Crime ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Sep 2, 2023, 8:29 PM IST
ಮದ್ಯ ಸಹಿತ ಬಂಧನ, ಕಾರು ವಶಕ್ಕೆ
ಮಂಜೇಶ್ವರ: ಮಂಜೇಶ್ವರ ತಪಾಸಣ ಕೇಂದ್ರದಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2400 ಟೆಟ್ರೋ ಪ್ಯಾಕೆಟ್ (432 ಲೀಟರ್) ಮದ್ಯವನ್ನು ವಶಪಡಿಸಲಾಗಿದೆ. ಈ ಸಂಬಂಧ ಮಂಗಳೂರು ಜಪ್ಪಿನಮೊಗರು ಗೋರಿಗುಡ್ಡೆ ಲೋಬೋ ಕಾಂಪೌಂಡ್‌ನ ಬಾಲಕೃಷ್ಣ (50) ನನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಿದ ಕಾರನ್ನು ವಶಪಡಿಸಲಾಗಿದೆ.
ಮದ್ಯ ಸಹಿತ ಬಂಧನ
ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತೆಕ್ಕಿಲ್ ಚಟ್ಟಂಚಾಲ್‌ನಿಂದ 1.98 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮೈಲಾಟಿಯ ಪ್ರಶಾಂತ್(34)ನನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಲು ಬಳಸಿದ ಬೈಕನ್ನು ವಶಪಡಿಸಿದ್ದಾರೆ.
ಬೈಕ್ ಕಳವುಗೈದು ಬಿಡಿ ಭಾಗಗಳ ಮಾರಾಟ
ಕಾಸರಗೋಡು: ಬೈಕ್‌ಗಳನ್ನು ಕಳವುಗೈದು ಬಿಡಿ ಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ ತೃಶ್ಶೂರು ನಿವಾಸಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರೈಲು ಗಾಡಿಗೆ ಮತ್ತೆ ಕಲ್ಲೆಸೆತ
ಕುಂಬಳೆ: ರೈಲು ಗಾಡಿಗೆ ಮತ್ತೆ ಕಲ್ಲೆಸೆತ ನಡೆದಿದೆ. ತಿರುವನಂತಪುರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಸೆ. 1ರಂದು ರಾತ್ರಿ 9 ಗಂಟೆಗೆ ಕುಂಬಳೆ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ರೈಲಿನ ಬಾಗಿಲಿನ ಗಾಜಿಗೆ ತಗಲಿದ್ದು, ಗಾಜು ಪುಡಿಯಾಗಿದೆ. ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರು, ಕುಂಬಳೆ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ.
ಮಟ್ಕಾ : ಬಂಧನ
ಕುಂಬಳೆ: ಇಲ್ಲಿನ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಕೊಯಿಪ್ಪಾಡಿಯ ಗೋಪಾಲಕೃಷ್ಣ (49)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 860 ರೂ. ವಶಪಡಿಸಿಕೊಳ್ಳಲಾಗಿದೆ.
ರಬ್ಬರ್ ಶೀಟ್ ಸಹಿತ ಕಳವು : ಬಂಧನ
ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರಿನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ 15 ಕ್ವಿಂಟಾಲ್ ರಬ್ಬರ್ ಶೀಟ್ ಸಹಿತ ವಿವಿಧ ಸಾಮಗ್ರಿಗಳನ್ನು ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಟ್ಯಾಪಿಂಗ್ ಕಾರ್ಮಿಕ ನೆಟ್ಟಣಿಗೆಯ ಜನಾರ್ದನನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 2,30,000 ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಯುವತಿ ನಾಪತ್ತೆ
ಕುಂಬಳೆ: ಕೆಲಸಕ್ಕೆಂದು ತಿಳಿಸಿ ಹೋದ ಬಂದ್ಯೋಡು ಮಳ್ಳಂಗೈಯ ಜಯಕರ ಶೆಟ್ಟಿ ಅವರ ಪುತ್ರಿ ಶ್ರೇಯಾ (23) ನಾಪತ್ತೆಯಾಗಿರುವುದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಂಬಳೆ ಎಸ್.ಐ.ಗೆ ಬೆದರಿಕೆ
ಆರೋಪಿಯ ಮಾಹಿತಿ ಲಭ್ಯ
ಕುಂಬಳೆ: ಕುಂಬಳೆ ಠಾಣೆಯಲ್ಲಿ ಎಸ್.ಐ. ಆಗಿದ್ದ ರಜಿತ್ ಹಾಗೂ ಅವರ ಕುಟುಂಬಕ್ಕೆ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.