FIR: ಕೇಂದ್ರ ಸಚಿವನ ಪುತ್ರನ ವಿರುದ್ಧ ಎಫ್ಐಆರ್
Team Udayavani, Sep 2, 2023, 9:23 PM IST
ಲಕ್ನೋ: ಕೊಲೆ ಪ್ರಕರಣದಲ್ಲಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರ ವಿಕಾಸ್ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರವಾನಗಿಯಿದ್ದ ವಿಕಾಸ್ ಅವರ ಪಿಸ್ತೂಲನ್ನು ಬಳಸಿಕೊಂಡ ಮೂವರು ವ್ಯಕ್ತಿಗಳು, ವಿಕಾಸ್ ಆಪ್ತಸ್ನೇಹಿತನನ್ನು ವಿಕಾಸ್ ಮನೆಯಲ್ಲೇ ಹತ್ಯೆ ಮಾಡಿದ್ದರು. ಈ ವೇಳೆ ವಿಕಾಸ್ ದೆಹಲಿಯಲ್ಲಿದ್ದರು. ಬಳಕೆಯಾದ ಪಿಸ್ತೂಲ್ ಇವರದ್ದಾದ ಕಾರಣ ಶಸ್ತ್ರಾಸ್ತ್ರ ಕಾಯಿದೆಯಡಿ ಈ ಪ್ರಕರಣ ದಾಖಲಾಗಿದೆ.
ಆಗಿದ್ದೇನು?: ಉತ್ತರಪ್ರದೇಶದ ಲಕ್ನೋ ಹೊರವಲಯದಲ್ಲಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ, ವಿನಯ್ ಶ್ರೀವಾಸ್ತವ (30) ಹತ್ಯೆಗೀಡಾಗಿದ್ದರು. ಬಂಧಿತರು ಮತ್ತು ವಿನಯ್ ಗುರುವಾರ ರಾತ್ರಿ ಇಸ್ಪೀಟ್ ಆಡಿದ್ದಾರೆ. ಈ ವೇಳೆ ವಿನಯ್ 12,000 ರೂ. ಕಳೆದುಕೊಂಡಿದ್ದಾರೆ. ಆಟ ಮುಂದುವರಿಸಲು ನಿರಾಕರಿಸಿದ ಆರೋಪಿಗಳು ಮತ್ತು ವಿನಯ್ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿಗಳು, ಕೊಠಡಿಯಲ್ಲಿ ದಿಂಬಿನ ಕೆಳಗೆ ಇಟ್ಟಿದ್ದ ವಿಕಾಸ್‌ರ ಬಂದೂಕಿನಿಂದ ವಿನಯ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆ ವೇಳೆ ವಿಕಾಸ್ ದೆಹಲಿಯಲ್ಲಿ ಇದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ಅಜಯ್ ರಾವತ್, ಅಂಕಿತ್ ವರ್ಮಾ ಮತ್ತು ಶಮೀಮ್ ಅಲಿಯಾಸ್ ಬಾಬಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.