Assam flood: ಈಶಾನ್ಯ ರಾಜ್ಯದಲ್ಲಿ ನೆರೆ; 2.42 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರು
Team Udayavani, Sep 2, 2023, 9:48 PM IST
ಗುವಾಹಟಿ: ಅಸ್ಸಾಂನ ಪ್ರವಾಹ ಪರಿಸ್ಥಿತಿ ಸುಧಾರಿಸಿದ್ದು, ಶನಿವಾರದಂದು ಪೀಡಿತರ ಸಂಖ್ಯೆ 2.5 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಪ್ರವಾಹದಿಂದಾಗಿ ಶನಿವಾರ ಒಂದು ಸಾವು ಸಂಭವಿಸಿದ್ದು, ಈ ವರ್ಷ ನೆರೆಗೆ ಸಾವಿನ ಸಂಖ್ಯೆ 17 ಕ್ಕೆ ತಲುಪಿದೆ ಎಂದು ಅಧಿಕೃತ ಬುಲೆಟಿನ್ ತಿಳಿಸಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) 18 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, 2,42,515 ಜನರ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆ ನಲ್ಬರಿಯಾಗಿದ್ದು, 72,427 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ, ನಂತರದ ಸ್ಥಾನದಲ್ಲಿ ದರ್ರಾಂಗ್ (69,112)ಜಿಲ್ಲೆ ಇದೆ. ಶುಕ್ರವಾರ 18 ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 3,24,938 ಆಗಿತ್ತು.
ಎಎಸ್ಡಿಎಂಎ ಬುಲೆಟಿನ್ ಪ್ರಕಾರ ದರ್ರಾಂಗ್ ಜಿಲ್ಲೆಯಲ್ಲಿ ಒಂದು ಸಾವು ವರದಿಯಾಗಿದೆ, ಬ್ರಹ್ಮಪುತ್ರ ನದಿಯು ಧುಬ್ರಿ, ಗೋಲ್ಪಾರಾ, ಗುವಾಹಟಿ, ತೇಜ್ಪುರ ಮತ್ತು ನೇಮತಿಘಾಟ್ನಲ್ಲಿ ರೆಡ್ ಲೈನ್ ಮೇಲೆ ಹರಿಯುತ್ತಲೇ ಇದೆ.ಒಟ್ಟಾರೆಯಾಗಿ, 2,169 ಸಂತ್ರಸ್ತ ಜನರು ಪ್ರಸ್ತುತ ಏಳು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು 43 ಪರಿಹಾರ ವಿತರಣಾ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ. ಒಟ್ಟು 15,670.85 ಹೆಕ್ಟೇರ್ ಪ್ರದೇಶದ ಬೆಳೆ ಜಲಾವೃತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.