Pincodes: 9 ಪಿನ್‌ಕೋಡ್‌ ಇರುವ ಏಕೈಕ ತಾಲೂಕು ಕೆಜಿಎಫ್‌

Team Udayavani, Sep 2, 2023, 4:03 PM IST

tdy-17

ಕೆಜಿಎಫ್‌: ಇಡೀ ದೇಶಕ್ಕೆ ಟನ್‌ಗಟ್ಟಲೆ ಚಿನ್ನವನ್ನು ನೀಡುವ ಮೂಲಕ ವಿಶ್ವ ಭೂಪಟದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿರುವ ಕೆಜಿಎಫ್‌ 9 ಪಿನ್‌ ಕೋಡ್‌ ಪ್ರದೇಶಗಳನ್ನು ಹೊಂದುವ ಮೂಲಕ ತನ್ನ ವಿಶೇಷತೆ ಕಾಯ್ದುಕೊಂಡಿದೆ.

ಸಾಮಾನ್ಯವಾಗಿ ಒಂದು ಜಿಲ್ಲೆ ಅಥವಾ ತಾಲೂಕು ಕೇಂದ್ರ ಸ್ಥಾನಕ್ಕೆ ಒಂದು ಇಲ್ಲವೇ ಎರಡು ಪಿನ್‌ಕೋಡ್‌ ಸಂಖ್ಯೆಗಳು ಇರುತ್ತವೆ. ಆದರೆ, ಕೆಜಿಎಫ್‌ ಯಾವುದೇ ತಾಲೂಕು ಕೇಂದ್ರ ಸ್ಥಾನ ಅಥವಾ ಜಿಲ್ಲಾ ಕೇಂದ್ರಸ್ಥಾನದ ಮಾನ್ಯತೆ ಪಡೆಯುವ ಮುನ್ನವೇ ದಶಕಗಳ ಹಿಂದೆಯೇ 9 ಭಾಗಗಳಿಗೆ ಪ್ರತ್ಯೇಕವಾಗಿ ಪಿನ್‌ಕೋಡ್‌ಗಳನ್ನು ಹೊಂದಿತ್ತು. ಇಡೀ ದೇಶಕ್ಕೆಲ್ಲಾ ಅನ್ವಯಿಸುವ ಹಾಗೆ 9 ಪಿನ್‌ ಕೋಡ್‌ ವಲಯಗಳಿದ್ದರೆ, ಕೆಜಿಎಫ್‌ನಲ್ಲಿ ಮಾತ್ರ 9 ಪಿನ್‌ಕೋಡ್‌ ಇರುವುದು ವಿಶೇಷವಾಗಿದೆ.

ಒಂಭತ್ತು ಪಿನ್‌ಕೋಡ್‌ ಸಂಖ್ಯೆ: 563113 ಆಂಡರ್‌ಸನ್‌ಪೇಟೆ, 563115 ಬೆಮೆಲ್‌ ನಗರ/ ಭಾರತ್‌ ನಗರ, 563116 ಬೇತಮಂಗಲ, 563117 ಚಾಂಪಿ ಯನ್‌ ರೀಫ್ಸ್, 563118 ಕೋರಮಂಡಲ್‌, 563119 ಮಾರಿಕುಪ್ಪಂ, 563120 ದೊಡ್ಡಚಿನ್ನಹಳ್ಳಿ/ ಭೈರಗಾನ 63121 ಉರಿಗಾಂಪೇಟೆ, 563122 ರಾಬರ್ಟ್‌ಸನ್‌ಪೇಟೆ ಸೇರಿದಂತೆ ಒಟ್ಟು 9 ಪಿನ್‌ ಕೋಡ್‌ ಸಂಖ್ಯೆಗಳನ್ನು ಹೊಂದಿರುವಂತಹ ಏಕೈಕ ನಗರ ಕೆಜಿಎಫ್‌ ಎಂದರೆ ತಪ್ಪಾಗಲಾರದು.

ಪತ್ರಗಳ ವಿಂಗಡಣೆ: ಪಿನ್‌ಕೋಡ್‌ ವ್ಯವಸ್ಥೆ ಜಾರಿಗೆ ಬರುವ ಮೊದಲು ವಿವಿಧ ಭಾಷೆಗಳ ಪತ್ರಗಳು, ಒಂದೇ ಹೆಸರಿನ ತಾಲೂಕು, ಗ್ರಾಮಗಳಿಂದ ಪತ್ರ ಗಳನ್ನು ವಿಂಗಡಿಸುವುದು ಅಂಚೆ ಇಲಾಖೆಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದರಿಂದ ಪತ್ರಗಳನ್ನು ವಿಂಗಡಿಸಲು ಸರಳವಾದ ಒಂದು ಪ್ರಕ್ರಿಯೆ ಅಗತ್ಯವಾಗಿದ್ದು, ಇದಕ್ಕೆ ಪರ್ಯಾಯವಾಗಿ ಬಂದಿದ್ದೇ 6 ಸಂಖ್ಯೆಗಳುಳ್ಳ ಪಿನ್‌ಕೋಡ್‌.

