ, ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ನಡೆದಿದೆಯೇ ಎಂದು ಪರಿಶೀಲಿಸಿ ನಂತರ ಬಿಲ್‌ ಪಾವತಿಸಲಾಗುವುದು. ●ರವಿಕೀರ್ತಿ, ಮುಖ್ಯಾಧಿಕಾರಿ, ಪಪಂ, ಯಳಂದೂರು.

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Bandipur ಬೇಟೆಗೆ ಬಂದ ಹುಲಿಗೆ ಝಾಡಿಸಿ ಒದ್ದ ಕಾಡೆಮ್ಮೆ!

Bandipur ಬೇಟೆಗೆ ಬಂದ ಹುಲಿಗೆ ಝಾಡಿಸಿ ಒದ್ದ ಕಾಡೆಮ್ಮೆ!

Gundlupete: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ

Gundlupete: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ

Gundlupete: ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ಸಾಗಣೆ… ಇಬ್ಬರ ಬಂಧನ

Gundlupete: ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ಸಾಗಣೆ… ಇಬ್ಬರ ಬಂಧನ

Kollegala ಅಕ್ರಮ ಮದ್ಯ ಮಾರಾಟಕ್ಕೆ ಸಾಥ್‌: ಪೇದೆಗಳಿಬ್ಬರ ಅಮಾನತು

Kollegala ಅಕ್ರಮ ಮದ್ಯ ಮಾರಾಟಕ್ಕೆ ಸಾಥ್‌: ಪೇದೆಗಳಿಬ್ಬರ ಅಮಾನತು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.