ವಲಯಗಳ ಗುರುತಿಸಲು ಸುಲಭ: ದೇಶದಲ್ಲಿ 8 ಪ್ರಾದೇಶಿಕ ವಲಯ ಮತ್ತು ಭಾರತೀಯ ಸೇನೆಗಾಗಿ ಒಂದು ಸಕ್ರಿಯ ವಲಯ ಸೇರಿ 9 ಪಿನ್‌ ಕೋಡ್‌ ವಲಯಗಳಿವೆ. ಪಿನ್‌ಕೋಡ್‌ನ‌ ಮೊದಲ ಅಂಕೆಯು ವಲಯವನ್ನೂ, ಎರಡನೇ ಅಂಕೆಯು ಉಪ ವಲಯವನ್ನೂ, ಮೂರನೇ ಅಂಕೆಯು ಅಂಚೆ ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸಿದರೆ, ಕೊನೆಯ ಮೂರು ಅಂಕೆಗಳ ಗುಂಪು ಅಂಚೆ ಕಚೇರಿಯನ್ನು ಸೂಚಿಸುತ್ತದೆ.

9 ಪಿನ್‌ಕೋಡ್‌ ವಲಯ ಸಿಕ್ಕಿದ್ದು ಏಕೆ?: ಕೆಜಿಎಫ್ 2018ರಲ್ಲಿ ಅ ಧಿಕೃತವಾಗಿ ತಾಲೂಕು ಮಾನ್ಯತೆ ಪಡೆದುಕೊಂಡಿತು. ಆದರೂ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಅವಧಿ ಯಲ್ಲೇ ಕೆಜಿಎಫ್‌ನ್ನು ಭೌಗೋಳಿಕವಾಗಿ 9 ಭಾಗಗಳನ್ನಾಗಿ ವಿಭಜಿಸಿ ಆಯಾ ಪ್ರದೇಶಗಳಿಗೆ ಪ್ರತ್ಯೇಕವಾಗಿ 9 ಪಿನ್‌ಕೋಡ್‌ ಸಂಖ್ಯೆಗಳನ್ನು ಜಾರಿಗೊಳಿಸಲಾಗಿತ್ತು. ಪತ್ರ ವ್ಯವಹಾರ ಸುಲಭ ವಾಗಿ ನಡೆಸಲು ಪಿನ್‌ಕೋಡ್‌ ಸಂಖ್ಯೆಗಳ ಪ್ರಮಾಣ ವನ್ನು ಹೆಚ್ಚಿಸಲಾಗಿರುತ್ತದೆ. ಆದರೆ, 5 ವರ್ಷಗಳ ಹಿಂದಿನವರೆಗೆ ಯಾವುದೇ ತಾಲೂಕು ಅಥವಾ ಜಿಲ್ಲಾ ಕೇಂದ್ರಸ್ಥಾನದ ಮಾನ್ಯತೆ ಪಡೆದುಕೊಳ್ಳದೇ ಇದ್ದರೂ, ತಾಲೂಕಾದ್ಯಂತ ಕೇವಲ 232 ಮತಗಟ್ಟೆಗಳನ್ನು ಹೊಂದಿದೆ. ಸುಮಾರು ಎರಡೂವರೇ ಲಕ್ಷ ಜನಸಂಖ್ಯೆ ಯನ್ನು ಹೊಂದಿದ್ದರೂ, ಒಟ್ಟು 9 ಪಿನ್‌ಕೋಡ್‌ ಸಂಖ್ಯೆ ಒಳಗೊಂಡಿರುವುದು ವಿಶೇಷವೆಂದೇ ಹೇಳಲಾಗಿದೆ.

ಚಿನ್ನದ ಗಣಿಗಾರಿಕೆ ನಡೆಯುವ ಅವಧಿಯಲ್ಲೇ ಬ್ರಿಟಿಷರು ಕೆಜಿಎಫ್ನಲ್ಲಿ ಪಿನ್‌ಕೋಡ್‌ ವ್ಯವಸ್ಥೆ ಜಾರಿಗೆ ತಂದಿದ್ದು, ಜನರು ಮತ್ತು ಕಂಪನಿಯು ಕಳುಹಿಸುತ್ತಿದ್ದ ಸಂದೇಶಗಳು, ನೋಟಿಸ್‌ ಮತ್ತು ಕಾಗದ ಪತ್ರಗಳು ನಿರ್ದಿಷ್ಟ ಸಮಯಕ್ಕೆ ನಿಖರ ವಾಗಿ ತಲುಪಲು ಪಿನ್‌ಕೋಡ್‌ ವ್ಯವಸ್ಥೆಯಿಂದ ಸಾಧ್ಯವಾಗಿದೆ.-ವೆಂಕಟರಾಮಪ್ಪ, ನಾಗರಿಕ, ಕ್ಯಾಸಂಬಳ್ಳಿ

-ನಾಗೇಂದ್ರ ಕೆ.

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.